Friday, March 4, 2011

ಪುನರ್ವಸತಿ ಯೋಜನೆ ಅನುಷ್ಠಾನ: ಸ್ಥಳೀಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.04: ಕುದುರೆಮುಖ ರಾಷ್ಟ್ರೀಯ ಪುನರ್ವಸತಿ ಯೋಜನೆಯನ್ವಯ ಅರಣ್ಯದೊಳಗಿಂದ ಹೊರಬಂದು ವಾಸಿಸಲು ಒಪ್ಪುವ ಕುಟುಂಬಗಳಿಗೆ ಪರಿಹಾರ ಹಾಗೂ ಪೂರಕ ವ್ಯವಸ್ಥೆಗಳನ್ನು ನೀಡಲು ಪ್ರತೀ ಬುಧವಾರ ಸಂಬಂಧಪಟ್ಟ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವಾರಕ್ಕೊಂದರಂತೆ ಒಂದು ಪ್ರಕರಣ ಮೌಲ್ಯಮಾಪನ ಮಾಡುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಇಂದು ಬೆಳ್ತಂಗಡಿಯ ನಾರಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಬಳಿಕ ಕುತ್ಲೂರಿನ ಅಳಂಬ, ನೆಲ್ಲಿಪಡ್ಕದ ಮನೆಗಳಿಗೆ ಭೇಟಿ ನೀಡಿ ಸ್ಥಳಿಯರ ಅಭಿಪ್ರಾಯಗಳನ್ನು ಪಡೆದುಕೊಂಡರು. ಒಟ್ಟು 220 ಕುಟುಂಬಗಳಲ್ಲಿ ಶೇಕಡ 50 ಜನರು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿ ಅರ್ಜಿ ಕೊಟ್ಟಿದ್ದಾರೆ ಎಂದ ಜಿಲ್ಲಾಧಿಕಾರಿಗಳು, 13 ಕುಟುಂಬಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸಲಾಗಿದೆ. 82 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಪರಿಶೀಲನೆಯ ಹಂತದಲ್ಲಿದೆ. 10 ಲಕ್ಷ ರೂ.ವರೆಗಿನ ಪರಿಹಾರ ನೀಡಲಾಗುವುದು. ರೂ. ಹತ್ತು ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಹಾಗೂ ವಾಸಕ್ಕೆ ಜಮೀನು ನೀಡುವ ಬಗ್ಗೆಯೂ ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಪರಿ ಹಾರ ನೀಡಿಕೆ ಯನ್ನು 3 ವಿಭಾಗ ಗಳಾಗಿ ವಿಂಗ ಡಿಸಿದ್ದು, ಅರಣ್ಯ ದಲ್ಲಿ ವಾಸವಿ ರುವ ವರನ್ನು ಒತ್ತಾಯ ಪೂರ್ವಕ ವಾಗಿ ಯಾವುದೇ ಕಾರಣ ಕ್ಕೂ ಒಕ್ಕಲೆ ಬ್ಬಿಸು ವುದಿಲ್ಲ; ಮೊದಲ ಆದ್ಯತೆ ಸ್ವಯಂ ಪ್ರೇರಿತ ರಾಗಿ ಹೊರ ಬರುವ ವರಿಗೆ ನೀಡ ಲಾಗು ವುದು ಎಂದು ಜಿಲ್ಲಾಧಿ ಕಾರಿಗಳು ಸ್ಪಷ್ಟ ಪಡಿಸಿ ದರು.ಕುದುರೆ ಮುಖ ವನ್ಯ ಜೀವಿ ಉಪ ವಿಭಾಗ ದ ಉಪ ಅರಣ್ಯ ಸಂರ ಕ್ಷಣಾ ಧಿಕಾರಿ ಪ್ರಕಾಶ್ ನಡಾ ಲ್ಕರ್, ಉಪ ಕಾರ್ಯ ದರ್ಶಿ ಶಿವ ರಾಮೇ ಗೌಡ,ಪುತ್ತೂರು ಎ. ಸಿ ಡಾ. ಹರೀಶ್ ಕುಮಾರ್, ಪ್ರೊಬೇಷನರಿ ಐ ಎ ಎಸ್ ಸಿಂ ದೂರಿ ದಾಸರಿ ನಾಯಕ್, ತಹ ಸೀಲ್ದಾರ್ ಪ್ರಮೀಳ, ಕೃಷಿ ಇಲಾಖೆ ಜಂಟಿ ನಿರ್ದೇ ಶಕ ರಾದ ಪದ್ಮಯ್ಯ ನಾಯಕ್, ತೋಟ ಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.