Wednesday, May 11, 2011

ಮೂಡಬಿದ್ರೆ ಸಾವಿರ ಕಂಬದ ಬಸದಿ-ಪ್ರವಾಸಿ ತಾಣಕ್ಕೆ 35 ಕೋಟಿ ಅಂದಾಜು ಪಟ್ಟಿ

ಮಂಗಳೂರು,ಮೇ.11:ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಮೂಡಬಿದ್ರೆಯ ಸಾವಿರ ಕಂಬದ ಬಸದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ರೂ.35,94,08,371 ಗಳ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸಲ್ಲಿಸಲಾಗಿದೆಯೆಂದು ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ತಿಳಿಸಿರುತ್ತಾರೆ.
ಇದರಲ್ಲಿ ಮೂಡಬಿದ್ರೆ ಐತಿಹಾಸಿಕ ತಾಣಗಳಿಗೆಸಂಪರ್ಕ ರಸ್ತೆ ನಿರ್ಮಾಣ,ಮಹಾವೀರ ಸಮುದಾಯ ಭವನ ಕಟ್ಟಡವನ್ನೊಳಗೊಂಡಂತೆ ಪಾರ್ಕಿಂಗ್ ವ್ಯವಸ್ಥೆ,ಸ್ಮಾರಕಗಳ ಪುನರ್ ನಿರ್ಮಾಣ ಕಾಮಗಾರಿಗಳಿಗೆ,ನೀರಿನ ಮೂಲಗಳನ್ನು ಸರಿಪಡಿಸಿ ಟ್ಯಾಂಕ್ ಗಳನ್ನು ನಿರ್ಮಿಸಲು,ಹಳೆಯ ಕಟ್ಟಡಗಳನ್ನು ನವೀಕರಿಸಲು,ಪ್ರವಾಸಿಗರ ಸೌಕರ್ಯಕ್ಕಾಗಿ ಪ್ರವಾಸಿ ಸ್ಥಳಗಳ ಮ್ಯಾಪ್,ಜೈನ ತೀರ್ಥಂಕರರ ಮೂರ್ತಿಗಳ ಪುನರ್ ನವೀಕರಣಗೊಳಿಸುವಿಕೆ , ಚೌಟರ ಅರಮನೆಯ ನವೀಕರಣ ಮತ್ತು ನಕ್ಷೆ ಮತ್ತು ಅಂದಾಜು ವೆಚ್ಚದ ದರಪಟ್ಟಿಗಾಗಿ ಹೀಗೆ ಒಟ್ಟು 35,94,08,371 ರೂಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗಿದೆ.