Friday, April 19, 2013

ನೀತಿಸಂಹಿತೆಉಲ್ಲಂಘನೆ: ಅಭ್ಯರ್ಥಿಗಳು ಹಾಗೂ ಚಾನೆಲ್ ಗೆ ನೋಟೀಸು

ಮಂಗಳೂರು,ಏಪ್ರಿಲ್. 19:ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ, ಕಾಸಿಗಾಗಿ ಸುದ್ದಿ ಎಂದುಕಂಡುಬಂದಸ್ಥಳೀಯ ಸುದ್ದಿ ಚಾನೆಲ್ ಮತ್ತುಅಭ್ಯರ್ಥಿ ವಿರುದ್ಧ ಕಾರಣ ಕೇಳಿ ನೋಟೀಸು ನೀಡಲು ದ.ಕ ಜಿಲ್ಲಾ ಚುನಾವಣಾಧಿಕಾರಿ  ಹರ್ಷ ಗುಪ್ತ ಅವರುಎಲ್ಲ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿಏಪ್ರಿಲ್ 18ರಂದು ಜಿಲ್ಲಾ ವಾರ್ತಾಇಲಾಖೆಯಲ್ಲಿ ನಡೆದ ಎಂ ಸಿ ಎಂ ಸಿ ಸಭೆಯಲ್ಲಿ ಮೀಡಿಯಾ ಮಾನಿಟರಿಂಗ್ ಸೆಲ್ ನಲ್ಲಿ ನಡೆದ ಸವಿವರ ಸಭೆಯಲ್ಲಿಚುನಾವಣಾಘೋಷಣೆಯಾದಾಗಿನಿಂದವಿವಿಧ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಬಿತ್ತರಿಸಲಾದ ಸುದ್ದಿಯನ್ನು ಸಮಗ್ರವಾಗಿ ವಿಶ್ಲೇಷಿಸಿ, ಪ್ರಮುಖವೆಂದುಕಂಡು ಬಂದ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕೆಲವು ಸ್ಥಳೀಯ ಚಾನೆಲ್ ಗಳು ಕೆಲವು ಸಂದರ್ಶನಗಳನ್ನು  ಸುದ್ದಿಯಂತೆ ಪ್ರಕಟಿಸಿದ್ದರೆ, ಇನ್ನು ಕೆಲವು ಚಾನೆಲ್ ಗಳು ಅದನ್ನೇ ಜಾಹೀರಾತನ್ನಾಗಿ ಪ್ರಕಟಿಸಲು ಎಂ ಸಿ ಎಂ ಸಿ ಸಮಿತಿಯ ಅನುಮತಿ ಕೋರಿ ಸಿಡಿಗಳನ್ನು ಸಲ್ಲಿಸಿದ್ದವು. ಈ ಪ್ರಕರಣಗಳ ಕುರಿತು ಸಭೆ ಚರ್ಚಿಸಿತು.ಇನ್ನು ಕೆಲವು ಪ್ರಮುಖ ದೈನಿಕಗಳಲ್ಲಿ ಪ್ರಮುಖ ಸ್ಪೇಸ್ ನಲ್ಲಿ ಚಿತ್ರಗಳು ಸುದ್ದಿಗೆ ಸಂಬಂದಿತವಲ್ಲದೆ ಪ್ರಕಟಗೊಂಡದ್ದನ್ನು ಸಮಿತಿಯಲ್ಲಿ ಚರ್ಚಿಸಿ ನಿರಂತರವಾಗಿ ಇಂತಹ ಸುದ್ದಿಗಳ ಮೇಲೆ ಕಣ್ಣಿಡಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.
    ಮುದ್ರಣ ಮಾಧ್ಯಮದಲ್ಲಿ ಅಪರೋಕ್ಷವಾಗಿ ಬೆಂಬಲಿಗರು ಅಭ್ಯರ್ಥಿಯ ಅನುಮತಿ ಇಲ್ಲದೆ ಜಾಹೀರಾತು ಪ್ರಕಟಿಸಲು ಅವಕಾಶವಿಲ್ಲ. ಇದು ಸ್ಪಷ್ಟ ಕಾನೂನು ಉಲ್ಲಂಘನೆಎಂದು ಸಮಿತಿ ನಿರ್ಧರಿಸಿತು.ಹಾಗೂ ಕಾರಣ ಕೇಳಿ ನೋಟೀಸು ನೀಡಿ 24 ಗಂಟೆಯೊಳಗೆ ಸೂಕ್ತ ಉತ್ತರ ಬಾರದಿದ್ದರೆ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಈ ಜಾಹೀರಾತನ್ನು ಸೇರಿಸಲಾಗುವುದಲ್ಲದೆ, ಕಾನೂನು ಉಲ್ಲಂಘನೆಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಜಿಲ್ಲಾಚುನಾವಣಾಧಿಕಾರಿ ನಿರ್ಧರಿಸಿದರು.ಸಮಿತಿಯಎಲ್ಲ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಎಲ್ಲ ಚುನಾವಣಾಧಿಕಾರಿಗಳಿಗೆ ಈ ಸಂಬಂಧಎಲ್ಲ ಮಾಹಿತಿಯನ್ನುರವಾನಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.