Saturday, November 20, 2010

ಮಾನವ ಹಕ್ಕು ಆಯೋಗದಿಂದ 12,000 ಪ್ರಕರಣ ಇತ್ಯರ್ಥ

ಮಂಗಳೂರು,ನ.20: ರಾಜ್ಯ ಮಾನವ ಹಕ್ಕು ಆಯೋಗ ದಡಿ 23,000 ಪ್ರಕರಣ ಗಳನ್ನು ದಾಖಲಿಸ ಲಾಗಿದ್ದು, 5000 ಪ್ರಕರಣ ಗಳನ್ನು ಸ್ವಯಂ ಪ್ರೇರಿತ ವಾಗಿ ದಾಖಲಿ ಸಲಾಗಿದೆ.12,000 ಪ್ರಕರಣ ಗಳ ಕುರಿತು ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ರಾದ ಎಸ್ ಆರ್ ನಾಯಕ್ ಅವರು ಹೇಳಿದರು.ಅವರಿಂದು ಮಂಗಳೂರಿನ ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಸಾರ್ವಜನಿ ಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮ ದೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಸುಮಾರು 1,000 ಪ್ರಕರಣಗಳನ್ನು ದಾಖಲಿಸಲಾಗಿದ್ದು, 450 ಪ್ರಕರಣಗಳ ಸಂಬಂಧ ತೀರ್ಪು ನೀಡಲಾಗಿದೆ. ಮಾನವ ಹಕ್ಕು ಆಯೋಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಕನಿಷ್ಠ ಜಿಲ್ಲಾ ಕೇಂದ್ರದಲ್ಲಿ ಮಾನವ ಹಕ್ಕು ಆಯೋಗದ ಘಟಕಗಳಿರಬೇಕು ಎಂದರು. ರಾಜ್ಯ ಮಾನವ ಹಕ್ಕು ಆಯೋಗ ಅದ್ಭುತ ಸಂಸ್ಥೆಯಾಗಿ ಬೆಳೆಯಲು ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದರು.