Tuesday, November 2, 2010

ಮಂಗಳೂರಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಶೀಘ್ರದಲ್ಲೇ ಸ್ವಂತ ಕಟ್ಟಡ: ಸರೋಜಿನಿ ಭಾರದ್ವಾಜ

ಮಂಗಳೂರು, ನ.2: ಮಹಿಳಾ ಮತ್ತು ಅಭಿವೃದ್ಧಿ ನಿಗಮಕ್ಕೆ ಮಂಗಳೂರಿನಲ್ಲಿ ಶೀಘ್ರದಲ್ಲೇ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಸರಕಾರ ನಿವೇಶನ ನೀಡಿದ್ದು, ಈ ಕಟ್ಟಡದಲ್ಲಿ ಸ್ತ್ರೀ ಶಕ್ತಿ ಹಾಗೂ ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ ತಿಳಿಸಿದ್ದಾರೆ. ನಗರದ ಮಹಿಳಾ ಸಭಾದಲ್ಲಿ ಇಂದು ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹ ಯೋಗ ದೊಂದಿಗೆ ಮಹಿಳಾ ಉದ್ಯಮಿಗಳು, ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದಿಸಿದ ವಸ್ತುಗಳ ಮೂರು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯ ಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಮಂತ್ರಿ ಬಿ.ಎಸ್.ಯಡಿ ಯೂರಪ್ಪ ನೇತೃತ್ವದ ಸರಕಾರ ಮಹಿಳೆ ಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ ಬಜೆಟ್ ನಲ್ಲಿ ನಿಗಮಕ್ಕೆ 48 ಕೋಟಿ ರೂ. ಅನುದಾನ ನಿಗದಿ ಯಾಗಿದ್ದು,2011-12 ರ ಬಜೆಟ್ ನಲ್ಲಿ 100 ಕೋಟಿ ರೂ.ಗಳ ಅನುದಾ ನವನ್ನು ಒದಗಿಸು ವುದಾಗಿ ಇಂಧನ ಸಚಿವೆ ಶೋಭ ಕರಂದ್ಲಾಜೆ ಅವರು ಭರವಸೆ ನೀಡಿದ್ದಾರೆ ಎಂದು ನಿಗಮದ ಅಧ್ಯಕ್ಷರು ತಿಳಿಸಿದರು.ಮಹಿಳೆಯರು ಸ್ವಯಂ ಉದ್ಯೋಗಿ ಗಳಾಗಲು ಉದ್ಯೋಗಿನಿ ಯೋಜನೆ ಯಡಿ ಸಹಾಯ ಧನ ನೀಡಲಾ ಗುವುದು. ವಿಶೇಷ ವರ್ಗದ ಮಹಿಳೆಯರಿಗೆ ಯೋಜನಾ ವೆಚ್ಚದ ಶೇ.30 ರಷ್ಟು ಹಾಗೂ ಇತರೆ ಮಹಿಳೆಯರಿಗೆ ಶೇ.20ರಷ್ಟು ನಿಗಮ ದಿಂದ ಸಹಾಯ ಧನ ನೀಡ ಲಾಗುವುದು. ಆಸರೆ ಯೋಜನೆ ಯಡಿ ವಿಧವೆಯರಿಗೆ ಅಸಾ ಹಯಕ ಮಹಿಳೆ ಯರಿಗೆ ಅಂಗ ವಿಕಲ ಮಹಿಳೆ ಯರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ಅಲ್ಪ ಸಂಖ್ಯಾತ ಮಹಿಳೆ ಯರಿಗೆ ಆದ್ಯತೆ ನೀಡಲಾ ಗುವುದು ಎಂದರು.ನಿಗಮದ ಯೋಜನೆ ಗಳನ್ನು ಸಮಾಜದ ಕಟ್ಟ ಕಡೆಯ ಮಹಿಳೆಗೆ ತಲುಪಿಸುವ ಉದ್ದೇಶ ದಿಂದ ತಾವು ಸದ್ಯದಲ್ಲೇ ಗ್ರಾಮ ವಾಸ್ತವ್ಯ ಹಾಗೂ ಗ್ರಾಮ ಸಭೆಗಳನ್ನು ನಡೆಸುವ ಯೋಜನೆ ಹೊಂದಿರು ವುದಾಗಿ ಹೇಳಿದ ಅವರು, ನಿವೇಶನ ಹೊಂದಿದ್ದು, ವಸತಿ ಸೌಕರ್ಯ ಇಲ್ಲದ 5000 ದೇವ ದಾಸಿ ವೃತ್ತಿ ತೊರೆದು ಹೊರ ಬಂದವರಿಗೆ ವಸತಿ ನಿರ್ಮಿಸಲು 20 ಕೋಟಿ ರೂ.ಗಳ ಅನುದಾ ನವನ್ನು ನಿಗಮದ ವತಿಯಿಂದ ಒದಗಿಸುವ ನೂತನ ಯೋಜನೆ ಯನ್ನು ನಿಗಮ ಹಮ್ಮಿ ಕೊಂಡಿದೆ ಎಂದರು. ಮಹಿಳೆಯರು ಆರ್ಥಿಕ ವಾಗಿ ಸ್ವಾವ ಲಂಬಿಗ ಳಾಗಲು ಹಾಗೂ ಉದ್ಯಮ ಶೀಲತೆ ಬೆಳೆಸಲು ಕೌಶಲ್ಯ ತರಬೇತಿ, 3250 ಮಹಿಳೆ ಯರಿಗೆ 235 ಲಕ್ಷ ರೂ. ವೆಚ್ಚದಲ್ಲಿ ವಿವಿಧ ತರಬೇ ತಿಗಳನ್ನು ನೀಡ ಲಾಗುತ್ತಿದೆ. 45 ವರ್ಷ ಮೀರಿದ ದೇವ ದಾಸಿ ವೃತ್ತಿ ತೊರೆದು ಹೊರ ಬಂದವರಿಗೆ ಮಾಸಿಕ 400 ರೂ.ಗಳ ಮಾಸಾಶನ ಮಂಜೂರು ಮಾಡ ಲಾಗಿದ್ದು, ವಾರ್ಷಿಕ ವೆಚ್ಚ 800 ಲಕ್ಷ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡ ಲಾಗುವುದು. ಒಟ್ಟು 15730 ದೇವ ದಾಸಿ ವೃತ್ತಿ ತೊರೆದು ಹೊರ ಬಂದವರಿಗೆ ಮಾಶಾಸನ ಒದಗಿ ಸಲಾಗುತ್ತಿದೆ ಎಂದು ಸರೋಜಿನಿ ತಿಳಿಸಿದರು. ಮಹಿಳಾ ಉದ್ಯಮಿ ಗಳನ್ನು ಮತ್ತು ಸಮರ್ಥ ಗ್ರಾಹಕರನ್ನು ಒಂದು ಗೂಡಿಸಿ ಮಹಿಳಾ ಉದ್ದಿಮೆ ದಾರರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ವನ್ನು ನಿಗಮದ ವತಿಯಿಂದ ಒದಗಿಸ ಲಾಗುತ್ತಿದೆ ಎಂದು ಸರೋಜಿನಿ ತಿಳಿಸಿದರು. ಪತ್ರಿಕಾ ಗೋಷ್ಠಿ ಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮೇಯರ್ ರಜನಿ ದುಗ್ಗಣ್ಣ, ವ್ಯವಸ್ಥಾಪಕ ನಿರ್ದೇಶ ಕರಾದ ಶಾಂತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶಕುಂತಳಾ ಮತ್ತಿರರು ಉಪಸ್ಥಿತರಿದ್ದರು.