Thursday, April 4, 2013

ಜಿಲ್ಲೆಯ ಬಿಎಲ್ ಒಗಳ ಜೊತೆ ಜಿಲ್ಲಾಧಿಕಾರಿಗಳಿಂದ ಆಡಿಯೋ ಕಾನ್ಫರೆನ್ಸ್


ಮಂಗಳೂರು, ಏಪ್ರಿಲ್.04 :ಮತದಾರರ ಪಟ್ಟಿ ಸೇರ್ಪಡೆ ಮತ್ತು ಹೆಸರು ಪುನರಾವರ್ತನೆ ಹಾಗೂ ವೋಟರ್ಸ್ ಸ್ಲಿಪ್ ಹಂಚುವ ಸಂಬಂಧ ಇಂದು ಜಿಲ್ಲೆಯ ಎಲ್ಲ ಬಿಎಲ್ಒ ಗಳ ಜೊತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಆಡಿಯೋ ಕಾನ್ಫರೆನ್ಸ್ ನಡೆಸಿದರು.

ಇಂದು ಜಿಲ್ಲಾಧಿ ಕಾರಿಗಳ ಕಚೇ ರಿಯಿಂದ ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿಯ ತಹ ಸೀಲ್ದಾರ್ ಮುಖಾಂ ತರ ವಾಕಿ ಟಾಕಿ ಬಳಸಿ  ಮತದಾ ರರ ಪಟ್ಟಿ ಸಮ ಗ್ರವಾಗಿಡ ಬೇಕು ಹಾಗೂ ಸ್ವಚ್ಛ ವಾಗಿ ಡಬೇಕೆಂಬ ಉದ್ದೇಶ ದೊಂದಿಗೆ  ಆಡಿಯೋ ಕಾನ್ಫರೆನ್ಸ್ ಮೂಲಕ ಮಾತ ನಾಡಿದ ಜಿಲ್ಲಾಧಿಕಾರಿಗಳು, ನೇರವಾಗಿ ಬಿ ಎಲ್ ಒಗಳೊಂದಿಗೆ ಸಂವಾದ ನಡೆಸಿದರು.
ವಿಶೇಷ ಮುತುವಜರ್ಿಯಿಂದ ಮತದಾನದ ಶೇಕಡವಾರು ಹೆಚ್ಚಿಸುವ ಕುರಿತು  ಪ್ರಾಮಾಣಿಕ ಪ್ರಯತ್ನ ಮಾಡಿ ಸಾಧನೆ ಮಾಡಿದರೆ ಅವರಿಗೆ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಿದರು.
ಫಾರ್ಮ್  ನಂಬರ್ 6 ಮತ್ತು 7 ಬಿ ಎಲ್ ಒ ಗಳ ಬಳಿ ಉಳಿಯ ಬಾರದು ಹಾಗೆ ಉಳಿಸಿ ಕೊಂಡರೆ ಕ್ರಮ ನಿಶ್ಚಿತ. ಪಡೆದು ಕೊಂಡಿ ರುವ ಫಾಮ್ರ್ ಗಳನ್ನು ತಕ್ಷ ಣವೇ ಸೆಕ್ಟರ್ ಅಧಿಕಾ ರಿಗ ಳಿಗೆ ನೀಡಿ ಎಂದು ಜಿಲ್ಲಾಧಿ ಕಾರಿ ಗಳು ಬಿ ಎಲ್ ಒ ಗಳಿಗೆ ನೇರ ವಾಗಿ  ನುಡಿ ದರು.
ಸ್ವೀ ಕೃತಿ ಯಾದ ಫಾರ್ಮ ಯಾವುದೇ ಕಾರ ಣಕ್ಕೂ ಬಾಕಿ ಉಳಿಯ ಬಾರದು. ಬಿ ಎಲ್ ಒ ಗಳು ತಮ್ಮಲ್ಲಿ ರುವ ಅರ್ಜಿ ಗಳನ್ನು ಆರ್ ಒ ಅಥವಾ ತಹ ಸೀಲ್ದಾ ರರಿಗೆ ವರ್ಗಾ ಯಿಸಿ. ಸೆಕ್ಟರ್ ಅಧಿ ಕಾರಿ ಗಳು ಮತ್ತು ತಹಸೀಲ್ದಾರ್ ಅವರು ಹೆಚ್ಚಿನ ಮುತುವರ್ಜಿಯಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಕರೆಕ್ಷನ್ ಗಳನ್ನು, ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದ ಅವರು, ಮತದಾರರ ಪಟ್ಟಿಯನ್ನು ಸ್ವಚ್ಛವಾಗಿಡುವುದು ತಮ್ಮ ಆದ್ಯತೆಯಾಗಿದ್ದು, ಇದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಉದಾಸೀನ ಮಾಡಬಾರದು ಎಂದರು.
ಅರ್ಜಿ ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದ್ದು, ಜನವರಿಯಲ್ಲಿ ಈಗಾಗಲೇ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದರೂ ಸ್ವೀಪ್ ನಂತಹ ವಿಶೇಷ ಕ್ರಮಗಳಿಂದ ಸೇರ್ಪಡೆಯ ಅರ್ಜಿಗಳು ಹೆಚ್ಚಾಗಿದ್ದು, ಅಂತಿಮ ಹಂತದ ದಟ್ಟನೆ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ವಹಿಸಬೇಕು ಎಂದರು. ಆದರೆ ನಿಜವಾದ ಅರ್ಹರಿಗೆ ಅವಕಾಶ ಒದಗಿಸಲು ಜಿಲ್ಲಾಡಳಿ ಬದ್ದವಾಗಿದೆ ಮತ್ತು ಸಜ್ಜಾಗಿದೆ ಎಂದರು. ಇದಕ್ಕಾಗಿ ಬಿಎಲ್ ಒ ಗಳು ಮನೆ ಮನೆ ಭೇಟಿ ನೀಡಿ ಮತದಾರರಿಗೆ ಮತದಾನದ ಚೀಟಿ (ವೋಟರ್ ಸ್ಲಿಪ್) ಹಂಚುವಾಗ ಖುದ್ದಾಗಿ ಮತದಾರರನ್ನು ನೋಡಬೇಕು. ಬಹಳ ದಿನಗಳಿಂದ ಮನೆಯಲ್ಲಿ ಇಲ್ಲದೆ ಇರುವ ಮತದಾರರನ್ನು ಗುರುತಿಸಿ ಲಾಂಗ್ ಆಬ್ಸಂಟಿಗಳಿಗೆ ಪ್ರತ್ಯೇಕ ಕಾಲಮ್ ಮಾಡಿ ಎಂದು ಆಡಿಯೋ ಕಾನ್ಫರೆನ್ಸ್ ನಲ್ಲಿ ಸ್ಪಷ್ಟಪಡಿಸಿದರು.
ಮಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಮೂಡಬಿದ್ರೆ ಬಿಎಲ್ ಒ ಮತ್ತು ಅಧಿಕಾರಿಗಳೊಂದಿಗೆ ಪುರಭವನದಲ್ಲಿ ಸಂವಾದ ನಡೆಸುತ್ತಿರುವ ಜಿಲ್ಲಾಧಿಕಾರಿಗಳು
ಹಾಸ್ಟೆಲ್ ಮಕ್ಕಳ ಸೇರ್ಪಡೆ ಬಗ್ಗೆ, ಅಪೂರ್ಣ ಅರ್ಜಿಗಳ ಬಗ್ಗೆ ಪಾಟ್ರ್ - 4 ವಿಷಯ ಅಪೂರ್ಣವಾಗಿದ್ದರೆ ಅದನ್ನು ಸ್ವೀಕರಿಸಬೇಡಿ ಎಂದರು. ಎರಡು ಕಡೆ ಹೆಸರಿದ್ದರೆ ಕಠಿಣ ಶಿಕ್ಷೆ ಶತಸಿದ್ದ ಎಂದ ಅವರು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಹೆಸರು ಸೇರ್ಪಡೆ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಬಿ ಎಲ್ ಒ ಗಳ ಈ ಪ್ರದೇಶಗಳಲ್ಲಿ ಹೆಚ್ಚಿನ ಗಮನವಿಟ್ಟು ಕೆಲಸಮಾಡಬೇಕೆಂದರು.
ಬಿ ಎಲ್ ಒ ಮುಖಾಂತರ ವೋಟರ್ಸ್ ಸ್ಲಿಪ್ ನೀಡುವಾಗ ಎಲ್ಲರೂ ಮತದಾನ ಮಾಡುವಂತೆಯೂ ಪ್ರೇರೆಪಿಸಿ. ಉತ್ತಮ ಕೆಲಸ ಮಾಡಿದ ಬಿ ಎಲ್ ಒ ಗಳನ್ನು ಗುರುತಿಸಲಾಗುವುದು ಎಂದರು.
ಮತದಾನದಂದು ಮತದಾರರನ್ನು ಪ್ರಲೋಭನೆಗೊಳಿಸುವ ಅಥವಾ ಅವರನ್ನು ಆಕರ್ಷಿಸುವ ಘಟನೆಗಳು ಕಂಡು ಬಂದರೆ ತಕ್ಷಣವೇ 1077 ಗೆ ಕರೆ ಮಾಡಿ ಎಂದು ಎಲ್ಲರಿಗೂ ಸೂಚನೆ ನೀಡಿದರು.
ಏಪ್ರಿಲ್ 7 ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಂತಿಮ ದಿನವಾಗಿದ್ದು, ಎಲ್ಲ ಸೆಕ್ಟರ್ ಅಧಿಕಾರಿಗಳು 10 ತಾರೀಖಿನೊಳಗಡೆ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ. 15 ರೊಳಗೆ ಮತದಾರರ ಪಟ್ಟಿ ಸಿದ್ಧಪಡಿಸಿ 17ರಂದು ಮತದಾರರಪಟ್ಟಿಯನ್ನು ಪ್ರಚುರ ಪಡಿಸಲು ಜಿಲ್ಲಾಡಳಿತ ಸಿದ್ಧವಾಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುಂಚೆ ಮಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಮೂಡಬಿದ್ರೆ ಬಿಎಲ್ ಒ ಮತ್ತು ಅಧಿಕಾರಿಗಳೊಂದಿಗೆ ಪುರಭವನದಲ್ಲಿ ನೇರವಾಗಿ ಸಂವಾದ ಮಾಡಿ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಖುದ್ದಾಗಿ ನೀಡಿದರು.
ಇದಕ್ಕೂ ಮೊದಲು ಪೂರ್ವಾಹ್ನ ಜಿಲ್ಲಾಧಿಕಾರಿಗಳು, ಕೂಳೂರಿನ 44 ಮತ್ತು 44 ಎ ವಾರ್ಡುಗಳಿಗೆ ಖುದ್ದು ಭೇಟಿ ನೀಡಿ ಮತದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಭಾರತೀ ಎಜುಕೇಶನ್ ಸೆಂಟರ್ ನಲ್ಲಿ ಅಲ್ಲಿನ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು