Tuesday, November 23, 2010

ಅಲ್ಪಸಂಖ್ಯಾತರ ಅಭಿವೃದ್ಧಿ ಹೊಣೆ ಅಲ್ಪಸಂಖ್ಯಾತರ ನಿಗಮ ಮತ್ತು ಇಲಾಖೆಯದ್ದು : ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 23: ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿ ಹೊಣೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಮತ್ತು ನಿಗಮದ್ದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಅವರು 22 ರಂದು ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ 15 ಅಂಶ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅಲ್ಪ ಸಂಖ್ಯಾತರ ಅಭಿವೃದ್ಧಿ ಗೆಂದೇ ಮೀಸಲಿ ರಿಸಿರುವ ಸಂಸ್ಥೆಗಳು ತಮ್ಮ ಹೊಣೆ ಗಾರಿಕೆ ಯನ್ನು ನಿರ್ವಹಿಸುವ ಬಗ್ಗೆ ಮಾರ್ಗ ದರ್ಶನ ನೀಡಿದ ಜಿಲ್ಲಾಧಿ ಕಾರಿಗಳು, ಅವರ ಅಭಿ ವೃದ್ಧಿಗೆ ಮೀಸಲಿಟ್ಟ ಯೋಜನೆ ಗಳು, ಅವರಿಗೆ ಮಾರ್ಗ ದರ್ಶನ ನೀಡುವ ಹೊಣೆಯನ್ನು ನಿಗದಿ ಪಡಿಸಿ ದರಲ್ಲದೆ, ಸಾರ್ವ ಜನಿಕರಿಂದ ಈ ಸಂಬಂಧ ದೂರುಗಳು ಬರಬಾರದು ಎಂದು ಎಚ್ಚರಿಸಿದರು.
ಮುಂದೆ ನಡೆಯುವ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಾಮಾನ್ಯ ಪ್ರಗತಿ ವರದಿಯನ್ನು ತಾರದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿದ ಯೋಜನೆ ಹಾಗೂ ಗುರಿಸಾಧನೆಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ದೊರಕುವ ಸೌಲಭ್ಯಗಳಾದ ಸ್ವಾವಲಂಬನಾ, ಅರಿವು ಯೋಜನೆಯಡಿ ಅರ್ಹರಿಗೆ ಮಾಹಿತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಬೇಕೆಂದರು. ಶಿಕ್ಷಣ ಇಲಾಖೆ, ಕೈಗಾರಿಕಾ ಅಭಿವೃದ್ಧಿ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಯೋಜನೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಅಧಿಕಾರೇತರ ಸದಸ್ಯರಾದ ಧರಣೇಂದ್ರ ಜೈನ್ ಮತ್ತು ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು.