Thursday, April 25, 2013

ಶಾಂತ ಮತ್ತು ನ್ಯಾಯಯುತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ


ಮಂಗಳೂರು, ಏಪ್ರಿಲ್. 25.: ರಾಜ್ಯ ವಿಧಾನಸಭಾ ಚುನಾವಣೆ -2013 ನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ನಡೆಸಲು ಸಮಗ್ರ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
              
     ಇಂದು ಮಂಗ ಳೂರು ಆಕಾಶ ವಾಣಿ ಯಲ್ಲಿ ನೇರ ಫೋನ್ ಇನ್ ಕಾರ್ಯ ಕ್ರಮ ದಲ್ಲಿ ಮಾತ ನಾಡು ತ್ತಿದ್ದ ಅವರು, ಜಿಲ್ಲೆ ಯಾದ್ಯಂತ ಚುನಾ ವಣಾ ನೀತಿ ಸಂಹಿತೆ ಉಲ್ಲಂಘ ನೆಯಾ ಗದಂತೆ ನಿಗಾ ವಹಿಸಲು 2,500 ಅಧಿ ಕಾರಿ ಗಳು ಕಾರ್ಯ ತತ್ಪ ರರಾ ಗಿದ್ದಾರೆ.
          ಚುನಾವಣಾ ಕೆಲಸದಲ್ಲಿ ನಿರತವಾಗಿರುವ ಸುಮಾರು 8,500 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೊದಲ ಸುತ್ತಿನ ತರಬೇತಿ ನೀಡಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಚುನಾವಣೆ ಸಂಬಂಧಿ ಯಾವುದೇ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕಂಟ್ರೋಲ್ ರೂಮ್ 1077 ಸ್ಥಾಪಿಸಲಾಗಿದೆ.
ಮತದಾನದ ಪ್ರಮಾಣದಲ್ಲಿ ಹೆಚ್ಚಳ ದಾಖಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಗೌಪ್ಯ ಮತದಾನಕ್ಕೆ ಹಾಗೂ ಯಾವುದೇ ಆಮಿಷಗಳಿಗೆ ಮತ್ತು ಬೆದರಿಕೆಗೆ ಮಣಿದು ಮತದಾನ ಮಾಡದಿರಲು ಮತಗಟ್ಟೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲದಕ್ಕೂ ಪುರಾವೆ ಬೇಕಿರುವುದಕ್ಕೆ ವಿಡಿಯೊಗ್ರಫಿ ನಡೆಯಲಿದೆ ಎಂದು ಕೇಳುಗಳ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.
ಬಿಎಲ್ ಒ ಗಳು ವೋಟರ್ ಸ್ಲಿಪ್ ವಿತರಿಸುವಲ್ಲಿ ಯಾವುದೇ ನ್ಯೂನತೆಗಳಿಗೆ ಅವಕಾಶ ನೀಡದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಅಕಸ್ಮಾತ್ ಆಗಿ ವಿತರಣೆಯಲ್ಲಿ ತೊಂದರೆಯಾದರೂ ಮತದಾನದಂದು ಬಿಎಲ್ ಒಗಳ ಮತದಾನ ಕೇಂದ್ರದ ಬಳಿ ಇರುವುದರಿಂದ ಅರ್ಹ ಮತದಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕಾದುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಕೇಳುಗರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದರು.
ಮತದಾರರು ಮತದಾನ ಕೇಂದ್ರಕ್ಕೆ ತೆರಳಲು ತಮ್ಮ ವಾಹನಗಳನ್ನು ಉಪಯೋಗಿಸಬಹುದು. ಪಕ್ಷಗಳಿಂದ ವಾಹನ ವ್ಯವಸ್ಥೆ ಮಾಡುವುದು ಹಾಗೂ ಮತದಾರರನ್ನು ಮತಗಟ್ಟೆಗೆ ತಲುಪಿಸುವುದು ಅಪರಾಧ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕೆ ಉಪಯೋಗಿಸುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನದ ದಿನ ಮತದಾರರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸುವ ಉದ್ದೇಶದಿಂದ ಕಾಲೇಜು ಬಸ್ಸುಗಳ ನೆರವು ಪಡೆಯಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅಶಕ್ತರು ಮತ್ತು ಅಂಗವಿಕಲರು ಮತದಾನ ಮಾಡಲು ಪೂರಕವಾಗುವಂತೆ ರಾಂಪ್ ಗಳನ್ನು ಹಾಗೂ 18 ವರ್ಷ ಮೇಲ್ಪಟ್ಟವರ ನೆರವು ಪಡೆಯಬಹುದು. ಮತದಾನ ಕೇಂದ್ರಗಳಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲು ಕಾರ್ಮಿಕ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಹಾಗಾಗಿ ಎಲ್ಲ ಕಾರ್ಮಿಕರ ಮತದಾನ ಮಾಡಿ ಎಂದು ಕಾರ್ಮಿಕರೊಬ್ಬರ ಫೋನ್ ಕರೆಗೆ ಉತ್ತರಿಸಿದರು.
ಯಾವುದೇ ಅಕ್ರಮಗಳಿಗೆ ಸಂಬಂಧಿಸಿದ ಪುರಾವೆ ನೀಡಲು 1077 ಗೆ ಕರೆ ಮಾಡಿ ಇಂತಹ ವಿಷಯಕ್ಕೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಬೇಕಿದೆ ಎಂದರೆ ತಾನು ಲಬ್ಯ ಎಂದು ಕೇಳುಗರ ಪ್ರಶ್ನೆಗೆ ಉತ್ತರಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಡಾ ವಸಂತಕುಮಾರ್ ಪೆರ್ಲ ಅವರು ಫೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು.