Monday, February 14, 2011

ಸುಧಾರಣೆಯತ್ತ ಸಮುದಾಯ ಆರೋಗ್ಯ ಕೇಂದ್ರಗಳು

ಮಂಗಳೂರು, ಫೆಬ್ರವರಿ.14:ಎಲ್ಲರಿಗೂ ಆರೋಗ್ಯ ಭಾಗ್ಯ ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಧೋರಣೆ. ಈ ನಿಟ್ಟಿನಲ್ಲಿ ದೇಶದ ಯಾರೊಬ್ಬರೂ ಆರೋಗ್ಯ ಸೇವೆಗಳಿಂದ ವಂಚಿತರಾಗಬಾರದೆಂದು ಸರ್ಕಾರದ ಉದ್ದೇಶ. ಈ ಕಾರಣಕ್ಕಾಗಿ ಸರ್ಕಾರ ಈ ಹಿಂದೆ ಇದ್ದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇದ್ದಂತಹ ಹೊಣೆಗಾರಿಕೆಯ ಕೊರತೆ ಯಿಂದಾಗಿ ರೋಗಿಗಳು ಆರೋಗ್ಯ ಸೇವೆಗಳಿಗೆ ಖಾಸಗಿ ಸೌಲಭ್ಯ ಗಳತ್ತ ಹೋಗುವು ದನ್ನು ತಡೆಗಟ್ಟಲು ಆರೋಗ್ಯ ಸೇವೆಗಳಲ್ಲಿ ಉತ್ತಮ ಗುಣ ಮಟ್ಟದ ಹೊಣೆಗಾರಿಕೆ ಯನ್ನು ತರಲು ಪ್ರಥಮ ಆರೋಗ್ಯ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಆರೋಗ್ಯ ಕೇಂದ್ರಗಳಿಗೆ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ಮಟ್ಟವನ್ನು ನಿಗಧಿಪಡಿಸಲಾಗಿದೆ.
ಇದರಿಂದಾಗಿ ಭಾರತೀಯ ಸಾರ್ವಜನಿಕ ಆರೋಗ್ಯ ನಿಯಮಾವಳಿಯಂತೆ ಕಟ್ಟಡ,ಮಾನವಶಕ್ತಿ ಸಾಧನ ಸಲಕರಣೆ ಔಷಧಿ ಗುಣಮಟ್ಟದ ಖಾತ್ರಿಯನ್ನು ಒಳಗೊಂಡಂತೆ ಮೂಲಭೂತ ಸೌಕರ್ಯಗಳ ಉತ್ತಮ ಗುಣಮಟ್ಟವನ್ನು ಈ ಆರೋಗ್ಯ ಕೇಂದ್ರಗಳು ಖಾತ್ರಿಪಡಿಸಲಿವೆ.
ಪ್ರಥಮ ಆರೋಗ್ಯ ಸೇವಾ ಕೇಂದ್ರಗಳ ಕಾರ್ಯ ಚಟುವಟಿಕೆಗಳು:-ಇವರು ದಿನದ 24 ಗಂಟೆಗಳು (24 *7) ವ್ಯಾಪಕ ತುರ್ತು ಪ್ರಸೂತಿಕಾ ರಕ್ಷಣೆಯ ಅಧಿಕೃತ ಮಾನದಂಡವನ್ನು ಒಳಗೊಂಡಿದ್ದು,ಪ್ರಸವ ವೇದನೆ ಅನುಭವಿಸುತ್ತಿರುವ ಒಬ್ಬ ಗರ್ಭಿಣಿ ಸ್ತ್ರೀಯು ಹಗಲಿನಲ್ಲಾಗಲೀ ರಾತ್ರಿಯಲ್ಲಾಗಲೀ ಆಸ್ಪತ್ರೆಗೆ ಬಂದಕೂಡಲೇ ಪ್ರಸೂತಿಕಾ ಕೋಣೆಗೆ ದಾಖಲಿಸಬೇಕು.ಇಂತಹ ಸಮಯದಲ್ಲಿ ಗರ್ಭಿಣಿಗೆ ರಕ್ತಸ್ರಾವ,ಎಳೆತ ಅಥವಾ ದಿಗ್ಬ್ರಮೆಗೆ ಒಳಗಾದ ಲಕ್ಷಣಗಳು ಕಂಡುಬಂದರೆ ಪರೀಕ್ಷಿಸಿ ಕೂಡಲೇ ಚಿಕಿತ್ಸೆ ನೀಡಬೇಕು. ಇದಲ್ಲದೆ ಪ್ರಸೂತಿಕಾ ಕೋಣೆ ಮತ್ತು ಶಸ್ತ್ರಚಿಕಿತ್ಸಾ ಕೋಣೆಗೆ ಸಮೀಪದಲ್ಲಿ ತುರ್ತು ನಿಗಾ ಘಟಕವನ್ನು ಆವಶ್ಯಕವಾದ ರಕ್ತದೊಂದಿಗೆ ತಜ್ಞರ ತಂಡ ಲಭ್ಯವಾಗುವಂತಿರಬೇಕು.
