Wednesday, February 2, 2011

ಅಂಗವಿಕಲರ ಬಸ್ ಪಾಸ್ ನವೀಕರಣ

ಮಂಗಳೂರು,ಫೆಬ್ರವರಿ.02:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಂಗವಿಕ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ ಪಾಸ್ ಗಳನ್ನು ವಿತರಿಸಿದ್ದು, ಈ ಬಸ್ ಪಾಸ್ ಗಳ ಅವಧಿಯು ದಿನಾಂಕ 31-12-10 ಕ್ಕೆ ಮುಕ್ತಾಯಗೊಳ್ಳಲಿದೆ. 2011 ನೇ ಸಾಲಿಗೆ ಬಸ್ ಪಾಸ್ ಗಳನ್ನು ನವೀಕರಿಸಬೇಕಾಗಿದ್ದು, ಎಲ್ಲಾ ಬಸ್ ಪಾಸ್ ಗಳನ್ನು ಏಕಕಾಲಕ್ಕೆ ನವೀಕರಿಸಲು ಕಷ್ಟಕರವಾಗಿರುತ್ತದೆ. ಈ ಹಿನ್ನಲೆಯಲ್ಲಿ ಅಂಗವಿಕಲ ಪ್ರಯಾಣಿಕರ ಹಿತದೃಷ್ಟಿಯಿಂದ 2010 ನೇ ಸಾಲಿನಲ್ಲಿ ವಿತರಿಸಿರುವ ಪಾಸ್ ಗಳ ಆಧಾರದಲ್ಲಿ ದಿನಾಂಕ 28-2-11 ರ ವರೆಗೆ ಸದರಿ ಪಾಸ್ ದಾರರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಸಂಸ್ಥೆಯು ಅನುಮತಿಯನ್ನು ನೀಡಿರುತ್ತದೆಯೆಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.