Tuesday, April 30, 2013

ಅಕ್ರಮ ಹಣ ವಶ

ಮಂಗಳೂರು, ಏಪ್ರಿಲ್.30: ಮೇ5 ರ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ  ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದೆ. ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಪೋಲಿಸ್ ಇಲಾಖೆಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ನಗರದ ಅತ್ತಾವರ ಕಟ್ಟೆಯ ಗೋಲ್ಡನ್ ಕ್ಯಾಸಲ್  ವಸತಿ ಸಮುಚ್ಚಾಯದಲ್ಲಿನ ಯು.ಎನ್. ಅಬ್ದುಲ್ ರಜಾಕ್ ಅವರ ನಿವಾಸದ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು ಯಾವುದೇ ದಾಖಲೆ ಪತ್ರಗಳಿಲ್ಲದ 63 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.  ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ.