Friday, February 18, 2011

ಮೀಸಲಾತಿ ಆಶ್ರಯಿಸದೇ ಮಹಿಳೆ ಮುನ್ನಡೆಯಬೇಕು: ಶೈಲಜಾ ಭಟ್

ಮಂಗಳೂರು,ಫೆ.18: ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸರ್ಕಾರ ಮಹಿಳೆಗೆ ರಾಜಕೀಯ ಸ್ಥಾನಮಾನ ದೊರೆಯುವ ಅವಕಾಶ ಕಲ್ಪಿಸಿದೆ. ಒಂದು ಹಂತದ ವರೆಗೆ ಈ ಸೌಲಭ್ಯವನ್ನು ಬಳಸಿಕೊಂಡು, ಮುಂದೆ ಮೀಸಲಾತಿಯ ಆಶ್ರಯವಿಲ್ಲದೆಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಮಹಿಳೆ ಸಬಲಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಅವರು ತಿಳಿಸಿದರು.
ಮಹಿಳಾ ಸಬಲೀಕರಣ ಕುರಿತು ವಾರ್ತಾ ಇಲಾಖೆ ಶಕ್ತಿ ನಗರದ ಕಲಾಂಗಣ್ ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಮುಂತಾದ ಮಹಿಳೆಯರು ಸ್ವ ಸಾಮಥ್ರ್ಯ ದಿಂದ ಉನ್ನತ ಸ್ಥಾನ ಗಳಿಗೆ ಬಂದು, ಸಾಮಾಜಿ ಕವಾಗಿ ಹಲವು ಸಾಧನೆ ಮಾಡಿ ದರು. ಅವರಿಗೆ ಆಗ ಮೀಸ ಲಾತಿಯ ಬೆಂಬಲ ವಿರ ಲಿಲ್ಲ. ಅವರ ಹಾಗೆ ಪರಿ ಶ್ರಮ ದಿಂದ ಉನ್ನತ ಸ್ಥಾನಕ್ಕೆ ಏರುವ ಪ್ರಯತ್ನ ಮಾಡಬೇಕು ಎಂದರು.ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ರಚನೆಯು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯ ಸಬಲೀಕರಣಗೊಳ್ಳುವಂತೆ ಮಾಡಿದೆ. ಆರ್ಥಿಕವಾಗಿ ಮಹಿಳೆ ಅಭಿವೃದ್ಧಿ ಸಾಧಿಸಿದರೆ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬಳಸಿಕೊಳ್ಳಬಾರದು. ಎಲ್ಲಿ ನಾರಿ ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಉಡುಗೆ ತೊಡುಗೆಯಲ್ಲಿ ಆಚಾರ ವಿಚಾರಗಳಲ್ಲಿ ಆಕೆ ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಮೂಡುವಂತೆ ನಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ರಜನಿ ದುಗ್ಗಣ್ಣ ಅವರು ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆ ಮುಂದುವರಿಯುತ್ತಿದ್ದಾಳೆ. ಹಿಂದೆ ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಎಲ್ಲರೂ ಆಸಕ್ತಿ ತೋರುತ್ತಾರೆ. ಸರ್ಕಾರವು ಸಹ ಮಹಿಳೆಯ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷೆ ಧನ ಲಕ್ಷ್ಮಿ ಜನಾ ರ್ಧನ ಅವರು ಮಾತನಾಡಿ, ಸಮಾಜ ಸುಧಾ ರಣೆಗೆ ನಮಗೆ ಈಗ ಒಳ್ಳೆಯ ಅವ ಕಾಶ ಸಿಕ್ಕಿದೆ. ಪುರು ಷರ ಸಹಾಯ ಹಾಗೂ ಬೆಂಬ ಲವೂ ಮಹಿಳೆ ಗೆ ಇದೆ ಎಂದರು.ಪ್ರಾಸ್ತಾವಿಕ ವಾಗಿ ಮಾತನಾಡಿದ ವಾರ್ತಾ ಇಲಾಖೆ ಉಪನಿರ್ದೇಶಕರಾದ ಎ.ಆರ್.ಪ್ರಕಾಶ್ ಅವರು, ಸರ್ಕಾರದ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಯಪಡಿಸುವ ಕೆಲಸವನ್ನು ವಾರ್ತಾ ಇಲಾಖೆ ಮಾಡುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಆಯೋಜಿಸಿರುವ ಈ ಕಾರ್ಯಾಗಾರ ವಿವಿಧ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವ ಪ್ರತಿನಿಧಿಗಳ ಆಗಮನದಿಂದ ಹೆಚ್ಚು ಅರ್ಥಪೂರ್ಣವಾಗಿದೆ. ಮಹಿಳಾ ಸಬಲೀಕರಣದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ, ಮಹಿಳಾ ಸ್ವಾವಲಂಬನೆ ಮತ್ತು ಕೃಷಿ, ಮಹಿಳಾ ಸಬಲೀಕರಣದಲ್ಲಿ ಮಹಿಳಾ ಮೀಸಲಾತಿ ಮುಂತಾದ ವಿಷಯಗಳ ಬಗ್ಗೆ ವಿವಿಧ ಇಲಾಖೆಯ ಮುಖಸ್ಥರು ಪರಿಣಿತರು ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಂಪಿಯ ಸಿರಿಗನ್ನಡ ಕನ್ನಡ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಹೆಚ್.ನಾಗವೇಣಿ, ಪ್ರಜಾವಾಣಿ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕರಾದ ಎನ್.ಎ.ಎಂ.ಇಸ್ಮಾಯಿಲ್, ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರ ಪಿ.ಜಿ.ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಶಿಬಿರದ ನಿರ್ದೇಶಕರಾದ ಡಾ| ಡಾಮಿನಿಕ್ ಡಿ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಸ್ವಾಗತಿಸಿದರು. ಕೊಡಗು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.