Wednesday, March 9, 2011

ಕರಾವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆ ಪರಿಹರಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ:

ಮಂಗಳೂರು,ಮಾರ್ಚ್.09:ಅಡಿಕೆ ಬೆಳೆಗೆ ಬೆಂಬಲ ಬೆಲೆ, ಯುಪಿಸಿಎಲ್ ಗೆ ಪರಿಸರ ಸಂರಕ್ಷಣೆಗೆ ಬದ್ಧವಾಗುವಂತಹ ನಿರ್ದೇಶನ, ಎಂ ಎಸ್ ಇ ಝಡ್ ನಿರ್ವಸಿತರಿಗೆ ಪರಿಹಾರ, ಕಾಲುಸಂಕ ಸೇರಿದಂತೆ 3 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಯೋಜನೆಗಳನ್ನು ಕರಾವಳಿ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ವಿವರಿಸಿದರು.ಇಂದು ಅವರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಡಿಕೆ ಬೆಳೆಯ ಧಾರಣೆ ಮಾರುಕಟ್ಟೆಯಲ್ಲಿ ಇಳಿಮುಖ ವಾಗುತ್ತಿದ್ದು ಅಡಿಕೆಗೆ ಬೆಂಬಲ ನೀಡುವ ಸಂಬಂಧ ಮನವಿ ಮಾಡಲು ದೇಶದ ವಿವಿಧ ರಾಜ್ಯಗಳ ದೊಡ್ಡ ನಿಯೋಗ ಸದ್ಯ ದಲ್ಲಿಯೇ ಪ್ರಧಾನಿ, ವಾಣಿಜ್ಯ ಸಚಿವರನ್ನು ಭೇಟಿ ಯಾಗಲಿದೆ ಎಂದರು. ಯುಪಿಸಿಎಲ್ ನ ಹಾರುಬೂದಿ ಸಮಸ್ಯೆ ಬಗೆಹರಿಸಲು ವಿವಿಧ ಸಂಘಟನೆಗಳ, ಕಂಪೆನಿಯ ಮುಖಂಡರ ಸಭೆ ಕರೆದು ಪರಿಹಾರ ಕೈಗೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದರು. ಕರಾ ವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಶಕದ ಸಮಸ್ಯೆಯಾಗಿರುವ ಕಡಲ್ಕೊರೆತ ತಡೆಗೆ ವಿಶೇಷ ಯೋಜನೆ ಸಿದ್ಧಪಡಿಸಲಾಗಿದ್ದು 2015ರಲ್ಲಿ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗಲಿದೆ ಎಂದ ಅವರುಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಾಧಿಕಾರಕ್ಕೆ 10 ಕೋ.ರೂ. ಅನುದಾನವನ್ನು ನೀಡಿದ್ದಾರೆಂದು ತಿಳಿಸಿದರು. ಕಾಲು ಸೇತುವೆಗಳ ನಿರ್ಮಾಣಕ್ಕೆ 50 ಕೋ.ರೂ. ಅಗತ್ಯವಿದ್ದು ಸರಕಾರ ಪ್ರಥಮ ಹಂತವಾಗಿ 17 ಕೋ.ರೂ. ಬಿಡುಗಡೆ ಮಾಡಿದೆ. ಇದರಂತೆ ಯೋಜನೆ, ಆದ್ಯತಾ ಪಟ್ಟಿ ತಯಾರಿಸಲಾಗುತ್ತಿದೆ.ಮಣಿಪಾಲದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ನೇರ ರಸ್ತಯಾಗಿ ಅತ್ರಾಡಿ ರಾಜ್ಯ ಹೆದ್ದಾರಿ-67ನ್ನು ಬಜ್ಪೆಯಿಂದ ಅತ್ರಾಡಿವರೆಗೆ (ಮಂಗಳೂರು-ಬೆಳ್ಮಣ್-ಉಡುಪಿ ಮೂಲಕ) ಚತುಷ್ಪಥ ರಸ್ತೆಯನ್ನಾಗಿ ಅಭಿವದ್ಧಿಪಡಿಸುವ ಸಂಬಂಧ ಯೋಜನಾ ಪಟ್ಟಿ ಸಿದ್ಧಪಡಿಸಲು ಸರಕಾರ ತಿಳಿಸಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉ.ಕ. ಜಿಲ್ಲೆಗಳ ಮೀನು ಗಾರಿಕಾ ರಸ್ತೆ ಗಳನ್ನು ರಾ.ಹೆ.17ಕ್ಕೆ ಸಮಾ ನಾಂತ ರವಾಗಿ ಕಾಂ ಕ್ರೀಟ್ ರಸ್ತೆ ಯಾಗಿ ಅಭಿವದ್ಧಿ ಪಡಿಸ ಲಾಗು ವುದು; ರಾಷ್ಟ್ರೀಯ ಮೀನು ಗಾರಿಕಾ ಅಭಿ ವದ್ಧಿ ಮಂಡ ಳಿ ಸಹ ಯೋಗ ದಲ್ಲಿ 15 ಕೋ.ರೂ. ವೆಚ್ಚ ದಲ್ಲಿ 10 ಮಹಿಳಾ ಮೀನು ಮಾರು ಕಟ್ಟೆ ನಿರ್ಮಾಣ, ಸರ ಕಾರದ ಸೌರ ವಿದ್ಯುತ್ ಯೋಜನೆ ಯಡಿ 2000 ಮನೆ ಗಳಿಗೆ ಪ್ರಥಮ ಹಂತ ದಲ್ಲಿ ವಿದ್ಯುತ್ ಸಂಪರ್ಕ ನೀಡಲು ಯೋಜನೆ ರೂಪಿಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಭಾಕರ್ ರಾವ್ ಉಪಸ್ಥಿತರಿದ್ದರು.