Thursday, March 17, 2011

ನೇಕಾರರ ಅಭಿವೃದ್ಧಿಗೆ ಅನುದಾನ

ಮಂಗಳೂರು,ಮಾರ್ಚ್.17:ನೇಕಾರರ ಅಭಿವೃದ್ಧಿ ಮತ್ತು ನೇಕಾರ ವಲಯಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ 2011-12 ನೇ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಒದಗಿಸಿರುವರು. ಇದರ ಜೊತೆಗೆ ನೇಕಾರರ ಚಟುವಟಿಕೆಗಳಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಆಯವ್ಯಯದಲ್ಲಿ ಒದಗಿಸಲಾದ ಅನುದಾನವೂ ಸೇರಿದಂತೆ 20 ಕೋಟಿ ರೂ.,ಗಳನ್ನು ಒದಗಿಸಿ ಘೋಷಿಸಿರುವುದು,2009-10ನೇ ಸಾಲಿನ ಅಯವ್ಯಯದಲ್ಲಿ ಘೋಷಿಸಿರುವಂತೆ ನೇಕಾರರಿಗೆ 5000 ವಸತಿ ಕಾರ್ಯಾಗಾರಗಳನ್ನು ನಿರ್ಮಿಸಲಾಗುವುದಾಗಿ ಘೋಷಿಸಿರುವುದು,ನೇಕಾರರು ಗ್ರಾಮೀಣ ಸಹಕಾರ ಸಂಘಗಳಲ್ಲಿ ಪಡೆದ ಅಲ್ಪಾವಧಿ,ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಸದರಿ ಸಾಲದ ಮೇಲೆ ಇರುವ ಬಡ್ಡಿ ಮತ್ತು ದಂಡ ಬಡ್ಡಿ ರಿಯಾಯಿತಿ ನೀಡುವ ಯೋಜನೆಯನ್ನು ವಿಸ್ತರಿಸಲು ಹಾಗೂ ಪ್ರಸ್ತುತ ಸಾಲಿನಲ್ಲಿ 7.50 ಕೋಟಿ ರೂಗಳನ್ನು ಬಿಡುಗಡೆ ಮಾಡಲು ಘೋಷಿಸಿರುವುದು.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರ ವಿಶೇಷ ಪ್ಯಾಕೇಜ್ ನಡಿಯಲ್ಲಿ ಮಿತವ್ಯಯ ಬಡ್ಡಿ ಯೋಜನೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿರುವುದು ಹಾಗೂ ರಾಜ್ಯದ ಕೈಮಗ್ಗ ನೇಕಾರರು ಕೈಮಗ್ಗದಿಂದ ವಿದ್ಯುತ್ ಮಗ್ಗಕ್ಕೆ ಬದಲಾವಣೆಗೊಳಿಸಲು ಸುಮಾರು 15 ಕೋಟಿಗಳನ್ನು ಈ ಸಾಲಿನ ಆಯವ್ಯಯದಲ್ಲಿ ಹೀಗೆ ಒಟ್ಟು 125 ಕೋಟಿ ರೂಗಳನ್ನು ಘೋಷಿಸಿರುತ್ತಾರೆಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ತಿಳಿಸಿರುತ್ತಾರೆ.