Sunday, February 6, 2011

ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ:ಸೀಮಂತ್ ಕುಮಾರ್ ಸಿಂಗ್

ಮಂಗಳೂರು,ಫೆಬ್ರವರಿ.06:ಪೊಲೀಸರು ನಾಗರಿಕರೊಂದಿಗೆ ಸ್ನೇಹ ಸಂಬಂಧವನ್ನು ವೃದ್ಧಿಸಿ,ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕರೆ ನೀಡಿದ್ದಾರೆ.
ಇಂದು ಪಣಂಬೂರು ಬೀಚ್ ನಲ್ಲಿ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ ಸಿ ಆರ್ ವಾಹನ ಸಮಸ್ಯೆಗಳ ಬಗ್ಗೆ ಇಲಾಖಾ ಸಿಬಂದಿ ಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಪಿಸಿಆರ್ ವಾಹನದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿ ಆಧುನಿಕರಣ ಗೊಳಿಸಬೇಕು , ಸಿಬಂದಿ ಕೊರತೆ ಹಾಗೂ ಸಿಬಂದಿ ಪಾಳಿಯಲ್ಲಿ ಕಾರ್ಯನಿರ್ವಹಣೆ, ಪ್ರಥಮ ಚಿಕಿತ್ಸೆ ಬಗ್ಗೆ ಉಪಕರಣ ಗಳೊಂದಿಗೆ ಸಿಬಂದಿಗಳಿಗೆ ಹೆಚ್ಚಿನ ತರಬೇತಿಯ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಆಯುಕ್ತರು ಫೆ.13 ರಂದು ಸುರತ್ಕಲ್ ಪೊಲೀಸ್ ಠಾಣೆಗೆ ನೂತನ ಕಟ್ಟಡಕ್ಕೆ ಶಿಲನ್ಯಾಸ ಗೊಳಿಸುವು ದರೊಂದಿಗೆ ಮಂಗಳೂರು ನಗರ ಉತ್ತರ ಟ್ರಾಫಿಕ್ ವೃತ್ತದ ಕಚೇರಿಯನ್ನು ಸುರತ್ಕಲ್ಲ್ ನಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಇದೀ ಗಾಗಲೇ ಸಿಬಂದಿಗಳ ಆಯ್ಕೆ ಪ್ರ ಕ್ರಿಯೆ ನಡೆದಿದ್ದು ಅದನ್ನು ಎಲ್ಲಾ ಠಾಣೆಗೆ ಹಂತ ಹಂತವಾಗಿ ನೇಮಕ ಗೊಳಿಸಲಾಗುವುದು. ಮಹಿಳಾ ಸಿಬಂದಿಗಳನ್ನೂ ಇದೇ ಸಂದರ್ಭದಲ್ಲಿ ನಿಯೋಜಿಸಲಾಗುವುದು ಎಂದು ನಡಿದರು.ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕವನ್ನು ಇರಿಸುವತ್ತ ಪೊಲೀಸ್ ಸಿಬಂದಿಗಳು ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ಠಾಣೆಗೆ ಬರುತ್ತಿರುವ ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೌಹಾರ್ಧತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ ಎಂದ ಅವರು ಇದಕ್ಕೆ ತಪ್ಪಿದಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಡಿಸಿಪಿ ಮುತ್ತುರಾಯ, ಪಣಂಬೂರು ಉಪವಿಭಾಗದ ಎಸಿಪಿ ಪುಟ್ಟಮಾದಯ್ಯ, ಮತ್ತಿರರ ಅಧಿಕಾರಿಗಳು ಉಪಸ್ಥಿತರಿದ್ದರು.