Wednesday, November 2, 2011

ಪುರಭವನದಲ್ಲಿ ರಾಜ್ಯೋತ್ಸವ ಸಾಂಸ್ಕೃತಿಕ ರಸಸಂಜೆ

ಮಂಗಳೂರು,ನವೆಂಬರ್.02: ಕನ್ನಡ ರಾಜ್ಯೋತ್ಸವದಂದು ಮಂಗಳೂರಿನ ಪುರಭವನದಲ್ಲಿ ಇಳಿಹೊತ್ತಿನಲ್ಲಿ ಮಂಗಳೂರಿನ ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯ 90ಕ್ಕೂ ಹೆಚ್ಚು ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಜೇಶ್ವರದ ನಾಟ್ಯಾಲಯ ಕಲಾತಂಡದವರು ನಡೆಸಿಕೊಟ್ಟ ಶಾಸ್ತ್ರೀಯ ಹಾಗೂ ಜನಪದ ನೃತ್ಯ ಕಾರ್ಯಕ್ರಮಗಳು ಸಭಿಕರ ಮನಸೂರೆ ಗೊಂಡಿತು.


ಹೊತ್ತಿತೋ ಹೊತ್ತಿತೋ ಕನ್ನ ಡದ ದೀಪ, ಹಚ್ಚೇವು ಕನ್ನ ಡದ ದೀಪ, ನಾವಾ ಡುವ ನುಡಿಯೇ ಕನ್ನಡ ನುಡಿ, ಹುಟ್ಟಿ ದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಇನ್ನೂ ಮುಂ ತಾದ ಹಾಡು ಗಳಿಗೆ ಮಕ್ಕಳು ಹಾವ ಭಾವ ಗಳಿಂದ, ತಾಳ,ಲಯಕ್ಕೆ ತ ಕ್ಕಂತೆ ಹೆಜ್ಜೆ ಗಳನ್ನು ಗೆಜ್ಜೆಯ ನಿನಾದ ದೊಂದಿಗೆ ಹಾಕಿ ಅಭಿನ ಯಿಸಿದ್ದು ಪ್ರೇಕ್ಷ ಕರನ್ನು ಮಂತ್ರ ಮುಗ್ಧ ರನ್ನಾ ಗಿಸಿತು.ನಂತ ರದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋ ಜಿಸ ಲಾದ ಮಂಜೇ ಶ್ವರದ ನಾಟ್ಯಾ ಲಯ ತಂಡ ದವರು ಅಭಿನ ಯಿಸಿದ ಶಾ ಸ್ತ್ರೀಯ ಹಾಗೂ ಜನ ಪದ ನೃತ್ಯ,ಕೂಚು ಪುಡಿ ನೃತ್ಯಗಳು ಸಭಾಂ ಗಣದ ಲ್ಲಿದ್ದ ಸಭಿ ಕರನ್ನು ಸೂಜಿ ಗಲ್ಲಿ ನಂತೆ ಆಕ ರ್ಷಿಸಿ, ಸಭಿ ಕರು ಕಾರ್ಯ ಕ್ರಮ ಮಗಿಯುವವರೆಗೆ ನಿಂತು ಕಾರ್ಯಕ್ರಮ ನೀಡಿದ ತಂಡದವರಿಗೆ ಮೆಚ್ಚುಗೆ ಸೂಚಿಸಿದರು. ತಾಳ, ತಾನ ಪಲ್ಲವಿಗಳು ಮೇಳೈಸಿದ ಗಾನ, ಗಾನಕ್ಕೆ ತಕ್ಕ ನಾಟ್ಯಾಭಿನಯ ಸಹೃದಯ ಸಭಿಕರ ಮನಸೂರೆಗೊಂಡಿತು.
ಲಕ್ಷ್ಮೀ ಬಾರಮ್ಮ, ದೇವಿಸ್ತುತಿ, ಭಾಗ್ಯದ ಬಳೆಗಾರ ಹೋಗಿ ಬಾ ತವರಿಗೆ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಎಂಬ ಹಾಡುಗಳಿಗೆ ನಾಟ್ಯಕಲಾವಿದರು ಜೀವತುಂಬಿದರು. ಬಾಲಕೃಷ್ಣ ಮಾಸ್ಟರ್ ಅವರ ನೇತೃತ್ವದ ಹಿಮ್ಮೇಳದ ಸಂಗೀತ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಹಿಮ್ಮೇಳ ಕಲಾವಿದರು ನೇಪಥ್ಯಕ್ಕೆ ಸರಿಯುವಂತಹ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ನೆರವಾಗುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾಟ್ಯಾಲಯದವರು ಧನ್ಯವಾದ ಸಮರ್ಪಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ ನಾಯಕ್, ವಿದ್ಯಾಂಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್ , ಬಿ ಇ ಒ ದಯಾವತಿ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.