ಅವರು ಇಂದು ತಮ್ಮ ಕಚೇರಿ ಯಲ್ಲಿ ಎಂಆರ್ ಪಿಎಲ್, ಒ ಎನ್ ಜಿಸಿ ಮತ್ತು ಒಎಂಪಿ ಎಲ್ ಗಳಿಗಾಗಿ ಭೂ ಸ್ವಾಧೀನ ದಿಂದ ನಿರ್ವಸಿ ತರಿ ಗಾಗಿ ತರಬೇತಿ ಹೊಂದಿದ ವರಿಗೆ ಉದ್ಯೋಗ ದೊರಕಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು. ಪುನರ್ ವಸತಿ ಪ್ಯಾಕೇಜ್ ಪ್ರಕಾರ ಯೋಜನಾ ಸಂತೃಸ್ತರಿಗೆ ತರಬೇತಿ ಸೌಲಭ್ಯ ಒದಗಿಸಬೇಕಿದ್ದು 18 ರಿಂದ 25 ವರ್ಷದೊಳಗಿನ ಯೋಜನಾ ಸಂತೃಸ್ತರ ಕುಟುಂಬದ ಇಚ್ಛೆಯುಳ್ಳ ಒಬ್ಬ ಸದಸ್ಯರಿಗೆ ಅವರು ಹೊಂದಿರುವ ವಿದ್ಯಾರ್ಹತೆಗೆ ಅನುಸಾರವಾಗಿ ಸೂಕ್ತ ಉದ್ಯಮ ಶೀಲ ಹಾಗೂ ಕೌಶಲ್ಯೀಕರಣ ತರಬೇತಿ ನೀಡತಕ್ಕದ್ದು. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ 207 ಜನರಿಗೆ ಕರ್ನಾಟಕ ಪಾಲಿಟೆಕ್ನಿಕ್ನಲ್ಲಿ ತರಬೇತಿ ನೀಡಲಾಗಿದೆ. 2ನೇ ಹಂತದಲ್ಲಿ 211 ಜನರಿಗೆ ತರಬೇತಿ ನೀಡಬೇಕಿದೆ.ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದಲ್ಲಿ ಆದ್ಯತೆ ಮೇಲೆ ಹಾಗೂ ಖಾಲಿ ಹುದ್ದೆಗಳು ಲಭ್ಯ ವಿರುವುದಕ್ಕೆ ಬದ್ಧವಾಗಿ ಯೋಜನಾ ಸಂತೃಸ್ತರ ಕುಟುಂಬದ ಆಸಕ್ತ ಒಬ್ಬ ಸದಸ್ಯರಿಗೆ ಅವರು ಹೊಂದಿರುವ ಅರ್ಹ ವಿದ್ಯಾರ್ಹತೆ ಅನುಗುಣವಾಗಿ ಉದ್ಯೋಗವನ್ನು ನೀಡಲಾಗುವುದು. ಇದರಂತೆ ಯೋಜನಾ ವ್ಯಾಪ್ತಿಯ ತರಬೇತಿ ಹೊಂದಿದ ಸಂತೃಸ್ತರ ಕುಟುಂಬದ 85 ಜನರಿಗೆ ಉದ್ಯೋಗ ದೊರಕಿಸಲಾಗಿದೆಯೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಯೋಜನಾ ಪ್ರಾಧಿಕಾರವು ವಿಶೇಷ ಆರ್ಥಿಕ ವಲಯ ನಿಯಮಿತದ ಹೊರಗಡೆ ಸಹ ಯೋಜನಾ ಸಂತೃಸ್ತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸ ಬೇಕೆಂದರು. ಒಂದು