ಜ್ಞಾನಾ ಧಾರಿತ ಮಾಹಿತಿ ಹಾಗೂ ಜೈವಿಕ ತಂತ್ರ ಜ್ಞಾನ ಕ್ಷೇತ್ರ ದಲ್ಲಿ ಬೆಂಗ ಳೂರು ವಿಶ್ವ ಮಾನ್ಯತೆ ಪಡೆ ದಿರು ವುದು ರಾಜ್ಯಕ್ಕೆ ಹೆ ಮ್ಮೆಯ ಸಂ ಗತಿ ಎಂದು ಹೇಳಿದ ಅವರು, ನ್ಯಾನೋ ತಂತ್ರ ಜ್ಞಾನ 21ನೆ ಶತ ಮಾನ ದಲ್ಲಿ ಎಲ್ಲಾ ಕ್ಷೇ ತ್ರದಲ್ಲಿ ಕ್ರಾಂತಿ ಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿದಂತೆ ಈ ಭರವಸೆಯ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತ ನ್ಯಾನೋಪಾರ್ಕಿಂಗ್ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಂಡಿದೆ ಎಂದವರು ತಿಳಿಸಿದರು.ರಾಜ್ಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಬರಗಾಲ, ಜಲಕ್ಷಾಮ, ಕೃಷಿ ಕ್ಷೇತ್ರದ ಸಮಸ್ಯೆಗಳು, ಸಮುದ್ರದ ಕೃಷಿ ಉತ್ಪನ್ನಗಳ ಸಂಗ್ರಹಣೆ, ಮೌಲ್ಯವರ್ಧನೆಗಾಗಿ ನಿರಂತರ ಹಸಿರು ಕ್ರಾಂತಿ, ಸಮುದ್ರದ ಮೀನು ಉತ್ಪಾದನೆಯ ಸುಸ್ಥಿರ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಸಮಸ್ಯೆ, ಹವಾಮಾನ ಬದಲಾವಣೆ ಮೊದಲಾದವುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಹೊಸ ಸಂಶೋಧನೆ ಮತ್ತು ಅವಿಷ್ಕಾರಗಳು ಮೂಡಿಬರಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.ವಿಜ್ಞಾನ ಜಾಗೃತಿ ಮತ್ತು ವಿಜ್ಞಾನ ಶಿಕ್ಷಣಕ್ಕೆ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾ ಕ್ಷೇತ್ರದಲ್ಲಿ ನೀಡುವ ಅನುದಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದವರು ಈ ಸಂದರ್ಭ ತಿಳಿಸಿದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ಕುಡಿಯುವ ನೀರು, ಬಡತನೆ, ಅಪೌಷ್ಠಿಕತೆ, ವಿದ್ಯುತ್ ಮೊದಲಾದ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಜ್ಞಾನಿಗಳು ಸೂಕ್ತ ಮಾಹಿತಿಯನ್ನು ನೀಡಬೇಕಾಗಿದೆ ಎಂದರು.
ರಾಜ್ಯ ಸರಕಾರವು ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕಾ ಸಚಿವ ಆನಂದ್ ವಸಂತ್ ಅಸ್ನೋಟಿಕ್,ಪ್ರತಿ ಜಿಲ್ಲೆಯಲ್ಲಿಯೂ ವಿಜ್ಞಾನ ಉಪ ಕೇಂದ್ರಗಳ ನಿರ್ಮಾಣಕ್ಕೆ ರಾಜ್ಯ ಸರಕಾರವು ತಲಾ 2.6 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಈಗಾಗಲೇ ತಲಾ 1.3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಧಾರವಾಡದ ವಿಜ್ಞಾನಕೇಂದ್ರ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದ್ದರೆ, ಪಿಲಿಕುಳ ವಿಜ್ಞಾನ ಕೇಂದ್ರ ಜೂನ್ ತಿಂಗಳಲ್ಲಿ ಆರಂಭಗೊಳ್ಳುವುದಾಗಿ ತಿಳಿಸಿದರು.



















