Tuesday, November 2, 2010

ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಮಂಗಳೂರು,ನವೆಂಬರ್ 02:ನಗರದ ಮಹಿಳಾ ಸಭಾದಲ್ಲಿ ಇಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹ ಯೋಗದೊಂದಿಗೆ ಮಹಿಳಾ ಉದ್ಯಮಿಗಳು, ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದಿಸಿದ ವಸ್ತುಗಳ ಮೂರು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ರಾಜ್ಯ ಬಂದರು, ಪರಿಸರ, ಜೀವಿ ಶಾಸ್ತ್ರ, ಮುಜ ರಾಯಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಉದ್ಘಾಟಿ ಸಿದರು.ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರ ದ್ವಾಜ,ಮೇಯರ್ ರಜನಿ ದುಗ್ಗಣ್ಣ, ವ್ಯವ ಸ್ಥಾಪಕ ನಿರ್ದೇಶ ಕರಾದ ಶಾಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶಕುಂತಳಾ,ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿ ಗಳು ಕಾರ್ಯ ಕ್ರಮದಲ್ಲಿ ಉಪ ಸ್ಥಿತರಿದ್ದರು.