ವೇಳೆ ಯೋಜನಾ ಸಂತೃಸ್ತರ ಕುಟುಂಬದ ಸದಸ್ಯರು ಮೇಲೆ ತಿಳಿಸಿದ ಯಾವುದೇ ಉದ್ಯೋಗಾವಕಾಶವನ್ನು ಪಡೆಯಲು ಇಚ್ಚಿಸದಿದ್ದಲ್ಲಿ ಅಂತಹವರಿಗೆ ಒಂದು ಬಾರಿ ಪರಿಹಾರವೆಂದು ಉದ್ಯೋಗಕ್ಕೆ ಬದಲಾಗಿ ರೂ.3.50 ಲಕ್ಷಗಳನ್ನು ಪಾವತಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಯೋಜನಾ ಸಂತೃಸ್ತ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಕಡೆ ಮನೆ ಮತ್ತು ಜಮೀನನ್ನು ಹೊಂದಿದ್ದು, ಅವನ ಹೆಸರು ಉದ್ಯೋಗಕ್ಕಾಗಿ ಹೆಚ್ಚು ಕಡೆ ಪಟ್ಟಿಯಲ್ಲಿ ಸೇರಿದ್ದಲ್ಲಿ ಆತನು ಕೇವಲ ಒಂದು ಉದ್ಯೋಗಾವಕಾಶ ಮತ್ತು ನಗದು ಪರಿಹಾರಕ್ಕೆ ಅರ್ಹನಾಗಿರುತ್ತಾನೆ.
ಉದ್ಯೋಗಾವಕಾಶಕ್ಕೆ ಅರ್ಹತೆಯು ನಿಗಧಿತ ದಿನಾಂಕದಂದು ಮುಖ್ಯ ಯೋಜನಾ ಸಂತೃಸ್ತ ಕುಟುಂಬದೊಂದಿಗೆ ಸಾಮಾನ್ಯವಾಗಿ ವಾಸಿಸುತ್ತಿರುವ ವಯಸ್ಕ ಮಗ/ಸೊಸೆ, ಮಗಳು/ಅಳಿಯ ಅಥವಾ ಹೆಣ್ಮಕ್ಕಳಿಗೆ ಮಾತ್ರ ಲಭ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಯೋಜನಾ ಸಂತೃಸ್ತರು ಭೂಮಿ ನೀಡದಿದ್ದಲ್ಲಿ ಎಂಆರ್ ಪಿಎಲ್, ಒ ಎನ್ ಜಿಸಿ ಗಳು ಎಲ್ಲಿರುತ್ತಿದ್ದವು ಎಂದು ಪ್ರಶ್ನಿಸಿದ ಜಿಲ್ಲಾಧಿ ಕಾರಿಗಳು ಒ ಎನ್ ಜಿಸಿ ಮಾತೃ ಸಂಸ್ಥೆಯಾಗಿರುವುದರಿಂದ ಯೋಜನಾ ಸಂತೃಸ್ತ ಕುಟುಂಬದ ತರಬೇತಿ ಹೊಂದಿದ ಎಲ್ಲರಿಗೂ ಉದ್ಯೋಗಾ ವಕಾಶ ಕಲ್ಪಿಸುವ ಹೊಣೆ ಹೊರಬೇಕೆಂದರು. ಉದ್ಯೋಗಾವಕಾಶಗಳು ಯಾವಾಗಲಾದರೂ ಸೃಷ್ಠಿಯಾದರೂ ಸರಿ ನಿರ್ವಸಿತ ಯೋಜನಾ ಸಂತೃಸ್ತರಿಗೆ ಉದ್ಯೋಗ ದೊರಕಿಸುವ ಹೊಣೆ ಕಂಪೆನಿಗಳದ್ದು ಎಂದ ತಾಕೀತು ಮಾಡಿದರು. ಒ ಎನ್ ಜಿಸಿ ಕಂಪೆನಿ ಪರವಾಗಿ ಲಕ್ಷ್ಮಿ ಕುಮಾರನ್ ಸಭೆಯಲ್ಲಿ ಪಾಲ್ಗೊಂಡಿದ್ದರು.