Saturday, April 27, 2013

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 27:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ ತಂಗಡಿ ತಾಲೂ ಕಿನಾ ದ್ಯಂತ ಹಮ್ಮಿ ಕೊಂಡಿದ್ದ ಮತ ದಾರರ ಜಾಥಾ ಸಮಾ ರೋಪವು ನೂರಾರು ವಾಹನ ಗಳಲ್ಲಿ ಅಧಿ ಕಾರಿ ಗಳು ಸಾರ್ವ ಜನಿಕರು ಹೆಚ್ಚಿನ ಉತ್ಸಾಹ ದಿಂದ ಪಾಲ್ಗೊಂ ಡಿದ್ದರು. ಬೆಳ್ತಂ ಗಡಿ ಪೇಟೆ ಯಿಂದ ಕಕ್ಕಿಂಜೆ ವರೆಗೆ ನಡೆದ ಮತ ದಾರರ ಜಾಥಾ ಮೆರ ವಣಿಗೆ ಅತ್ಯಾ ಕರ್ಷಕ ವಾಗಿ ಜನ ರನ್ನು ರಂಜಿ ಸಿತು.
ಜಾಥಾ ಮೆರ ವಣಿಗೆ ನಂತರ ಸಮಾ ರೋಪ ಭಾಷಣ ಮಾಡಿದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ .ಕೆ.ಎನ್.ವಿಜಯ ಪ್ರಕಾಶ್ ಅವರು ಮಾತ ನಾಡಿ ಪ್ರತಿ ಯೊಬ್ಬ ನಾಗರೀ ಕನೂ ತನ್ನ ಮತ ದಾನದ ಹಕ್ಕನ್ನು ಚಲಾ ಯಿಸಿ ಪರಿಣಾ ಮಕಾರಿ ಆಡ ಳಿತ ನೀಡುವ ಮೂಲಕ ಸರ್ಕಾರ ರಚನೆ ಯಲ್ಲಿ ಭಾಗ ವಹಿಸಿ ದೇಶದ ಅಭಿ ವೃದ್ಧಿಗೆ ನಾಂದಿ ಹಾಡ ಬೇಕೆಂದು ಕರೆ ಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ,ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ ,ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.