Wednesday, February 9, 2011

ಹಾಲು ಉತ್ಪಾದಕರಿಗೆ ರೂ.2 ಬೆಂಬಲ ಬೆಲೆ ಬಿಡುಗಡೆ

ಮಂಗಳೂರು,ಫೆಬ್ರವರಿ.09:ಕರ್ನಾಟಕ ರಾಜ್ಯ ಸರ್ಕಾರವು ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ನೀಡುತ್ತಿರುವ ರೂ 2.00 ಪ್ರೋತ್ಸಾಹಧನದ ಅಕ್ಟೋಬರ್ 2010 ರ ತಿಂಗಳ ಹಣವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು ಇದೀಗ ಸಂಘಗಳಿಗೆ ಬಿಡುಗಡೆ ಮಾಡಿದೆ.ಸಂಘಗಳಿಗೆ ಹಾಲು ನೀಡುವ ಉತ್ಪಾದಕ ರೈತರು ತಮ್ಮ ಸಂಘಗಳ ಮೂಲಕ ಈ ಹಣವನ್ನು ಪಡೆದು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಕರಿಸಬೇಕೆಂದು ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಮನವಿ ಮಾಡಿದ್ದಾರೆ.