Wednesday, March 9, 2011

ಏ.4ರಿಂದ ಮಂಗಳೂರಿನಲ್ಲಿ ಆರ್ಮಿ ರಿಕ್ರೂಟ್ ಮೆಂಟ್ ರಾಲಿ

ಮಂಗಳೂರು, ಮಾರ್ಚ್.09:ಭಾರತೀಯ ಸೇನೆಯಲ್ಲಿ ಸಿಪಾಯಿ ಟೆಕ್ನಿಕಲ್, ಸಿಪಾಯಿ ಕ್ಲಾರ್ಕ್ , ನರ್ಸಿಂಗ್ ಸಹಾಯಕ, ಸಿಪಾಯಿ ಜಿಡಿ ಹಾಗೂ ಮಾಜಿ ಸೈನಿಕರಿಗಾಗಿ ಸಿಪಾಯಿ ಜಿಡಿ ಹುದ್ದೆಗಳ ಆಯ್ಕೆಗಾಗಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಏಪ್ರಿಲ್ 4ರಿಂದ 8ರವರೆಗೆ ರಿಕ್ರೂಟ್ ಮೆಂಟ್ ರಾಲಿಯನ್ನು ಆಯೋಜಿಸಲಾಗಿದೆ.

ಸಿಪಾಯಿ ಟೆಕ್ನಿಕಲ್ ಹುದ್ದೆಗಳಿಗೆ 17.5 ರಿಂದ 23 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ರಾಜ್ಯಾದ್ಯಂತದಿಂದ ಹಾಜರಾಗಬಹುದು. ಪಿಯುಸಿಯಲ್ಲಿ ಭೌತಶಾಸ್ತ್ರ, ಗಣಿತ, ರಸಾಯನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪಾಸಾಗಿರಬೇಕು. ಸಿಪಾಯಿ ಕ್ಲಾರ್ಕ್ ಹುದ್ದೆಗೆ ಪಿಯುಸಿಯಲ್ಲಿ ಕಲಾ ವಿಭಾಗ, ವಿಜ್ಞಾನ, ವಾಣಿಜ್ಯ ವಿಷಯಗಳಲ್ಲಿ ಶೇ. 50 ಅಂಕ, ಕನಿಷ್ಠ 40 ಅಂಕಗಳೊಂದಿಗೆ ಪಾಸಾಗಿರಬೇಕು. ನರ್ಸಿಂಗ್ ಸಹಾಯಕ ಹುದ್ದೆಗೆ ಪಿಯುಸಿಯಲ್ಲಿ ರಸಾಯನ, ಭೌತ, ಇಂಗ್ಲಿಷ್ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ಶೇ. 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಸಿಪಾಯಿ ಜಿ. ಡಿ ಹುದ್ದೆಗಳಿಗೆ ಹದಿನೇಳುವರೆಯಿಂದ 21ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಶೇ. 45 ಅಂಕಗಳೊಂದಿಗೆ ಪಾಸಾಗಿರಬೇಕು. ಈ ಪಂಗಡದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಅಭ್ಯರ್ಥಿಗಳಿಗೆ ಏಪ್ರಿಲ್ 5ರಂದು, ಹಾಸನ ಮತ್ತು ಧಾರವಾಡ ಅಭ್ಯರ್ಥಿಗಳಿಗೆ ಏಪ್ರಿಲ್ 6ರಂದು ಹಾಗೂ ಬಿಜಾಪುರ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಏಪ್ರಿಲ್ 7 ರಂದು ಆಯ್ಕೆ ನಡೆಯಲಿದೆ.
ಸಿಪಾಯಿ ಜಿ ಡಿ ಮಾಜಿ ಸೈನಿಕರಿಗೆ (ಡಿ ಎಸ್ ಸಿ) ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗೆ 48 ವರ್ಷದೊಳಗಿರಬೇಕು. ಆಯ್ಕೆ ದಿನಾಂಕ ಏಪ್ರಿಲ್ 7. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಸನ, ಕೊಡಗು ಬಿಜಾಪುರ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಅಭ್ಯರ್ಥಿಗಳಿಗೆ ಆಯ್ಕೆ ನಡೆಯಲಿದೆ. ಆಯ್ಕೆ ಬಯಸುವವರು ಸದೃಢರಾಗಿರಬೇಕು. ಅಗತ್ಯ ಸರ್ಟಿಫಿಕೇಟ್ ಗಳಿರಬೇಕು. ಹೆಚ್ಚಿನ ಮಾಹಿತಿಗೆ ಆರ್ಮಿ ರಿಕ್ರೂಟ್ ಮೆಂಟ್ ಆಫೀಸ್ ಕೂಳೂರು, ಮಂಗಳೂರು ದೂ.ಸಂ. 0824 2458376 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.