Tuesday, March 8, 2011

``ಸ್ತ್ರೀಶಕ್ತಿ ಸಂಘಟನೆಗಳು ಮಹಿಳೆಯರ ಸಬಲೀಕರಣಕ್ಕೆ ನೆರವಾಗಿದೆ``

ಮಂಗಳೂರು, ಮಾರ್ಚ್.08:ಸ್ತ್ರೀಯನ್ನು ಮಾತೃ ಸ್ವರೂಪಿ ಎಂದು ಪರಿಗಣಿಸಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ.ಇಲ್ಲಿ ಸ್ತ್ರೀಯೇ ಸಮಾಜದ ಪ್ರಧಾನಳು,ಪೂಜನೀಯಳು,ಅಂತಹ ಸ್ತ್ರೀ ಇಂದು ಕರ್ನಾಟಕ ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘಟನೆಗಳ ಮೂಲಕ ಅತ್ಯಂತ ಸಬಲಳಾಗಿ ಸಮಾಜದ ಎಲ್ಲಾ ರಂಗಗಳಲ್ಲಿ ಯಶಸ್ಸಿನತ್ತ ದಾಪುಗಾಲು ಹಾಕಿದ್ದಾಳೆಯೆಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದ್ದಾರೆ. ಅವರು ಇಂದು ದ.ಕ. ಜಿಲ್ಲಾ ಪಂಚಾ ಯತ್,ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿ ಕಾರ,ಜಿಲ್ಲಾ ಮಹಿಳಾ ಮಂಡ ಲಗಳ ಒಕ್ಕೂಟ ಹಾಗೂ ಬೆಂಗ ಳೂರಿನ ಕರ್ನಾ ಟಕ ರಾಜ್ಯ ಮಹಿಳಾ ಆಯೋಗ ಇವರ ಜಂಟಿ ಆಶ್ರಯ ದಲ್ಲಿ ಮಂಗ ಳೂರಿನ ಪುರ ಭವನ ದಲ್ಲಿ ಏರ್ಪ ಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀ ಅತ್ಯಂತ ಸಂವೇದನಾಶೀಲಳು ಹಾಗೂ ವಿವೇಚನಾಶೀಲಳು ಇಂತಹ ಸ್ತ್ರೀಗೆ ತನ್ನ ಹಕ್ಕುಗಳನ್ನು ಪಡೆಯಲು ಪೂರ್ಣ ಸ್ವಾತಂತ್ರ್ಯವನ್ನು ಸರ್ಕಾರ ಹಾಗೂ ಸಮಾಜ ಕೊಟ್ಟಿದೆ.ಇದನ್ನು ದೇಶಾಭಿವೃದ್ಧಿ ಸಮಾಜದ ಪ್ರಗತಿಗಾಗಿ ಬಳಸಿಕೊಳ್ಳಬೇಕೇ ವಿನ:ಅದು ಸ್ವೇಚ್ಛಾಚಾರಕ್ಕೆ ನಾಂದಿಯಾಗಬಾರದು.ಭಾರತೀಯ ನಾರಿ ಅನೇಕ ವಿಧಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದಾಳೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಕೆ.ಟಿ.ಶೈಲಜಾಭಟ್ ಅವರು ಮಾತನಾಡಿ ಸಮಾಜ ಹಾಗೂ ಸರ್ಕಾರಗಳು ಸ್ತ್ರೀಗೆ ನೀಡಿರುವ ಸ್ಥಾನಮಾನಗಳನ್ನು ಬಳಸಿಕೊಂಡು ಇತರರಿಗೆ ದಾರಿದೀಪವಾಗಬೇಕೆಂದರು.ಜೀವನದ ಎಲ್ಲಾರಂಗಗಳಲ್ಲಿ ರಾಜಕೀಯ,ಆರ್ಥಿಕ,ಸಾಮಾಜಿಕ,ಧಾರ್ಮಿಕ ರಂಗಗಳಲ್ಲಿ ಸ್ತ್ರೀ ಯಶಸ್ವಿಯಾಗಿ ಜೀವನ ನಿಭಾಯಿಸುತ್ತಿದ್ದಾಳೆ ಆದ್ದರಿಂದ ಕಲಿತ ಮಹಿಳೆ ತನ್ನ ಕುಟುಂಬಕ್ಕೆ ಮಾರ್ಗದರ್ಶಕಳಾಗಬೇಕೆಂದರು.