
ಅವರು ಇಂದು ವಿಜ್ಞಾನ ಮತ್ತು ತಂತ್ರ ಜ್ಞಾನ ದಾರ್ಶ ನಿಕ ಸಮೂಹ, ಮಾಹಿತಿ , ಜೈವಿಕ ತಂತ್ರ ಜ್ಞಾನ,ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ, ಕರ್ನಾ ಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ, ಮಂಗ ಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಏರ್ಪಡಿಸಿದ್ದ ಪದವಿ ಕಾಲೇಜು ಗಣಿತಶಾಸ್ತ್ರ ಬೋಧಕರ ರಾಜ್ಯ ಮಟ್ಟದ ಬೋಧನಾಂಗ ಅಭಿವೃದ್ಧಿ ಕುರಿ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಭಾರತ ವಿಶ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 3ನೇ ಅತೀ ದೊಡ್ಡ ರಾಷ್ಟ್ರ .ಆದರೆ ಇಲ್ಲಿಯ ಸಾಕ್ಷರತೆ ಪ್ರಮಾಣ ಕೇವಲ ಶೇಕಡ 56 ಮಾತ್ರ.ಕಳೆದ 130 ವರ್ಷಗಳಲ್ಲಿ ವಿಜ್ಞಾನ ತಂತ್ರಜ್ಞಾನಗಳ ಸಂಶೋಧನೆಗೆ ಕೇವಲ 3 ಜನರಿಗೆ ಮಾತ್ರ ನೋಬಲ್ ಲಭಿಸಿದೆ.5 ವರ್ಷಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ವಿಜ್ಞಾನ ತಂತ್ರಜ್ಞಾನ ನಿಯತಕಾಲಿಕೆಗಳಲ್ಲಿ ಕೇವಲ 16 ಲೇಖನಗಳು ಪ್ರಕಟವಾಗಿವೆ. ಚೀನಾದಲ್ಲಿ 96,ಬ್ರೆಜಿಲ್ ನಲ್ಲಿ 36 ಪ್ರಬಂಧಗಳು ಪ್ರಕಟವಾಗಿವೆ. ಇವುಗಳನ್ನು ಗಮನಿಸಿದರೆ ನಮ್ಮ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕಾಳಜಿ/ಆಸಕ್ತಿ ಕಡಿಮೆಯಾಗುತ್ತಿರುವ ಅಂಶ ಗೋಚರಿಸುತ್ತಿದೆ.

ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗಳಿಗಾಗಿ ಹೆಚ್ಚಿನ ಅನುದಾನ ನೀಡದ ಹೊರತು ಮೂಲ ವಿಜ್ಞಾನ ತಂತ್ರಜ್ಞಾನಗಳ ಸಂಶೋಧನೆಗಳನ್ನು ಕೈಗೊಳ್ಳಲು ಕಷ್ಟವಾಗಲಿದೆ ಎಂದರು.ಪ್ರಾಧ್ಯಾಪಕರು,ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯದನ್ನು ಬೋಧಿಸಿ ಎಂದ ಅವರು ಇಡೀ ಮನುಕುಲದ ಒಳಿತಿಗಾಗಿ ಶಿಕ್ಷಣ ಕ್ಷೇತ್ರ ಭೃಷ್ಠಚಾರದಿಂದ ಮುಕ್ತವಾಗಿರಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಪ್ರೊ.ಎಚ್.ಆರ್.ನಟರಾಜ್ ಅರಸ್ ಅವರು ಮಾತನಾಡಿ ಶಿಕ್ಷಕ ವೃಂದ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆಯಂತಾಗದೆ ಸುಲಲಿತವಾಗಿ ಬೋಧಿಸಬೇಕು ಎಂದರು.ಪ್ರೊ.ಪರಮೇಶ್ವರ ಭಟ್,ಅಧ್ಯಕ್ಷರು,ಗಣಿತಶಾಸ್ತ್ರ ವಿಭಾಗ,ಮಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕೊಚ್ಚಿನ್ ವಿಶ್ವವಿದ್ಯಾನಿಲಯದ ಪ್ರೊ.ಎ.ವಿಜಯಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ಶ್ರೀಮತಿ ಸವಿತಾ ಎಲ್ಲರಿಗೂ ಸ್ವಾಗತ ಕೋರಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಗಣಿತ ಪ್ರಾಧ್ಯ್ಯಾಪಕರು ಆಗಮಿಸಿದ್ದರು.