Tuesday, April 30, 2013

ಮತದಾನ ಪ್ರಕ್ರಿಯೆಯಲ್ಲಿ ಯುವಜನತೆ

ಮಂಗಳೂರು, ಎಪ್ರಿಲ್.30:-ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ದಿನಾಂಕ 5-5-13 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಯನ್ನು ಸೆರೆ ಹಿಡಿಯಲು ಮತ್ತು ಅಂತರ್ಜಾಲದಲ್ಲಿ ಅಳವಡಿಸಲು ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಂಡು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.  ಇದನ್ನು ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿನ ಕನಿಷ್ಟ 25 ಮತಗಟ್ಟೆಗಳಲ್ಲಿ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯ ಮೂಲಕ ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಯುವಜನತೆಯನ್ನು ಮತದಾನದ ವ್ಯವಸ್ಥೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡಲು ಈ ವ್ಯವಸ್ಥೆಯನ್ನು  ಜಿಲ್ಲಾಡಳಿತ ಕೈಗೊಂಡಿರುತ್ತದೆಯೆಂದು ದಕ್ಷಿಣಕನ್ನಡ  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಮದ್ಯ ಮಾರಾಟ ನಿಷೇಧ:
ರಾಜ್ಯ ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013 ನ್ನು ಘೋಷಿಸಿದ್ದು,ಇದಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ದಿನಾಂಕ 5-5-13 ರಂದು ಮತದಾನ ಮತ್ತು ದಿನಾಂಕ 8-5-13 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
     ಆದ್ದರಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಪ್ರದೇಶದಿಂದ 3 ಕಿಲೋಮೀಟರ್ ಪರಿಧಿಯಲ್ಲಿ ದಿನಾಂಕ 3-5-13 ಸಂಜೆ 5.00 ಗಂಟೆಯಿಂದ ದಿನಾಂಕ 5-5-13 ರ ರಾತ್ರಿ 12.00 ಗಂಟೆಯ ವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ದಿನಾಂಕ 7-5-13 ರ ರಾತ್ರಿ 12.00 ಗಂಟೆಯಿಂದ 8-5-13 ರ ರಾತ್ರಿ 12.00 ಗಂಟೆಯ ವರೆಗಿನ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
 ಬೋಗಸ್ ಮತದಾನ ಕಡಿವಾಣಕ್ಕೆ ಕ್ರಮ:
ರಾಜ್ಯ ವಿಧಾಸಬಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಕೇಂದ್ರಗಳಲ್ಲಿ ಬೋಗಸ್ ಮತದಾನವಾಗುವುದನ್ನು ತಪ್ಪಿಸಲು ದಿನಾಂಕ 05-05-2013ರಂದು ನಡೆಯಲಿರುವ ಚುನಾವನಾ ಮತದಾರರ ಪಟ್ಟಿಯನ್ನು ಬಿ ಎಲ್ ಒ ರವರ ಮೂಲಕ ಪರಿಶೀಲಿಸಿದಾಗ, ಸದ್ರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರ ಪೈಕಿ ಸುಮಾರು 37904 ಗೈರು ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.
      ಆದುದರಿಂದ ಬೋಗಸ್ ಮತದಾನವಾಗುದಕ್ಕೆ ಕಡಿವಾಣ ಹಾಕಲು, ಗೈರು ಮತದಾರರ ಪಟ್ಟಿಯನ್ನು ಚುನಾವಣೆಯ ದಿನಾಂಕದಂದು ಮತಗಟ್ಟೆಗಳಿಗೆ ಸರಬರಾಜು ಮಾಡಲಾಗುವುದು. ಹಾಗೂ ಗೈರು ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಸರಿಯಾಗಿ ತನಿಖೆ ನಡೆಸಿ, ಅವರಿಗೆ ಮತದಾನದ ಹಕ್ಕು ನೀಡುವ ಅಥವಾ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಅಧ್ಯಕ್ಷಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಹರ್ಷಗುಪ್ತ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ,ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ತಿಳಿಸಿದ್ದಾರೆ.
       ಗೈರು ಮತದಾರರ ತಾಲ್ಲೂಕುವಾರು ವಿವರ ಇಂತಿದೆ; ಬೆಳ್ತಂಗಡಿ 4259, ಮೂಡಬಿದ್ರಿ 5255, ಮಂಗಳೂರುನಗರ ಉತ್ತರ 4775, ಮಂಗಳೂರು ನಗರ ದಕ್ಷಿಣ 10724, ಮಂಗಳೂರು 4959, ಬಂಟವಾಳ 3195, ಪುತ್ತೂರು 1981 ಹಾಗೂ ಸುಳ್ಯ 2756.   
 

