Monday, November 8, 2010

ಚತುಷ್ಪಥ ಕಾಮಗಾರಿ ಚುರುಕುಗೊಳಿಸಲು ಸಮನ್ವಯ ಸಮಿತಿ ಸಭೆ

ಮಂಗಳೂರು, ನವೆಂಬರ್ 08: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಸಮಯಮಿತಿಯೊಳಗೆ ಮುಗಿಸಿ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ತುರ್ತಾಗಿ ನೀಡಿ ಎಂದು ಜಿಲ್ಲಾಧಿಕಾರಿ ಸುಭೋಧ್ ಯಾದವ್ ಅವರು ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾ ಡುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ಕಾನೂನನ್ನು ಪ್ರತಿ ಪಾದಿಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕಾಮಗಾರಿ ವಿಳಂಬದಿಂದಾಗಿ ಹಲವು ಸಮಸ್ಯೆಗಳು ಉದ್ಭವ ವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ, ಮೆಸ್ಕಾಂ ಸಮನ್ವಯದಿಂದ ಮಾತುಕತೆಯ ಮೂಲಕ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗವಸಾನೆಯವರು ತಮ್ಮ ಪ್ರಾಧಿಕಾರ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರೆ, ಇತರ ಇಲಾಖೆಗಳು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿರಿಸಿದರು. ಜಾಗ ಒತ್ತುವರಿ ಸೇರಿದಂತೆ ಮಳೆಯಿಂದಾಗುವ ಸಮಸ್ಯೆಗಳು, ಜನರ ಮನವೊಲಿಸುವಿಕೆ ವಿಫಲವಾದದ್ದು, ನೀರಿನ ಪೈಪ್, ಫೋನ್ ಲೈನ್ ಗಳಿಗೆ ಪಯರ್ಾಯ ಕಂಡುಕೊಳ್ಳಲು ಇಲಾಖಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕುಳಿತು ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಿ ಎಂದರು.
ಸುರತ್ಕಲ್ ನಿಂದ ಬಂಟ್ವಾಳ ಬಿ .ಸಿ.ರೋಡು ವರೆಗಿನ ಚತುಷ್ಫಥ 2007 ರೊಳಗೆ ಮುಗಿದಿರಬೇಕಾಗಿದ್ದು, ಇನ್ನೂ ಮುಂದುವರಿದಿದೆ, ಆದರೆ 61 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಇದರಲ್ಲಿ 25 ಲಕ್ಷ ರೂ. ಮಾತ್ರ ನೀಡಲು ಬಾಕಿ ಇದೆ ಎಂದರು. ಸೆಕ್ಷನ್ 2 ರಡಿ ನಂತೂರಿನಿಂದ ತಲಪಾಡಿ ರಸ್ತೆ ನಿಮರ್ಮಾಣವಾಗಲಿದ್ದು, ರಸ್ತೆ ಹಾದು ಹೋಗಲಿರುವ 7 ಹಳ್ಳಿಗಳಿಗೆ ಪ್ರಥಮ ಹಂತದ ನೋಟೀಸು ನೀಡಲಾಗಿದೆ. ಇದರಡಿ ಪಂಪ್ ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಎರಡು ಫ್ಲೈ ಓವರ್ ಗಳು ಬರಲಿವೆ ಎಂದರು. ಕೂಳೂರಿನಿಂದ ಮುಲ್ಕಿ ವರೆಗೆ ಯುಟಿಲಿಟಿ ಶಿಫ್ಟಿಂಗ್, ಎಲೆಕ್ಟ್ರಿಕಲ್ ವ್ಯವಸ್ಥೆಗೆ, ಮರಕಡಿಯಲು ಹಣ ಪಾವತಿಸಲಾಗಿದೆ ಎಂದು ಗವಸಾನೆ ಸಭೆಗೆ ಮಾಹಿತಿ ನೀಡಿದರು.
ಸುರತ್ಕಲ್ ಫ್ಲೈಓವರ್ ಕಾಮಗಾರಿ ಸಂಬಂಧ ಕೋರ್ಟ್ ನಲ್ಲಿದ್ದ ವ್ಯಾಜ್ಯ ವಜಾ ಗೊಂಡಿದ್ದು, ಬಳಿಯಲ್ಲಿರುವ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯಿಂದ ದರ ನಿಗದಿಪಡಿಸುವ ಹಂತದಲ್ಲಿದೆ. ಇದಾದ ತಕ್ಷಣವೇ ಅಲ್ಲಿನ ಕಾಮಗಾರಿ ಸಂಪೂರ್ಣ ಗೊಳ್ಳಲಿದೆ ಎಂದರು. ಪಡೀಲಿನಿಂದ ತುಂಬೆ ವರೆಗೆ ನೀರಿನ ಸಂಪರ್ಕದಿಂದಾಗಿರುವ ಕಾಮಗಾರಿ ವಿಳಂಬ ತಪ್ಪಿಸಿ ಕಾಮಗಾರಿಯನ್ನು ಪ್ರಗತಿಪಥದತ್ತ ಒಯ್ಯುವಂತೆ ಮಾರ್ಗದರ್ಶನ ನೀಡಿದರು. ಕನಿಷ್ಠ ರಸ್ತೆ ಗುಂಡಿಗಳನ್ನು ಮುಗಿಸುವ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿಯವರು ಕಾರಣಗಳನ್ನು ನೀಡದೆ ಸಮಯಮಿತಿಯೊಳಗೆ ಮುಗಿಸಬೇಕೆಂದರು.
ನಂತೂರಿನ ಬಳಿ ಇರುವ ಆರು ಕೊರಗ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಸಂಬಂಧ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಕೊರಗ ಕುಟುಂಬದವರು ಸ್ಥಳಾಂತರಕ್ಕೆ ಒಪ್ಪಿದ್ದಾರೆ.
ಬ್ರಹ್ಮರಕೂಟ್ಲುವಿನ ಸಮಸ್ಯೆಯನ್ನು ಬಗೆಹರಿಸಲು ತಾವೇ ಮುಂದಾಗಿ ಕ್ರಮಕೈಗೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತದ ಉದ್ದೇಶ ಜನಹಿತ ಮಾತ್ರ ಎಂದರು. ಹೆದ್ದಾರಿಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯಗಳನ್ನು ಲಾರಿಗಳಲ್ಲಿ ತಂದು ರಾಶಿ ಹಾಕುವ ಬಗ್ಗೆ ಸಬೆಯಲ್ಲಿ ಗಂಭೀರ ಚರ್ಚೆ ನಡೆಯಿತಲ್ಲದೆ, ಈ ತ್ಯಾಜ್ಯ ಗಳನ್ನು ರಾಶಿ ಹಾಕಲು ಮಹಾ ನಗರ ಪಾಲಿಕೆ ಸೂಕ್ತ ಜಾಗವನ್ನು ಆದಷ್ಟು ಶೀಘ್ರದಲ್ಲಿ ಗುರುತಿಸಿಕೊಡಬೇಕು. ಬಳಿಕ ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.