Thursday, November 25, 2010

ರಾಷ್ಟ್ರೀಯ ತೋಟಗಾರಿಕಾ ಮಿಷನ್: ವಿವಿಧ ಯೋಜನೆಗಳಿಗೆ ಸಹಾಯಧನ

ಮಂಗಳೂರು ನವೆಂಬರ್ 25 : ಸಂದಿಗ್ಧ ಪರಿಸ್ಥಿತಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ನೀರನ್ನು ಒದಗಿಸಲು ಅನುವು ಆಗುವಂತೆ ನೀರು ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದ್ದು, ಸಮುದಾಯ ಕೆರೆಗಳಿಗೆ ಅವುಗಳ ಸಾಮಥ್ರ್ಯದ ಆಧಾರದ ಮೇಲೆ ರೂ 4.00 ಲಕ್ಷಗಳವರೆಗೆ ಸಹಾಯ ಧನ ನೀಡಲು ಅವಕಾಶವಿದೆ. ವೈಯಕ್ತಿಕ ಕೆರೆಗಳಿಗೆ ರೂ. 60,000ಗಳ ವರೆಗೆ ಸಹಾಯಧನ ಒದಗಿಸಲು ಅವಕಾಶವಿರುತ್ತದೆ. ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳುವ ಹಾಗೂ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸುವ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ರೈತರು ಇಲಾಖೆಯಿಂದ ಅರ್ಜಿಯನ್ನು ಪಡೆದು ಎಲ್ಲಾ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯನ್ನು ಪಡೆಯಬೇಕು. ತದನಂತರ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದು. ಸಹಾಯಧನವನ್ನು 4 ಹಂತಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಸಾವಯವ ಕೃಷಿಗೆ ಸಹಾಯಧನ: ಸಾವಯವ ಕೃಷಿಗೆ ಪೂರಕವಾದ ಎರೆ ಹುಳ ಗೊಬ್ಬರ ಘಟಕ ಹಾಗೂ ಬಯೋ ಡೈಜೆಸ್ಟರ್ ಘಟಕಗಳ ಸ್ಥಾಪನೆಗೆ ಶೇಕಡಾ 50 ರ ಸಹಾಯ ಧನ ಗರಿಷ್ಠ ರೂ.30,000 ದವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆ ಹೊಂದಿದ ರೈತರು ಇಲಾಖಾ ಅಧಿಕಾರಿ/ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಂಪರ್ಕಿಸಿ ನಿರ್ಮಾಣದ ತಾಂತ್ರಿಕ ಮಾಹಿತಿ ಪಡೆದು ಅದರಂತೆ ಘಟಕವನ್ನು ಸ್ಥಾಪಿಸಬೇಕು. ತೋಟಗಾರಿಕೆ ಬೆಳೆ ದಾಖಲಾತಿಯುಳ್ಳ ಪಹಣಿ ಪತ್ರ, ಕಾಮಗಾರಿಗೆ ಸಂಬಂಧಿಸಿದಂತೆ ಖರ್ಚಿನ ಬಿಲ್ಲುಗಳು, ಅಂದಾಜು ಪತ್ರ ಅಥವಾ ಮೌಲ್ಯ ಮಾಪನ ವರದಿ ಹಾಗೂ ಕೆಲಸ ಪೂರ್ಣಗೊಂಡ ವರದಿ ರೂ.20 ಛಾಪಾ ಕಾಗದದಲ್ಲಿ ನಿಗಧಿತ ನಮೂನೆಯಲ್ಲಿ ದೃಢೀಕರಣ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ರೈತ ಸಂಪರ್ಕ ಕೇಂದ್ರದ ಅಥವಾ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅವರು ಘಟಕ ಪರಿಶೀಲಿಸಿ ಅನುದಾನದ ಲಭ್ಯತೆಯ ಮೇರೆಗೆ ಅರ್ಜಿಯನ್ನು ಸಹಾಯ ಧನಕ್ಕೆ ಪರಿಗಣಿಸಲಾಗುವುದೆಂದು ತೋಟಗಾರಿಕಾ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜೇನು ಕೃಷಿಗೆ ಸಹಾಯಧನ: ಪರಾಗ ಸ್ಪರ್ಶ ಪ್ರೋತ್ಸಾಹಕ್ಕೆ ಜೇನು ಸಾಕಾಣಿ ಕೆಗಾಗಿ ತರಬೇತಿ ಹೊಂದಿದ ರೈತರಿಗೆ ಸಹಾಯ ಧನ ನೀಡ ಲಾಗುವುದು. ಜೇನು ವ್ಯವಸಾಯ ಸಹಕಾರಿ ಸಂಘ ಗಳಿಂದ ರೈತರೇ ಜೇನು ಗೂಡು ಗಳನ್ನು ಪಡೆದು ಅವುಗಳಲ್ಲಿ ಜೇನು ಕುಟುಂಬ ಗಳನ್ನು ಅಭಿವೃದ್ಧಿ ಪಡಿಸಬೇಕು. ಅರ್ಜಿಯನ್ನು ತೋಟಗಾರಿಕೆ ಬೆಳೆ ದಾಖಲಾತಿಯುಳ್ಳ ಪಹಣಿ ಪತ್ರ ಬಿಲ್ಲು, ಬ್ಯಾಂಕ್ ಖಾತೆ ವಿವರ ಹಾಗೂ ತರಬೇತಿ ಪ್ರಮಾಣ ಪತ್ರದೊಂದಿಗೆ ಹಾಗೂ ರೂ.20 ಛಾಪಾಕಾಗದದ ದೃಢೀಕರಣದೊಂದಿಗೆ ಸಂಬಂಧ ಪಟ್ಟ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅಧಿಕಾರಿಗಳು ತಾಕು ಪರಿಶೀಲಿಸಿ ಜೇನು ಕುಟುಂಬಗಳಿರುವ ಗೂಡುಗಳಿಗೆ ಶೇ.50 ರ ಗರಿಷ್ಠ ರೂ.800 ಪ್ರತೀ ಪೆಟ್ಟಿಗೆಗೆ ಸಹಾಯಧನವನ್ನು ಅನುದಾನದ ಲಭ್ಯತೆ ಮೇರೆಗೆ ಒದಗಿಸಲಾಗುವುದು. ಪ್ರತೀ ಫಲಾನುಭವಿಗೆ ಗರಿಷ್ಠ 50 ಜೇನು ಪೆಟ್ಟಿಗೆಗೆ ಸಹಾಯಧನ ನೀಡಲಾಗುವುದೆಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿರುತ್ತಾರೆ.
ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ: ರೈತರಿಗೆ ಟ್ರಾಕ್ಟರ್ ಖರೀದಿಗೆ ರೂ. 75,000/- ಗಳ ಸಹಾಯಧನ ಒದಗಿಸ ಲಾಗುವುದು.ರೈತರು ಕನಿಷ್ಠ 10 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಕನಿಷ್ಠ 5 ಎಕರೆ ಪ್ರದೇಶದಲ್ಲಿ ಬಹುವಾಷರ್ಿಕ ತೋಟಗಾರಿಕೆ ಬೆಳೆ ಹೊಂದಿರಬೇಕು. ರೈತರು ಆದಾಯ ಪಾವತಿದಾರರಾಗಿರಬಾರದು ಹಾಗೂ ಈಗಾಗಲೇ ಟ್ರಾಕ್ಟರ್ ಹೊಂದಿರಬಾರದು.2010-11 ನೇ ಸಾಲಿನಲ್ಲಿ ಖರೀದಿಸಿದ ಟ್ರಾಕ್ಟರ್ಗಳಿಗೆ ಮಾತ್ರ ಸಹಾಯಧನ ಒದಗಿಸಲಾಗುವುದು. ಟ್ರಾಕ್ಟರ್ಗಳಿಗೆ ಆರ್ಟಿಒ ದೃಢೀಕರಣ ಇರಬೇಕು. ಅರ್ಹ ರೈತರು ಟ್ರಾಕ್ಟರ್ ಖರೀದಿಸಿ ಮೂಲ ದಾಖಲಾತಿ ಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳ ಮೂಲಕ ತೋಟಗಾರಿಕೆ ಉಪನಿರ್ದೇಶಕರಿಗೆ ಸಲ್ಲಿಸ ಬಹುದಾಗಿದೆ. ಈ ಎಲ್ಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತೋಟಗಾರಿಕಾ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು.