Sunday, April 7, 2013

ಮುಡಿಪುನಲ್ಲಿ ಸ್ವೀಪ್ ಕಾರ್ಯಕ್ರಮ

ಮಂಗಳೂರು, ಏಪ್ರಿಲ್.07 : ಸಮೂಹ ಮಾಧ್ಯಮಗಳು ತಲುಪದ ಪ್ರದೇಶಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಮತದಾನದ ಬಗ್ಗೆ ಜನರಿಗೆ ನೀಡುವ ಮಾಹಿತಿ ಅತಿ ಅಮೂಲ್ಯವಾದ್ದದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾಅಧಿಕಾರಿ ಹರ್ಷ ಗುಪ್ತ ಹೇಳಿದರು.
ಅವರಿಂದು ಮುಡಿಪು ವಿನ ನವ ಶಿಕ್ಷಣ, ನವ ಚೇತನ ಕೇಂದ್ರ ದಲ್ಲಿ ಕೊರಗ ರಿಗಾಗಿ ಹಮ್ಮಿ ಕೊಂಡಿದ್ದ ಮತ ದಾನದ ಬಗ್ಗೆ ಗಿನ ಮಾಹಿತಿ ಕಾರ್ಯ ಕ್ರಮ ವನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು.ಹಿಂದು ಳಿದ ಪ್ರದೇಶ ಗಳ, ಗ್ರಾ ಮೀಣ ಜನ ರಲ್ಲಿ ಮತದಾ ನದ ಬಗ್ಗೆ ಅರಿವು ಮೂಡಿ ಸುವುದು ನಮ್ಮ ಆದ್ಯ ಕರ್ತವ್ಯ ಎಂದ ಅವರು, ಯಾವುದೇ ಆಸೆ, ಆಮಿಷ ಗಳಿಗೆ ಒಳ ಗಾಗದೆ ಎಲ್ಲರೂ ಮತ ದಾನ ಮಾಡಿ ಎಂದರು. ಗ್ರಾಮೀಣ ರಿಗೆ ಪ್ರೇರ ಪಣೆ ನೀಡುವ ಉತ್ತಮ ಕೆಲಸ ಗಳು ಜಿಲ್ಲೆ ಯಲ್ಲಿ ನಿರಂತರ ಮುಂದು ವರಿ ಯಲಿ ಎಂದು ಶುಭ ಹಾರೈ ಸಿದರು.
ಕಾರ್ಯ ಕ್ರಮ ದಲ್ಲಿ ಪಾಲ್ಗೊಂ ಡಿದ್ದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವಾ ಹಕ ಅಧಿ ಕಾರಿ ಡಾ ಕೆ ಎನ್ ವಿಜಯ ಪ್ರಕಾಶ್ ಅವರು, ಗ್ರಾಮೀಣ ಪ್ರದೇಶ ದಲ್ಲಿ ಸ್ವೀಪ್ ಕಾರ್ಯ ಕ್ರಮ ಪರಿಣಾ ಮಕಾ ರಿಯಾಗಿ ಅನು ಷ್ಠಾನಕ್ಕೆ ಜಿಲ್ಲಾ ಡಳಿತ ಸೂಕ್ತ ಕ್ರಮ ಕೈ ಗೊಂಡಿದ್ದು ಸರ್ಕಾರಿ ಆಡಳಿ ತದೊಂ ದಿಗೆ ಸರ್ಕಾ ರೇತರ ಸಂಘ ಸಂಸ್ಥೆ ಗಳ ನೆರ ವನ್ನು ಪಡೆಯ ಲಾಗಿದೆ ಎಂದರು.
ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್, ನರೇಗಾ ಒಂಬಡ್ಸ್ ಮನ್ ಶೀನಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಅವರು ಉಪಸ್ಥಿತರಿದ್ದರು. ಗಿರಿ-ಸಿರಿ ತಂಡದಿಂದ ಕೊರಗರ ಡೋಲು ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.