Thursday, February 10, 2011

ಜನಗಣತಿ: ಸಹಾಯವಾಣಿ

ಮಂಗಳೂರು. ಫೆಬ್ರವರಿ,10: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಜನಗಣತಿ ಬ್ಲಾಕುಗಳಲ್ಲಿ ದ್ವಿತೀಯ ಹಂತದ ಜನಸಂಖ್ಯಾ ಗಣತಿ ಕಾರ್ಯವು ಜನಗಣತಿ ನಿರ್ದೇಶನಾಲಯ ಹೊರಡಿಸಿರುವ ನಿಗದಿತ ಕಾರ್ಯಕ್ರಮ ವೇಳಾಪಟ್ಟಿಯಂತೆ 9ರಿಂದ 28ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಗಣತಿ ಕಾರ್ಯದ ಬಗ್ಗೆ ಯಾವುದೇ ನ್ಯೂನತೆ ಯಾ ಅಸಮರ್ಪಕ ಕಾರ್ಯ ನಿರ್ವಹಣೆ ಕಂಡು ಬಂದರೆ ಸಾರ್ವಜನಿಕರ ಅನುಕೂಲಕ್ಕೆ ಮಂಗಳೂರು ಮಹಾನಗರಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರ ರಚಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.
0824-2220306, ಶುಲ್ಕ ರಹಿತ 155313. ಅಲ್ಲದೆ ಸಾರ್ವಜನಿಕರು ಈ ಕುರಿತು ಸಂಬಂಧಪಟ್ಟ ಜನಗಣತಿ ಚಾರ್ಜ್ ಅಧಿಕಾರಿಯವರನ್ನು ಕೂಡಾ ನೇರಸಂಪರ್ಕಿಸಬಹುದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.