Wednesday, November 3, 2010

ಜಿಲ್ಲೆಯ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ-ಸುಬೋಧ್ ಯಾದವ್

ಮಂಗಳೂರು,ನವೆಂಬರ್ 03:ರಾಜ್ಯ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದನ್ವಯ ಪ್ರಗತಿ ಕುಂಠಿತವಾಗಿರುವುದನ್ನು ಜಿಲ್ಲಾಧಿಕಾರಿಯವರು ಗಮನಿಸಿ,ಕಾಮಗಾರಿಗಳನ್ನು ಸಮಯಮಿತಿ ನಿಗದಿಪಡಿಸಿ ಪೂರ್ಣಗೊಳಿಸುವಂತೆ ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರ ಪಂಚಾಯತ್ ಗಳ ಮುಖ್ಯಾಧಿಕಾರಿಗಳು, ಕಮ್ಯುನಿಟಿ ಅಫೇರ್ಸ್ ಅಧಿಕಾರಿ, ಕಿರಿಯ ಅಭಿಯಂತ ರರನ್ನು ಒಳಗೊಂಡಂತೆ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ ನಾಡುತ್ತಿದ್ದರು.ಘನ ತ್ಯಾಜ್ಯ ವಸ್ತು ವಿಲೆ ಕುರಿತು ನಗರ ಸ್ಥಳೀಯ ಸಂಸ್ಥೆಗಳಿಗೆ ಜಮೀನನ್ನು ಗುರುತಿಸ ಲಾಗಿದ್ದರೂ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಸ್ತುಗಳನ್ನು ವಿಲೆ ಮಾಡುವಲ್ಲಿ ವಿಫಲವಾಗಿ ರುವುದನ್ನು ಜಿಲ್ಲಾಧಿಕಾರಿ ಯವರು ಗಮನಿಸಿ ನಗರ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳನ್ನು ಒಳಪಡಿಸಿಕೊಂಡು ಮುಖ್ಯಾಧಿಕಾರಿಯವರು ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಿ ಮಾಹಿತಿಯ ಮೂಲಕವೇ ಶೀಘ್ರ ಪ್ರಗತಿ ಸಾಧಿಸಲು ಸೂಚಿಸಿದರು.
ರಸ್ತೆ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ವ್ಯವಹಾರ ಮಾಡುವಂತಹ ಗೂಡಂಗಡಿ ಶೆಡ್ಡುಗಳಿದ್ದಲ್ಲಿ ಅಂತಹವುಗಳನ್ನು ಖುಲಾಸೆ ಪಡಿಸಲು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಅತಿಕ್ರಮಣಗಳಿಗೆ ಅವಕಾಶ ನೀಡದಂತೆ ಮುಖ್ಯಾಧಿಕಾರಿಯವರಿಗೆ ತಿಳಿಸಿದರು.
ಪುರಸಭೆಯ ಮುಖ್ಯಾಧಿಕಾರಿಯವರು ಸ್ವಯಂಘೋಷಿತ ಆಸ್ತಿ ತೆರಿಗೆ ವಸೂಲಿಯಲ್ಲಿ ಶೇಕಡಾ 75 ರಷ್ಟು ವಸೂಲು ಮಾಡಲು ತಿಳಿಸಿದರು. ಕುಡಿಯುವ ನೀರಿನ ಮೊತ್ತವನ್ನು ನಿಗಧಿತ ಅವಧಿಯೊಳಗೆ ಪಾವತಿಸದೇ ಇರುವ ಬಳಕೆದಾರರ ನಳ್ಳಿ ನೀರಿನ ಜೋಡಣೆಯನ್ನು ಕಡಿತಗೊಳಿಸಲು ಸಭೆಯಲ್ಲಿ ಸೂಚನೆ ನೀಡಿದರು.