Saturday, April 6, 2013

ಸ್ವೀಪ್ ಕಾರ್ಯಕ್ರಮದಡಿ ಮೈಮ್ ಶೋ ಸಿಡಿ ಬಿಡುಗಡೆ

ಮಂಗಳೂರು, ಎ.06: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಯೋಜನೆ (ಸ್ವೀಪ್) ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದ.ಕ. ಜಿಲ್ಲಾಡಳಿತದ ವತಿಯಿಂದ ಇಂದು ಮೈಮ್ ಶೋ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
`ಮತ ದಾನ ನನ್ನ ಹಕ್ಕು ಅದನ್ನು ದುಡ್ಡಿ ಗಾಗಿ, ಸಾರಾ ಯಿಗಾಗಿ ಮಾರ ಲಾರೆ, ಬೆದ ರಿಕೆಗೆ ಮಣಿ ಯಲಾರೆ' ಎಂಬ ಮತ ದಾರನ ದಿಟ್ಟ ನಿಲು ವನ್ನು ಮೈಮ್ ಶೋ ದಲ್ಲಿ ಪ್ರದ ರ್ಶಿಸುವ ಮೂಲಕ ಮತ ದಾನದ ಹಕ್ಕಿನ ಮಹತ್ವ ವನ್ನು ತಿಳಿಸ ಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣ ದಲ್ಲಿ ಮೈಮ್ ರಾಮ್ ದಾಸ್ ಮತ್ತು ತಂಡ ದಿಂದ ರಚಿಸ ಲಾಗಿ ರುವ ಈ ಮೈಮ್ ಶೋನ ಸಿಡಿ ಯನ್ನು ದ.ಕ. ಜಿಲ್ಲಾ ಧಿಕಾರಿ ಹರ್ಷ ಗುಪ್ತ ಬಿಡು ಗಡೆ ಗೊಳಿಸಿ ದರು.
ಈ ಸಂದರ್ಭ ಉಪಸ್ಥಿತರಿದ್ದ ಸ್ತ್ರೀಶಕ್ತಿ ಗುಂಪುಗಳ ಕಾರ್ಯಕರ್ತರಿಗೆ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷ ಗುಪ್ತ, ಸ್ವೀಪ್ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಕಾಟಾಚಾರದ ಕಾರ್ಯಕ್ರಮವಾಗದೆ, ಪರಿಣಾಮಕಾರಿಯಾಗಿ ಅರ್ಹ ಮತದಾರರನ್ನು ತಲುಪುವ ಕೆಲಸವಾಗುತ್ತಿದೆ. ಚುನಾವಣೆಯಲ್ಲಿ ಪ್ರಮುಖ ಪಾತ್ರಧಾರಿ ಮತದಾರ. ಮತದಾರರನ್ನು ಮುಖ್ಯವಾಗಿಸಿರುವುದೇ ಸ್ವೀಪ್. ಮತದಾನದ ಬಗ್ಗೆ ನಿರ್ಲಕ್ಷ್ಯ ಅಸಡೆ ಮೂಡದಿರುವ ಬಗ್ಗೆ ಈ ಪ್ರಮುಖ ಯತ್ನ.  ಚುನಾವಣೆಯಲ್ಲಿ ಮತದಾನದಲ್ಲಿಯೂ ಶೇಕಡಾವಾರು ಹೆಚ್ಚಳವಾಗುವ ಭರವಸೆ ಹುಟ್ಟಿಸಿದೆ ಎಂದರು.
ದ.ಕ. ಜಿಲ್ಲೆ ಯಲ್ಲಿ ಮಾದರಿ ಚುನಾ ವಣೆ ಯನ್ನು ಎದು ರಿಸುವ ನಿಟ್ಟಿ ನಲ್ಲಿ ಜಿಲ್ಲಾ ಡಳಿತ ಸಕಲ ಕ್ರಮ ಗಳನ್ನು ಕೈ ಗೊಂಡಿದ್ದು, ಮತ ದಾರ ರನ್ನು ಯಾವುದೇ ರೀತಿ ಯಲ್ಲಿ ಪ್ರ ಲೋಭನೆ ಗೊಳಪಡಿ ಸಲಾಗುವ ಬಗ್ಗೆ ದೂರು ನೀಡಿದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಚುನಾವಣಾ ಅಕ್ರಮ ನಡೆಯದು ಎಂದು ಹೇಳಿದರು.
ಮಲ್ಟಿಫ್ಲೆಕ್ಸ್, ಬಸ್ಸು, ಇಲಾಖೆಗಳಲ್ಲಿ ಮೈಮ್ ಶೋ ಸಿಡಿ ಪ್ರದರ್ಶನ
ಇಂದು ಬಿಡು ಗಡೆ ಗೊಂಡ ಮೈಮ್ ಶೋ ಸಿಡಿ ಪ್ರದ ರ್ಶನದ ಅವಧಿ ಸುಮಾರು 10 ನಿಮಿಷ ಗಳ ದ್ದಾಗಿದ್ದು, ಇದನ್ನು ನಗ ರದ ಮಲ್ಟಿ ಫ್ಲೆಕ್ಸ್ಗಳಲ್ಲಿ, ದೂರ ದೂರು ಗಳಿಗೆ ಸಂಚ ರಿಸುವ ಬಸ್ಸು ಗಳಲ್ಲಿ ಹಾಗೂ ಟೆಲಿ ವಿಶನ್ ಸೌಲಭ್ಯ ವಿರುವ ಎಲ್ಲಾ ಇಲಾಖೆಗಳಲ್ಲಿ ಪ್ರದಶರ್ಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು. ಈ ಸಂದರ್ಭ ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.