Wednesday, November 17, 2010

ಹಣಕಾಸು ನಿರ್ವಹಣೆ ದೇಶದಲ್ಲೇ ಪ್ರಥಮ:ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ

ಮಂಗಳೂರು ನ.17: ರಾಜ್ಯ ಸರಕಾರಕ್ಕೆ ಹಣಕಾಸು ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಲಭಿಸಿದೆ.ಭಾರತೀಯ ರಿಸರ್ವ ಬ್ಯಾಂಕ್ ಸಹ ರಾಜ್ಯ ಸರ್ಕಾರದ ಕಾರ್ಯ ನಿರ್ವಹಣೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದೆ. ಕೇಂದ್ರ ಸರಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದೊರೆತಿದೆ. ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ 400 ಉದ್ದಿಮೆದಾರರ ಪೈಕಿ 150 ಮಂದಿ ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಲು ಕ್ರಮ ಆರಂಭಿಸಿದ್ದಾರೆ. ಇಂತಹ ಪ್ರಗತಿಯನ್ನು ಸಹಿಸಲಾಗದ ಪ್ರತಿಪಕ್ಷಗಳು ಸತ್ಯವನ್ನು ಮರೆಮಾಚಿ ಗೊಂದಲ ಎಬ್ಬಿಸಲು ಪ್ರಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಜ್ಯದಲ್ಲಿ 11.50 ಲಕ್ಷ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸವಲತ್ತು ವಿತರಿ ಸಲಾ ಗುತ್ತಿದೆ. ಮುಂದಿನ ಮೂರು ವರ್ಷ ದಲ್ಲಿ 15 ಲಕ್ಷ, ಹೆಣ್ಣು ಮಕ್ಕಳಿಗೆ ಸ್ವಾವ ಲಂಬಿ ಜೀವನ ನಡೆಸಲು ಅನುಕೂ ಲವಾಗು ವಂತೆ ಕಡಿಮೆ ಬಡ್ಡಿ ದರದ ಸಾಲ ವಿತರಿ ಸಲಾ ಗುವುದು. ಅಸಂಘ ಟಿತ ವಲಯ ದಲ್ಲಿ ದುಡಿಯುತ್ತಿರುವವರಿಗೆ ನೆರವಾಗಲು 500ಕೋಟಿ ರೂ. ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
ರಾಜ್ಯ ಸರಕಾರ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಹಾಗೂ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಿದ್ದು ರಾಜ್ಯ ಸರ್ಕಾರದ ಬಹು ದೊಡ್ಡ ಸಾಧನೆ ಎಂದರು.
ಭೂ ಹಗರ ಣಗಳ ಸಮಗ್ರ ತನಿಖೆ:ರಾಜ್ಯ ದಲ್ಲಿ ಕೇಳಿ ಬಂದಿ ರುವ ಭೂ ಹಗರ ಣಗಳ ಬಗ್ಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾ ಧೀಶ ರಿಂದ ಸಮಗ್ರ ತನಿಖೆ ನಡೆಸ ಲಾಗು ವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.ಬುಧವಾರ ಬಿಜ್ಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ಕಳೆದ 10 ವರ್ಷಗಳಲ್ಲಿ ಆಗಿರುವ ಕೆಐಎಡಿಬಿ ಭೂಮಿ ಮಂಜೂರು, ಸಿಎಂ ಸೈಟ್ ಹಂಚಿಕೆ ಮತ್ತು ಡೀನೋಟಿಫೈ ಕುರಿತು ತನಿಖೆ ನಡೆಸಿ ರಾಜ್ಯದ ಜನರಿಗೆ ಮಾಹಿತಿ ಒದಗಿಸಲಾಗುವುದು. ಈ ಕುರಿತು ಆದಷ್ಟು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ಕಾನೂನಿನ ಚೌಕಟ್ಟಿನಲ್ಲಿ ರಾಜಕಾರಣಿಗಳ ಸಂಬಂಧಿಕರು ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿರಬಹುದು. ಇದು ಕಾನೂನುಬಾಹಿರ ಆಗಿದ್ದರೆ; ಪ್ರತಿಪಕ್ಷ ನಾಯಕರು ಬಯಸಿದರೆ ಅಧಿವೇಶನದಲ್ಲಿ ಎರಡು ದಿನಗಳ ಚರ್ಚೆಗೆ ಅವಕಾಶ ನೀಡಲು ಕೂಡಾ ಸಿದ್ಧನಿದ್ದೇನೆ ಎಂದರು. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಭೂಮಿ ಡೀನೋಟಿಫೈ ಮಾಡಲಾಗುವುದಿಲ್ಲ. ಸಿಎಂ ಕೋಟಾದಲ್ಲಿ ಸೈಟ್ ಗಳ ವಿತರಣೆ ಕೂಡಾ ಮಾಡಲಾಗುವುದಿಲ್ಲ. ಇದಕ್ಕಾಗಿ ಅಧಿಕಾರಿಗಳ ಸಮಿತಿ ರಚಿಸಿ ಆ ಅಧಿಕಾರವನ್ನು ಆ ಸಮಿತಿಗೇ ನೀಡಲಾಗುವುದು ಎಂದು ಅವರು ತಿಳಿಸಿದರು.
ಬಜ್ಪೆಯಲ್ಲಿ ಸ್ವಾಗತ:ಉಡುಪಿ ಮತ್ತು ಪುತ್ತೂರಿನಲ್ಲಿ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸೀರೆ ವಿತರಿಸಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಆಗಮಿಸಿದರು.ಬಜ್ಪೆ ವಿಮಾನ ನಿಲ್ದಾಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉನ್ನತ ಶಿಕ್ಷಣ ಸಚಿವ ಡಾ| ವಿ.ಎಸ್. ಆಚಾರ್ಯ,ಸಂಸದರಾದ ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ, ಶಾಸಕರಾದ ಎನ್. ಯೋಗೀಶ್ ಭಟ್, ಮೇಯರ್ ರಜನಿ ದುಗ್ಗಣ್ಣ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಮೇಯರ್ ರಾಜೇಂದ್ರ ಕುಮಾರ್ ಮುಂತಾದವರು ಸ್ವಾಗತಿಸಿದರು.
ಐಜಿಪಿ ಗೋಪಾಲ್ ಹೊಸೂರ್ ,ಜಿಲ್ಲಾಧಿಕಾರಿ ಸುಭೋದ್ ಯಾದವ್, ಐಜಿಪಿ ಅಲೋಕ್ ಮೋಹನ್, ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ಮನಪಾ ಆಯುಕ್ತ ವಿಜಯಪ್ರಕಾಶ್ ಜಿ.ಪಂ. ಸಿಇಓ ಶಿವಶಂಕರ್ ಮುಂತಾದವರು ಹಾಜರಿದ್ದರು.