ಪ್ರಥಮ ಆರೋಗ್ಯ ಸೇವಾ ಕೇಂದ್ರದಲ್ಲಿ ಒಬ್ಬ ಪ್ರಸೂತಿಕಾ ತಜ್ಷರು,ಅರಿವಳಿಕೆ ತಜ್ಞರು,ಮಕ್ಕಳ ತಜ್ಞರ ಜೊತೆಗೆ ಜೀವರಕ್ಷಕ ಔಷಧಿಗಳು ಮತ್ತು ಐವಿ ದ್ರಾವಣ ಸೇರಿದಂತೆ ರಕ್ತ ಸಂಗ್ರಹಾಲಯದ ದೂರವಾಣಿ ಇತ್ಯಾದಿ ಅತ್ಯವಶ್ಯಕವಾದುದನ್ನು ಹೊಂದಿರಬೇಕು.
24 ಗಂಟೆಗಳೂ ಪ್ರಯೋಗಾಲಯ ಸೇವೆಗಳು ದೊರೆಯಬೇಕು,ಮಕ್ಕಳ ತಜ್ಞರು ಹಾಜರಿರಬೇಕು.ತುರ್ತು ಶಿಷ್ಟಾಚಾರಗಳು ಲಭ್ಯವಿರಬೇಕು. ಶಸ್ತ್ರಚಿಕಿತ್ಸೆ ಆದ ನಂತರ ಬಾಣಂತಿಯ ಶುಶ್ರೂಷೆಗೆ ಪ್ರತೀ 2ಗಂಟೆಗೊಮ್ಮೆ ಪರೀಕ್ಷಿಸುತ್ತಿರಬೇಕು.
ಇವೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಪ್ರಥಮ ಆರೋಗ್ಯ ಸೇವಾ ಕೇಂದ್ರಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೂಲ್ಕಿ,ಮೂಡಬಿದ್ರೆ, ಬಂಟ್ವಾಳ,ಬೆಳ್ತಂಗಡಿ,ಸುಳ್ಯ ಮತ್ತು ಪುತ್ತೂರುಗಳಲ್ಲಿವೆ.ದ.ಕ.ಜಿಲ್ಲೆಯಲ್ಲಿರುವ ಈ ಆರು ಪ್ರಥಮ ಆರೋಗ್ಯ ಸೇವಾ ಘಟಕಗಳಲ್ಲಿ ಆರು ಜನನಿ ಸುರಕ್ಷಾ ವಾಹಿನಿಯ ಸೌಲಭ್ಯವಿದೆ.
ಇದಲ್ಲದೆ ಇಲ್ಲಿ ದೊರಕುವ ಇತರೆ ಸೇವೆಗಳೆಂದರೆ ಕರಳುಬೇನೆ,ರಕ್ತಸ್ರಾವಗಳಂತಹ ತುರ್ತು ಪ್ರಸಂಗಗಳನ್ನು ಗಮನಿಸುವುದು,ಸಿಸೇರಿಯನ್ ಮತ್ತು ಇತರ ವೈದ್ಯಕೀಯ ಆವಶ್ಯ ಶುಶ್ರೂಷೆಗಳ ಸುರಕ್ಷಾ ಗರ್ಭಪಾತ ಸೇವೆಗಳು,ಅನಾರೋಗ್ಯ ಪೀಡಿತ ಮಕ್ಕಳಿಗೆ ದಿನನಿತ್ಯ ತುತರ್ು ಸೇವೆ ಒದಗಿಸುವುದು,ಹರ್ನಿಯಾ ಹೈಡ್ರೋಸೆಲ್ ,ಅಪೆಂಡಿಸೈಟಸ್,ಪಿಸ್ತೂಲ ಮುಂತಾದ ಶಸ್ತ್ರಚಿಕಿತ್ಸೆಗೊಳಗಾದ ರೋಗಗಳಿಗೂ ಚಿಕಿತ್ಸೆ ನೀಡಲಾಗುವುದು.
ಜಿಲ್ಲೆಯಲ್ಲಿರುವ ಆರು ಪ್ರಥಮ ಆರೋಗ್ಯ ಸೇವಾ ಘಟಕಗಳಿಂದ ಗ್ರಾಮಾಂತರ ಪ್ರದೇಶದ ಜನ ಆರೋಗ್ಯ ಸೇವೆಗಳಿಗಾಗಿ ಖಾಸಗಿ ನರ್ಸಿಂಗ್ ಹೋಂಗಳಿಗೆ ಹೋಗಿ ದುಪ್ಪಟ್ಟು ಹಣ ವೆಚ್ಚ ಮಾಡುವುದು ತಪ್ಪು. ಎಲ್ಲಾ ರೀತಿಯ ಉತ್ತಮ ಆರೋಗ್ಯ ಸೇವೆಗಳು ದಿನದ 24 ಗಂಟೆಯೂ ದೊರಕುವಂತಾಗಿದೆ. ಪ್ರಥಮ ಆರೋಗ್ಯ ಸೇವಾ ಘಟಕಗಳು ಗ್ರಾಮಾಂತರ ಜನರಿಗೆ ರಾಜ್ಯ ಸರ್ಕಾರ ಕಲ್ಪಿಸಿರುವ ಆರೋಗ್ಯ ಸೇವಾ ಕೊಡುಗೆಯೇ ಸರಿ.