ಇಂದು ಮಹಿಳೆಯರ ಮೇಲೆ ದೌರ್ಜನ್ಯಗಳು ಪುರುಷರಿಂದಷ್ಟೇ ಆಗುತ್ತಿಲ್ಲ ಬದಲಾಗಿ ಒಬ್ಬ ಸ್ತ್ರೀ ಮತ್ತೊಬ್ಬ ಸ್ರ್ತೀ ಶೋಷಣೆ ಮಾಡುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾಳೆ ಇದು ನಿಲ್ಲಬೇಕು ಎಂದರು.ಉಪಾ ಧ್ಯಕ್ಷ್ಯೆ ಧನ ಲಕ್ಷ್ಮಿ ಜನಾ ರ್ಧನ್ ಮಾತ ನಾಡಿ ದರು.ಮಂಗ ಳೂರಿನ ಡಾ. ರತಿ ದೇವಿ ಯವರು ವೈದ್ಯ ಕೀಯ ಗರ್ಭ ಪಾತದ ನೂತನ ಗುಳಿಗೆ ಗಳ ಸಾಧಕ ಬಾಧಕ ಮತ್ತು ವೈದ್ಯ ಕೀಯ ಕಾನೂನು ಗಳು ಎಂಬ ವಿಷಯ ಕುರಿತು ಮಾತ ನಾಡಿದರು.ನಿಸರ್ಗ ದತ್ತ ಆಹಾರ ಕುರಿತಂತೆ ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್ ನ ವಿದ್ಯಾ ನಾಯಕ್ ಅವರು ಹಿತ್ತಲಗಿಡ ಅತ್ಯಂತ ಅಮೂಲ್ಯವಾದ ಪೋಷಕಾಂಶಗಳ ಆಗರ ಎಂಬುದನ್ನು ವಿವರಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎ.ಶಕುಂತಳಾ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ 2011-12 ನೇ ಸಾಲಿನಲ್ಲಿ 60 ಸಾವಿರ ಸ್ತ್ರೀಶಕ್ತಿ ಗುಂಪುಗಳ ರಚನೆಗೆ ಗುರಿ ನಿಗಧಿಪಡಿಸಲಾಗಿದೆ. 2010-11 ನೇ ಸಾಲಿನಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ಒಟ್ಟು 16 ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದ್ದು ಇದೇ ಅವಧಿಯಲ್ಲಿ 26 ಕೋಟಿ ರೂ.ಗಳ ಸಕಾಲದ ನೆರವು ಒದಗಿಸಲಾಗಿದೆಯೆಂದು ತಿಳಿಸಿದರು.ಜಿಲ್ಲೆಯ ಉತ್ತಮ ಅಂಗ ನವಾಡಿ ಕಾರ್ಯ ಕರ್ತೆ ಯರಾದ ಸಂಧ್ಯಾ ಆರ್ಯಾ ಪು, ಪುತ್ತೂರು ಪ್ರೇಮಾ ಲತಾ,ಮಂಗ ಳೂರು ತಾಲ್ಲೂಕು ರಂಜನಿ ಕಾಪಿ ಕಾಡು ಇವ ರನ್ನು ಸನ್ಮಾನಿ ಸಲಾಯಿತು. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಎಂದು ಗುರ್ತಿಸಲ್ಪಟ್ಟಿರುವ ಪುತ್ತೂರು ತಾಲೂಕಿನ ಸಂಪ್ಯಾದ ಸಾಧನಾ ಸ್ತ್ರೀಶಕ್ತಿ ಗುಂಪಿನ ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.