ಮತದಾರರ ಜಾಗೃತಿ ಆಂದೋಲನ ಜನ ಸಾಮಾನ್ಯರ ಶಕ್ತಿ - ಮತದಾನದ ಹಕ್ಕು:
ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಹಾಗೂ ಗ್ರಾಮ ಪಂಚಾಯತ್ಗಳ ಸಹಭಾಗಿತ್ವದಲ್ಲಿ ವಿವಿದೆಡೆ ನಡೆದ ಮತದಾರರ ಜಾಗೃತಿ ಅಭಿಯಾನದಲ್ಲಿ ಶೀನಶೆಟ್ಟಿ, ನರೇಗಾ ಒಂಬುಡ್ಸ್ಮನ್ರವರು ಭಾಗವಹಿಸಿ ಮಾಹಿತಿ ನೀಡಿದರು.
ಬಂಟ್ಟಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಟ್ಟೊಳಿಕೆ ಆದಿವಾಸಿ ಪ್ರದೇಶ ಮತ್ತು ಜನತಾ ನಿವೇಶನ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಆದಿವಾಸಿ ಜನರ ಜಾಗೃತಿ ಜಾಥ ಇತ್ತೀಚೆಗೆ ನಡೆಯಿತು. ನರೇಗಾ ಒಂಬುಡ್ಸ್ಮನ್ ಶೀನ ಶೆಟ್ಟಿ ಮತದಾನದ ಮಹತ್ವ ಮತ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಲಾವಣ್ಯ ಹಾಗೂ ಆದಿವಾಸಿ ಮುಖಂಡರಾದ ಬೇಬಿ, ಬಾಬು, ಮುದರ, ಶೇಖರ ಮತ್ತಿತರರು ಭಾಗವಹಿಸಿದ್ದರು.
    ಬಂಟ್ಟಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ನಿವೇಶನದಲ್ಲಿ ಮತದಾರರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡರಾರ ಸುಂದರಿ, ಅಂಗಾರೆ, ಪಂಚಾಯತ್ ಸಿಬ್ಬಂದಿ ಪಾರ್ವತಿ ಮೊದಲಾದವರು ಭಾಗವಹಿಸಿ ಸಹಕರಿಸಿದ್ದರು.
ಮಂಗಳೂರು ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಜಾಗೃತಿ ವೇದಿಕೆಯ ಮಾಸಿಕ ಪ್ರೇರಣಾ ಶಿಬಿರದಲ್ಲಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಕಿ ಚಂಚಲ, ಮಹಿಳಾ ಜಾಗೃತಿ ವೇದಿಕೆಯ ಮುಖಂಡರಾದ ಶಶಿಕಲ, ಮಾಲತಿ, ಯಮುನ, ಪಂಪಾವತಿ, ತುಳಸಿ ಮೊದಲಾದವರು ಮಾಹಿತಿ/ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರೆಂದು ಜನಶಿಕ್ಷಣ ಟ್ರಸ್ಟ್ನ     ನಿರ್ದೇಶಕರುತಿಳಿಸಿರುತ್ತಾರೆ.