Monday, February 14, 2011

ನಂದಿನಿ ಹಾಲಿನ ದರ ಹೆಚ್ಚಳ

ಮಂಗಳೂರು. ಫೆಬ್ರವರಿ,14: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಉತ್ಪಾದನೆ ಮತ್ತು ಹಾಲು ಶೇಖರಣೆ ತೀವ್ರವಾಗಿ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಉತ್ಪಾದನಾ ವೆಚ್ಚವನ್ನು ಸಾಧ್ಯವಾದಷ್ಟು ಸರಿದೂಗಿಸುವುದು ಆವಶ್ಯಕವಾಗಿರುತ್ತದೆ. ರಾಜ್ಯದ ಹೈನುಗಾರರ ರೈತರ ಹಿತದೃಷ್ಠಿಯಿಂದ ಹಾಲಿನ ಮಾರಾಟ ದರವನ್ನು ರೂ 2.00 ಹೆಚ್ಚಿಸಲು ಕರ್ನಾಟಕ ಸರ್ಕಾರವು ಅನುಮತಿ ನೀಡಿದ್ದು, ನಂದಿನಿ ಹಾಲಿನ ಮಾರಾಟ ದರವನ್ನು ರೂ.2.00 ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿಯು ತೀರ್ಮಾನಿಸಿರುತ್ತದೆ.
ಅದರಂತೆ ದಿನಾಂಕ 15-2-11 ರ ಬೆಳಗಿನ ಸರದಿ ಯಿಂದ ಅನ್ವಯ ವಾಗು ವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪರಿಷ್ಕೃತ ಮಾರಾಟ ದರವು ಈ ಕೆಳಕಂಡಂತಿರುತ್ತದೆ.

ಟೋನ್ಡ್ ಹಾಲು 500 ಮಿಲಿ ಲೀಟರ್ ಗೆ 11 ರೂ.1 ಲೀಟರ್ ಗೆ 22.00 ರೂ.,
ಹೊಮೋಜಿನೈಸ್ಡ್ ಹಸುವಿನ ಹಾಲು 500 ಮಿಲಿ ಲೀಟರ್ ಗೆ 12 ರೂ.1 ಲೀಟರ್ ಗೆ 24 ರೂ.,
ಹೊಮೋಜಿನೈಸ್ಡ್ ಹಸುವಿನ ಹಾಲು 6 ಲೀಟರ್ ಗೆ ರೂ.144-00
ಶುಭಂ ಹಾಲು 500 ಮಿಲಿಲೀಟರ್ ಗೆ ರೂ.13.50,
ಮೊಸರು 200 ಗ್ರಾಂಗೆ 7.00 ರೂ.500 ಗ್ರಾಂಗೆ 14.00,6 ಕೆ.ಜಿ ಜಂಬೋರೂ 162.00
ಮಸಾಲ ಮಜ್ಜಿಗೆ 200 ಮಿಲಿ ಲೀಟರ್ ಗೆ 6.00 ರೂ. ಸಿಹಿ ಲಸ್ಸಿ 200 ಮಿಲಿಲೀಟರ್ ಗೆ ರೂ.8.00 ಆಗಿರುತ್ತದೆ.

ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನು ಇರುವ ಪ್ಯಾಕಿಂಗ್ ಫಿಲಂ ಮುಗಿಯುವವರೆಗೆ ಹಳೆಯ ದರ ನಮೂದಿಸಿರುವ ನಂದಿನಿ ಹಾಲು,ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಾಗುವುದು. ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳು ಪರಿಷ್ಕೃತ ದರದಲ್ಲಿಯೇ ವ್ಯಹವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ಹಾಲು ಒಕ್ಕೂಟದ ಅಧ್ಯಕ್ಷರು ತಿಳಿಸಿರುತ್ತಾರೆ.