
ಅವರಿಂದು ತಮ್ಮ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಅಕ್ರಮ ಮರಳುಗಾರಿಕೆ ತಡೆ ಸಂಬಂದ ಪ್ರಸಕ್ತ ಸಮಸ್ಯೆ ಬಗೆಹರಿಸಲು ಕರೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಪ್ರಸಕ್ತ ಅಕ್ರಮ ಮರಳು ತಡೆಗೆ ರೂಪಿತ ಕಾನೂ ನನ್ನು ಇನ್ನಷ್ಟು ಸಮಗ್ರ ವಾಗಿ ರೂಪಿಸಿ ಅನು ಷ್ಠಾನಕ್ಕೆ ತರಲು ಹಾಗೂ ಗುರಿ ನಿಗದಿ ಪಡಿಸು ವಂತೆ ಅಧಿಕಾರಿ ಗಳಿಗೆ ಸೂಚಿಸಿ ದರು.ಗಡಿ ರಸ್ತೆ ಗಳಲ್ಲಿ ಈ ಗಾಗಲೇ ಕೈ ಗೊಂಡಿ ರುವ ಬಂದೋಬಸ್ತ್ ಮತ್ತು ಚೆಕ್ ಪೋಸ್ಟ್ ಗಳನ್ನು ಇನ್ನಷ್ಟು ಬಲಪಡಿಸಲು ಹಾಗೂ ಗಡಿ ಪ್ರದೇಶಗಳ ರಸ್ತೆಯಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಿದರು. ಸ್ಥಳೀಯ ಪಂಚಾಯಿತಿಗಳ, ಮುಖಂಡರ ಹಾಗೂ ಜನರ ಸಹಕಾರವನ್ನು ಗಳಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸ ಬೇಕೆಂದು ಸೂಚಿಸಿದರು. ಮರಳು ತೆಗೆಯುವ ಪ್ರದೇಶ ವನ್ನು ಮತ್ತೊಮ್ಮೆ ಸರ್ವೇ ಮಾಡಿಸಿ, ಕಾನೂನು ಅನುಷ್ಠಾನಕ್ಕೆ ಬಿಗಿ ಕ್ರಮ ಕೈ ಗೊಳ್ಳ ಲಾಗುವುದು ಎಂದರು.