Tuesday, November 23, 2010

ಗ್ರಾಹಕರ ಹಿತದೃಷ್ಠಿಯಿಂದ ವಿದ್ಯುತ್ ದರ ಪರಿಷ್ಕರಿಸಬೇಡಿ

ಮಂಗಳೂರು ನವೆಂಬರ್ 23: ಮೆಸ್ಕಾಂ ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಲಾಭದಲ್ಲಿರುವುದರಿಂದ ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸಬಾರದಾಗಿ ಗ್ರಾಹಕರು/ವಿದ್ಯುತ್ ಬಳಕೆದಾರರು ಕರ್ನಾಟಕ ವಿದ್ಯುತ್ ದರ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಎಂ.ಆರ್. ಶ್ರೀನಿವಾಸಮೂರ್ತಿ ಅವರಲ್ಲಿ ತಮ್ಮ ಮನವಿ ಅರ್ಪಿಸಿದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಕರ್ನಾಟಕ ವಿದ್ಯುತ್ ದರ ನಿ ಯಂತ್ರಣ ಆ ಯೋಗದ ವತಿ ಯಿಂದ ನಡೆದ ಮೆಸ್ಕಾಂ ವಿದ್ಯುತ್ ದರ ಹೆಚ್ಚಿ ಸುವ ಕುರಿತ ಸಾರ್ವ ಜನಿಕ ಅಹವಾಲು ಸ್ವೀಕಾರ ಚರ್ಚೆ ಸಭೆಯಲ್ಲಿ ಭಾಗ ವಹಿ ಸಿದ್ದ ಸುಮಾರು 200 ಕ್ಕೂ ಹೆಚ್ಚಿನ ಗ್ರಾಹ ಕರು ಆಯೋ ಗದ ಅಧ್ಯಕ್ಷ ರಲ್ಲಿ ಮನವಿ ಮಾಡಿ ದರು. ಡಿಜಿಟಲ್ ಮೀಟರ್ ಅಳ ವಡಿಕೆ,ಟಿಸಿ ಗಳಿಗೆ ಸಿಡಿಲು ನಿಯಂತ್ರಣ ಸಾಧನ ಅಳವ ಡಿಸು ವುದು,ಲೈನ್ ಮೆನ್ ಗಳ ಟ್ರಾನ್ಸ ಫರ್ ಹೀಗೆ ಇನ್ನು ಅನೇಕ ಸಮಸ್ಯೆ ಗಳು ಸಭೆ ಯಲ್ಲಿ ಗ್ರಾಹಕ ರಿಂದ ಕೇಳಿ ಬಂದವು.
ಸ್ಮಾರ್ಟ್ ಗ್ರಿಡ್ ವಿದ್ಯುತ್ ಕಡಿತ ನಿಯಂತ್ರಣಕ್ಕೆ ಉತ್ತಮ ಸಾಧನ.ಇದೊಂದು ಒತ್ತಡ ಸಮಯದಲ್ಲಿ ವಿದ್ಯುತ್ ಸರಬರಾಜು ನಿಯಂತ್ರಣ ಮಾಡುವ ಸಾಧನ.ಮೆಸ್ಕಾಂ ವತಿಯಿಂದ ಮಂಗಳೂರಿನ ಕದ್ರಿಹಿಲ್ಸ್ ಅಪಾರ್ಟ್ ಮೆಂಟ್ ನಲ್ಲಿ ಒಂದು ಬೀದಿ ದೀಪಗಳಲ್ಲಿ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಈ ಸಾಧನ ಅಳವಡಿಸಲಾಗಿದ್ದು ಇದರಿಂದ ಗ್ರಾಹಕ ತನಗೆ ಒದಗಿಸಿರುವ ವಿದ್ಯುತ್ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವಿದ್ಯುತ್ ಬಳಕೆ ಮಾಡಿದಲ್ಲಿ ಕೂಡಲೇ 30 ಸೆಕೆಂಡುಗಳ ಅಂತರದಲ್ಲಿ ಅವರ ವಿದ್ಯುತ್ ಕಡಿತವಾಗುತ್ತದೆ. ಪುನ: 30 ಸೆಕೆಂಡುಗಳ ಅಂತರದಲ್ಲಿ ವಿದ್ಯುತ್ ಸರಬರಾಜು ಎಂದಿನಂತೆ ಆಗುತ್ತದೆ.ಮತ್ತೊಮ್ಮೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿಗೆ ವಿದ್ಯುತ್ ಬಳಸಿದರೆ ಪುನ: ಸ್ವಯಂಚಾಲಿತವಾಗಿ ವಿದ್ಯುತ್ ನಿಲುಗಡೆಯಾಗಲಿದೆ. ಹೀಗೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಗ್ರಾಹಕ ಎಚ್ಚೆತ್ತುಕೊಳ್ಳದಿದ್ದಲ್ಲಿ ಸಂಪೂರ್ಣವಾಗಿ ವಿದ್ಯುತ್ ನಿಲುಗಡೆ ಆಗಲಿದೆ.
ಇದರಿಂದಾಗಿ ವ್ಯರ್ಥವಾಗಿ ಲೋಡ್ ಶೆಡ್ಡಿಂಗ್ ಸಮಸ್ಯೆ ನಿವಾರಣೆಯಾಗಿ 24 * 7 ಆಧಾರದಲ್ಲಿ ವಿದ್ಯುತ್ ಸರಬರಾಜು ಮಾಡಬಹುದೆಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸುಮಂತ್ ತಿಳಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ಕರ್ನಾಟಕ ವಿದ್ಯುತ್ ದರ ನಿಯಂತ್ರಣ ಆಯೋಗದ ಸದಸ್ಯರಾದ ಶ್ರೀನಿವಾಸ ರಾವ್,ಯು.ಜಿ.ಹಿರೇಮಠ,ಮೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಯಸೂರ್ಯ ಮುಂತಾದವರು ಹಾಜರಿದ್ದರು. ಸುಮಾರು 4000ಕ್ಕೆ ಹೆಚ್ಚು ಸಲಹೆಗಳು ಈ ಸಂದರ್ಭದಲ್ಲಿ ಸಲ್ಲಿಸಲಾಗಿತ್ತು.