Tuesday, April 2, 2013

ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ನಿರತ ಅಧಿಕಾರಿಗಳಿಗೆ ವಾಕಿಟಾಕಿ

ಮಂಗಳೂರು, ಏಪ್ರಿಲ್.02 : ಸದಾಚಾರ ಸಂಹಿತೆಯನ್ನೊಳಗೊಂಡಂತೆ ಚುನಾವಣಾ ಮಾಹಿತಿ ಸಂಬಂಧ ಅಧಿಕಾರಿಗಳಿಗೆ ನಿರಂತರ ನಿರ್ದೇಶನ ನೀಡಲು ಚುನಾವಣೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಎಲ್ಲ ಅಧಿಕಾರಿಗಳಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ವಾಕಿ ಟಾಕಿ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಏಪ್ರಿಲ್ ಒಂದರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದರು.
              ಎಲ್ಲ ಸೆಕ್ಟರ್ ಮ್ಯಾಜಿ ಸ್ಟ್ರೇಟ್, ರಿಟ ರ್ನಿಂಗ್ ಆಫೀ ಸರ್ಸ್, ಅಸಿ ಸ್ಟೆಂಟ್ ರಿಟ ರ್ನಿಂಗ್ ಆಫೀ ಸರ್ಸ್ ಹಾಗೂ ತಹಸೀ ಲ್ದಾರ್ ಗಳ ನ್ನೊಳ ಗೊಂಡಂ ತೆ ಎಲ್ಲ ಅಧಿ ಕಾರಿ ಗಳಿಗೆ ವಾಕಿ ಟಾಕಿ ನೀಡು ವುದರಿಂದ ಸಂವಹನ ಸುಲಭವಾಗಲಿದೆ. ಜಿಲ್ಲೆಯಾದ್ಯಂತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಹಾಗೂ ನಿರ್ದೇಶನ ನೀಡಲು ಈ ಸಂಪರ್ಕ ವ್ಯವಸ್ಥೆ ನೆರವಾಗಲಿದೆ ಎಂದರು. 2009ರಲ್ಲಿ ಬೀದರ್ ಜಿಲ್ಲೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿತ್ತು. ಇದನ್ನು ಇಲ್ಲೂ ಅಳವಡಿಸಲು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ.
ಇದರ ಜೊತೆಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನ್ ಲೈನ್ ವ್ಯವಸ್ಥೆಯಲ್ಲಿ ಇಲಾಖೆಗಳು ಉತ್ತಮವಾಗಿದ್ದು, ಎಲ್ಲರೂ ಈ ಮೇಲ್ ಮುಖಾಂತರ ಮಾಹಿತಿ ಸಲ್ಲಿಸುತ್ತಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯ ಎನ್ ಐ ಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸದಾಚಾರ ಸಂಹಿತೆ ಉಲ್ಲಂಘನೆ ಮಾಹಿತಿಗೆ ಪ್ರತ್ಯೇಕ ಫಾರ್ಮ್ಯಾ ಟ್ ಒಂದನ್ನು ರೂಪಿಸಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಪಾಸ್ ವರ್ಡ್ ನೀಡಿ ಅವರೇ ಸ್ಥಳೀಯವಾಗಿ ಈ ಫಾರ್ಮ್ಯಾಟ್ ನಲ್ಲಿ ಮಾಹಿತಿ ತುಂಬುವಂತೆ ರೂಪಿಸಲಾಗಿದೆ.
        ಈಮೇಲ್ ಗೆ ಲಿಂಕ್ ನೀಡುವ ವ್ಯವಸ್ಥೆ ರೂಪಿ ಸಲಾ ಗಿದೆ. ಅಬ ಕಾರಿ ಇಲಾ ಖೆಗೆ ಇದೇ ಮಾದ ರಿಯ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಮಾಹಿತಿ ಸಂಗ್ರ ಹಕ್ಕೆ ಇನ್ನೊಂದು ಪ್ರತ್ಯೇಕ ಇದೇ ಮಾದರಿ ವ್ಯವಸ್ಥೆ ರೂಪಿಸ ಲಾಗಿದೆ ಹಾಗೂ ಮತದಾರರ ಪಟ್ಟಿಯಲ್ಲಿ ನಿರಂತರ ಸೇರ್ಪಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಎನ್ ಐ ಸಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರೂಪಿಸಿದೆ.ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಚುನಾವಣಾ ಪ್ರಕ್ರಿಯೆಯನ್ನು ಮುಕ್ತ ಹಾಗೂ ವೇಗವಾಗಿ ನಡೆಸಲು ಅಗತ್ಯವಿರುವ ಹಲವು ಕ್ರಮಗಳನ್ನು ಜಿಲ್ಲಾಧಿಕಾರಿಗಳು ರೂಪಿಸಿದ್ದಾರೆ.