Tuesday, March 15, 2011

ಭತ್ತದ ಬೆಳೆ ಪ್ರೋತ್ಸಾಹಿಸಲು ವಿಶೇಷ ನೀತಿಗೆ ಶಿಫಾರಸ್ಸು

ಮಂಗಳೂರು, ಮಾರ್ಚ್.15: ಕರಾವಳಿಯಲ್ಲಿ ಭತ್ತದ ಕೃಷಿಯನ್ನು ಪ್ರೋತ್ಸಾಹಿಸಲು ವಿಶೇಷ ನೀತಿ ರಚಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಜಿಲ್ಲಾ ಪಂಚಾಯಿತಿ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.ಇಂದು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭತ್ತದ ಕೃಷಿ ರಕ್ಷಿಸಲು ಜಿಲ್ಲಾ ಪಂಚಾಯತ್ ನಿಂದ ಶಿಫಾರಸ್ಸು ವರದಿಯನ್ನು ಕಳುಹಿಸಲು ನಿರ್ಧರಿಸಿದರು.

ಕರಾ ವಳಿ ಗಳಲ್ಲಿ ಭತ್ತದ ಬೆಳೆ ವಿ ಸ್ತೀರ್ಣ ವ್ಯಾಪ್ತಿ ಕಡಿಮೆ ಯಾಗು ತ್ತಿದ್ದು, ಕೃಷಿ ಭೂಮಿ ಯನ್ನು ತೋಟ ಗಾರಿಕಾ ಬೆಳೆ ಗಳಿ ಗಾಗಿ ಹಾಗೂ ಕೃಷಿ ಯೇತರ ಉದ್ದೇ ಶಕ್ಕಾಗಿ ಬಳಸ ಲಾಗು ತ್ತಿದೆ ಎಂದು ಜಂಟಿ ಕೃಷಿ ನಿರ್ದೇ ಶಕ ರಾದ ಪದ್ಮಯ್ಯ ನಾಯಕ್ ಅವರು ಹೇಳಿ ದಾಗ, ಜಿಲ್ಲಾ ಕೃಷಿಕ ಸಮಾಜ ದ ಅಧ್ಯಕ್ಷ ರಾದ ಎಸ್ ಡಿ ಸಂಪ ತ್ ಸಾ ಮ್ರಾಜ್ಯ ಅವರು ದನಿ ಗೂಡಿ ಸಿದರು. ಈ ಸಂಬಂಧ ಸವಿವರ ಚರ್ಚೆ ನಡೆದು ಕೇರಳದಲ್ಲಿ ಭತ್ತದ ಕೃಷಿ ಅಭಿವೃದ್ಧಿಗೆ ವಿಶೇಷ ನೆರವು ಹಾಗೂ ಕೃಷಿ ಭೂಮಿಯಿದ್ದು ಆಳುಗಳ ಕೊರತೆ ಇದ್ದವರಿಗೆ ಭತ್ತ ಕೃಷಿ ಕಾರ್ಯಪಡೆ ಎಂಬ ತಂಡ ಸ್ವತ: ಜಮೀನಿಗೆ ಬಂದು ಕೃಷಿ ಮಾಡಲು ನೆರವಾಗುತ್ತಿದೆ ಎಂದರು. ಇದೇ ಮಾದರಿಯನ್ನು ನಮ್ಮ ಕರಾವಳಿಯಲ್ಲಿ ಅಳವಡಿಸಲು ಶಿಫಾರಸ್ಸು ಮಾಡುವ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ. ಶಿವಶಂಕರ್ ಅವರು ಹೇಳಿದರು. ನಮ್ಮ ಯುವ ಜನಾಂಗ ಕೃಷಿಯಿಂದ ವಿಮುಖವಾಗುತ್ತಿದ್ದು ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ; ಪಠ್ಯ ಕ್ರಮದಲ್ಲಿ ಕೃಷಿ ಸಂಬಂಧಿ ಪಾಠಗಳನ್ನು ಅಳವಡಿಸಬೇಕಿದೆ ಹಾಗೂ ಸರ್ವ ಶಿಕ್ಷಣ ಅಭಿಯಾನದಡಿ ಚಿಣ್ಣರ ಜಿಲ್ಲಾ ದರ್ಶನದಲ್ಲಿ ಮಕ್ಕಳಿಗೆ ಪ್ರಗತಿಪರ ರೈತರ ತೋಟ ವೀಕ್ಷಣೆಯನ್ನು ಕಡ್ಡಾಯ ಮಾಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕೃಷಿ ಅಭಿವೃದ್ಧಿಯಲ್ಲಿ ಬೆಳ್ತಂಗಡಿ ಕೃಷಿ ತರಬೇತಿ ಕೇಂದ್ರ ಅವಿರತವಾಗಿ ಶ್ರಮಿಸುತ್ತಿದ್ದು, ಬೆಳ್ತಂಗಡಿಯ ಕೃಷಿ ಪಂಡಿತರ ಕೊಡುಗೆಯನ್ನು ಜಂಟಿ ಕೃಷಿ ನಿರ್ದೇಶಕರು ಪ್ರಸ್ತಾಪಿಸಿದರು.
ಶುದ್ಧ ಕುಡಿಯುವ ನೀರು ಯೋಜನೆ, ಇಂದಿರಾ ಆವಾಸ್ ಯೋಜನೆ, ಅಂಬೇಡ್ಕರ್ ಯೋಜನೆಯಡಿ ಪ್ರಗತಿ ದಾಖಲಿಸಿ ಅನುಪಾಲನಾ ವರದಿ ನೀಡುವಂತೆ ಸಿ ಇ ಒ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಾಧನೆ ಕಡಿಮೆಯಾಗಿದ್ದು, ಇವರು ಮಾರ್ಕೆಟಿಂಗ್ ನಲ್ಲಿ ವೈಫಲ್ಯ ವಾಗಿದ್ದು, ನಿಗದಿತ ಗುರಿ ಸಾಧಿಸಬೇಕೆಂದು ಸಿ ಇ ಒ ಅವರು ಸೂಚಿಸಿದರು. ಕಟೀಲಿನಲ್ಲಿ ನಂದಿನಿ ನದಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಕಲುಷಿತಗೊಂಡಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿ ಇ ಒ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮಕೈಗೊಂಡು ಅನುಪಾಲನಾ ವರದಿ ತರಿಸಲು ಸೂಚಿಸಿದರು. ತಾಲೂಕು ಮಟ್ಟ ದಲ್ಲಿ ಪ್ರಾಥ ಮಿಕ ಆರೋಗ್ಯ ಕೇಂದ್ರ ಗಳು ಸು ವ್ಯವಸ್ಥಿ ತವಾಗಿ ಕಾರ್ಯಾ ಚರಿಸಲು ಆರೋಗ್ಯ ರಕ್ಷಾ ಸಮಿತಿ ಗಳಿದ್ದು, ರಾ ಷ್ಟ್ರೀಯ ಗ್ರಾ ಮೀಣ ಆ ರೋಗ್ಯ ಅಭಿಯಾ ನದಡಿ ಆಸ್ಪತ್ರೆ ಗಳನ್ನು ಸುಸ್ಸಜ್ಜಿ ತವಾಗಿ ಡಬ ಹುದು ಎಂದು ಜಿಲ್ಲಾ ಆ ರೋಗ್ಯ ಮತ್ತು ಕು ಟುಂಬ ಕಲ್ಯಾಣಾ ಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
112 ಕೆರೆಗಳ ಅಭಿವೃದ್ಧಿಗೆ 35 ಕೋಟಿ ರೂ. ಪ್ರಸ್ತಾವನೆ:ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 112 ಕೆರೆಗಳ ಪುನಶ್ಚೇತನಕ್ಕೆ/ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ನಿಂದ 35 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದ ಕಾರ್ಯಕಾರಿ ಅಭಿಯಂತರರು ತಿಳಿಸಿದರು. 26 ಕೋಟಿ ರೂ.ಗಳ ಪ್ರಸ್ತಾವನೆ ಇಂಜಿನಿಯರ್ ವಿಭಾಗದಿಂದ ಹಾಗೂ ಸಣ್ಣ ನೀರಾವರಿ ಇಲಾಖೆಯ 31 ಕಿಂಡಿ ಅಣೆಕಟ್ಟುಗಳಿಗಾಗಿ 8.92 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇನ್ನುಳಿದ 5 ಕೋಟಿ ರೂ.ಗಳು ಮಹಾನಗರಪಾಲಿಕೆ ವ್ಯಾಪ್ತಿಗೆ ಬರಲಿದೆ ಎಂದರು. ಮಳೆಗಾಲದೊಳಗೆ ಈ ಸಂಬಂಧ ಕಾಮಗಾರಿ ಕೈಗೆತ್ತಿ ಮುಗಿಸಲು ನಿರ್ದೇಶನವಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು. ಇನ್ನುಳಿದಂತೆ ಸಾಮಾನ್ಯ ಯೋಜನೆಯಡಿ ಕೊಳವೆ ನೀರು ಸರಬರಾಜು ಸರಬರಾಜು ಮತ್ತು ನಲ್ಲಿ ನೀರು ಸರಬರಾಜು ವ್ಯವಸ್ಥೆಯಡಿ ಪ್ರಸಕ್ತ ವರ್ಷದಲ್ಲಿ 69 ಯೋಜನೆಗಳಿಗೆ ಸಂಪರ್ಕ ನೀಡಲಾಗಿದೆ. 17 ಯೋಜನೆಗಳು ಬಾಕಿ ಇದೆ ಎಂದು ಕಾರ್ಯಕಾರಿ ಅಭಿಯಂತರರು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಧನಲಕ್ಷ್ಮೀ, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್, ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಮತ್ತು ಯೋಜನಾ ನಿರ್ದೇಶಕರಾದ ಸೀತಮ್ಮ ಅವರು ಉಪಸ್ಥಿತರಿದ್ದರು.