Thursday, March 10, 2011

ಹೊಸಂಗಡಿ ಗ್ರಾಂ.ಪಂ.ಗೆ ರಾಜ್ಯ ಮಟ್ಟದ ನೈರ್ಮಲ್ಯ ರತ್ನ ಪ್ರಶಸ್ತಿ

ಮಂಗಳೂರು,ಮಾರ್ಚ್.10:ದಕ್ಷಿಣ ಕನ್ನಡ ಜಿಲ್ಲೆಯ ಹೊಸಂಗಡಿ ಗ್ರಾಮ ಪಂಚಾಯತ್ ರಾಜ್ಯ ಮಟ್ಟದ `` ನೈರ್ಮಲ್ಯ ರತ್ನ ಪ್ರಶಸ್ತಿ `` ಗೆ ಆಯ್ಕೆಯಾಗಿದ್ದು ಪ್ರಶಸ್ತಿಯನ್ನು ಮಾರ್ಚ್ 19 ರಂದು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಜರಗುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯ ಸಂಸ್ಥೆ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾದ ಡಾ.ಪಿ.ಬೋರೇಗೌಡರು ತಿಳಿಸಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆ ಸಂ ಪೂರ್ಣ ಸ್ವಚ್ಛತಾ ಜಿಲ್ಲೆಯಾ ಗಿದ್ದರೆ ಜಿಲ್ಲೆಯ ಮಲೆ ನಾಡು ಪ್ರದೇ ಶದ ಬೆಳ್ತಂ ಗಡಿ ತಾಲ್ಲೂ ಕಿನ ಹೊಸಂ ಗಡಿ ಗ್ರಾಮ ಪಂಚಾ ಯತ್ ರಾಜ್ಯ ಮಟ್ಟದ ನೈ ರ್ಮಲ್ಯ ರತ್ನ ಪ್ರಶಸ್ತಿ ಗೆ ಆಯ್ಕೆಯಾ ಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ವಾಗಿದೆ. ಹೊಸಂ ಗಡಿ ಮತ್ತು ಬಡ ಕೋಡಿ ಗ್ರಾಮ ಗಳನ್ನು ಹೊಂದಿ ರುವ ಗ್ರಾಮ ಪಂಚಾ ಯತ್ 4058.35 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು,2098 ಪುರುಷರು 2304 ಮಹಿಳೆಯರನ್ನು ಹೊಂದಿದೆ. ಇವರಲ್ಲಿ 711 ಪರಿಶಿಷ್ಟ ಜಾತಿ ಹಾಗೂ 315 ಪರಿಶಿಷ್ಟ ಪಂಗಡಕ್ಕೆ ಸೇರಿದ ವರಾ ಗಿದ್ದಾರೆ. ಇಲ್ಲಿ 946 ಕುಟುಂ ಬಗ ಳಿದ್ದು 378 ಬಿಪಿಎಲ್ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿದೆ.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9 ಅಂಗನವಾಡಿಗಳು, 7 ಸರಕಾರದಿಂದ ತೆಗೆದಿರುವ ತೆರೆದ ಬಾವಿಗಳು 39 ಕೈಪಂಪುಗಳು ಇವೆ. 4ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲಾ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ 102 ಎಸ್ಜಿಎಸ್ವೈನ 16, ನಾಗರೀಕ ಸೇವಾ ಟ್ರಸ್ಟ್ನ 35, 93 ನವೋದಯ ಸ್ವಸಹಾಯ ಸಂಘಗಳು ಸೇರಿ ಒಟ್ಟು 250 ಸೇವಾ ಸಂಸ್ಥೆಗಳು ಇವೆ. 4 ಸರಕಾರಿ ಶಾಲೆಗಳು,1 ಪ್ರೌಢ ಶಾಲೆ 1 ಉಪ ಆರೋಗ್ಯ ಕೇಂದ್ರ ಹೊಂದಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮದ ಜನರೂ ಸೌಹಾರ್ಧವಾಗಿ ಜೀವಿಸುತ್ತಿದ್ದಾರೆ. ಇಂತಹ ಸರ್ವಾಂಗೀಣ ಪ್ರಗತಿದಾಯಕ ಗ್ರಾಮ ಪಂಚಾಯತ್ ನೈರ್ಮಲ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಕೀರಿಟಪ್ರಾಯವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಲ್ಲದೆ ಬೆಳ್ತಂಗಡಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಗಳಾದಿಯಾಗಿ ಹಾಜರಾಗ ಬಹುದಾಗಿದೆ.