Monday, April 22, 2013

ಎಂ ಸಿ ಎಂ ಸಿ ಸಮಿತಿ ಸಭೆ

ಮಂಗಳೂರು,ಏಪ್ರಿಲ್.22 : ಮತದಾರರನ್ನು ತಲುಪಲು ಅಪರೋಕ್ಷವಾಗಿ ಸಮೂಹ ಮಾಧ್ಯಮಗಳ ನೆರವು ಪಡೆದು ಸುದ್ದಿಯಲ್ಲಿರುವ ಅಭ್ಯರ್ಥಿಗಳ ಪ್ರಕಟಿತ ಸುದ್ದಿಗಳ ಮೇಲೆ ನಿರಂತರ ನಿಗಾ ವಹಿಸಲಾಗಿದ್ದು, ಸೂಕ್ತ ಸಮಯದಲ್ಲಿ ಅವರಿಗೆ ನೋಟೀಸು ಜಾರಿಯ ಜೊತೆಗೆ ಖರ್ಚು ವೆಚ್ಚ ರಿಜಿಸ್ಟರ್ ನಲ್ಲೂ ನಮೂದಿಸುವ ಕಾರ್ಯದಲ್ಲಿ ಎಂ ಸಿ ಎಂ ಸಿ ಸಮಿತಿ ನಿರತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ  ಹರ್ಷ ಗುಪ್ತ ಅವರು ಹೇಳಿದರು.
ಪ್ರತಿ ನಿತ್ಯ ಈ ಸಂಬಂಧ ಜಿಲ್ಲಾ ವಾರ್ತಾ ಇಲಾಖೆ ಯಲ್ಲಿ ನಡೆ ಯುವ ಎಂಸಿ ಎಂಸಿ ಸಮಿತಿ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. ಮುಖ್ಯ ವಾಗಿ ಒಂದು ಕೇಬಲ್ ನ್ಯೂಸ್ ಚಾನೆಲ್ ಈ ಪ್ರ ಕ್ರಿಯೆ ಯಲ್ಲಿ ನಿರತ ವಾಗಿದ್ದು, ಅವರಿಗೆ ಎಚ್ಚರಿಕೆ ನೋಟೀಸು ಹಾಗೂ ಅಭ್ಯರ್ಥಿಗಳಿಗೆ ನೋಟೀಸು ನೀಡಲು ಅವರು ಸೂಚಿಸಿದರು.
ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಖುದ್ದಾಗಿ ಎಲ್ಲ ಪತ್ರಿಕೆಗಳಿಗೆ ತಲುಪಿಸುತ್ತಿರುವ ರೀತಿಯ ಬಗ್ಗೆಯೂ ಸಭೆ ಚರ್ಚಿಸಿತು. ಸುದ್ದಿಯ ಮಹತ್ವವಿಲ್ಲದ ಸುದ್ದಿಗಳು ಭಾವಚಿತ್ರಗಳೊಂದಿಗೆ ಸುದ್ದಿಯಾಗಿ ಪ್ರಕಟಗೊಳ್ಳುತ್ತಿರುವ ಬಗ್ಗೆ, ಸ್ಥಳೀಯ ಚಾನೆಲ್ ಗಳಲ್ಲಿ ಬಂದ ಸುದ್ದಿಗಳೇ ವಿವಿಧ ರೂಪದಲ್ಲಿ 24 ಗಂಟೆಯೂ ಕಳೆದ ಐದಾರು ದಿನಗಳಿಂದ ಮರುಪ್ರಸಾರಗೊಳ್ಳುತ್ತಿರುವ ಸಭೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ತೀರ್ಮಾನಿಸಿತು.
ನೇರವಾಗಿ 'ಕಾಸಿಗಾಗಿ ಸುದ್ದಿ'ಯನ್ನಾಗಿ ಇಂತಹ ಸುದ್ದಿಗಳನ್ನು ಪರಿಗಣಿಸುವ ಬಗ್ಗೆಯೂ ಸಭೆ ಚರ್ಚಿಸಿತು.
ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಅಭ್ಯರ್ಥಿಗಳು ತಾವು ಮತದಾರರನ್ನು ಓಲೈಸಲು ಸುದಿಯಲ್ಲದ ಬಾವಚಿತ್ರಗಳನ್ನು ಸುದ್ದಿಯನ್ನಾಗಿ ಪ್ರಕಟಪಡಿಸುತ್ತಿರುವುದು ಖರ್ಚು ವೆಚ್ಚಕ್ಕೆ ಹಾಕುವುದಲ್ಲದೆ ಅದನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರನ್ನೊಳಗೊಂಡಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.