Monday, April 22, 2013

ಅಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು, ಏಪ್ರಿಲ್. 22ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುವ್ಯವಸ್ಥಿತ ಚುನಾವಣೆ ನಡೆಸಲು ಹಾಗೂ ಜಿಲ್ಲೆಯಿಂದ ರಾಜ್ಯಕ್ಕೆ ಹೊಸದೊಂದು ಪೈಲೆಟ್ ಮಾದರಿ ನೀಡುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗೆ ತಾಂತ್ರಿಕತೆ ನೆರವಿನೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
         ಭಾನುವಾರ ಜಿಲ್ಲೆಗೆ ಆಗಮಿಸಿರುವ ಎಲ್ಲ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್  ಫೋನ್ ಮತ್ತು ವಾಕಿಟಾಕಿ, ಕಂಟ್ರೋಲ್ ರೂಮ್ ಹಾಗೂ ಎಂಸಿಎಂಸಿ ಸಮಿತಿಯನ್ನು ರಚಿಸಲಾಗಿದ್ದು, ಏಕಗವಾಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಾದ್ಯಂತ ಒಂದೇ ಚುನಾವಣಾ ರೀತಿ-ನೀತಿ ರೂಪಿಸಲು ಎಲ್ಲರೊಂದಿಗೆ ಚರ್ಚಿಸಿ ಸಮಗ್ರ ಯೋಜನೆ ರೂಪಿಸಿದ್ದೇನೆ.
ಈ ಸಂಬಂದ ಚುನಾವಣಾ ಆಯೋಗದ ನಿರ್ದೇಶನದಡಿ ಹಲವು ಸುತ್ತೋಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಹೊರಡಿಸಿದ್ದು, ಆಡಿಯೋ ಕಾನ್ಫರೆನ್ಸ್ ಹಾಗೂ ಆರ್ ಒ ಗಳ ವಿಶೇಷ ಸಭೆ ನಡೆಸುವ ಮೂಲಕ ಕಾಲಕಾಲಕ್ಕೆ ಎಲ್ಲಿಯೂ ಮಾಹಿತಿಕೊರತೆ ಸಂಭವಿಸದಂತೆ ಚುನಾವಣಾ ಕರ್ತವ್ಯ ನಿರ್ವಹಿಸಲಾಗುತ್ತಿದೆ.
ಎಲ್ಲ ಚುನಾವಣಾಧಿಕಾರಿಗಳು ಎಲ್ಲ ಮಾಹಿತಿಯನ್ನು ಆನ್ ಲೈನ್ ಮೂಲಕ ವೀಕ್ಷಿಸುವಂತೆ ಅವರಿಗೆ ಲಾಗ್ ಇನ್ ನಂಬರ್ ನೀಡಲಾಗುತ್ತದೆ. ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿರುವ ಸಂದರ್ಭದಲ್ಲಿ ಪರಸ್ಪರ ತೊಂದರೆಯಾಗದಂತೆ ಮಾಹಿತಿ ಸಂಗ್ರಹಿಸಲು 
www.dk.nic.inಸೈಟ್ ಸಂಪರ್ಕಿಸಿ ಎಲ್ಲ ಮಾಹಿತಿಗಳನ್ನು ಒಂದೆಡೆ ಪಡೆಯಬಹುದಾಗಿದೆ.
ವಾಹನಕ್ಕೆ ಅನುಮತಿ, ಜಾಹೀರಾತಿಗೆ ಅನುಮತಿ, ಸಭೆ ಸಮಾರಂಭಗಳಿಗೆ ಅನುಮತಿ ನೀಡಿರುವ ಮಾಹಿತಿ ಎಲ್ಲವೂ ಇಲ್ಲಿ ಲಭ್ಯವಿದ್ದು, ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ರಚಿಸುವ ಸಂದರ್ಭದಲ್ಲಿ ಇದು ನೆರವಾಗಲಿದೆ. ಇನ್ನು ಯಾವುದೇ ದೂರು ಅಥವಾ ಸಲಹೆಗಳನ್ನು ಕಂಟ್ರೋಲ್ ರೂಂ 1077 24 ಗಂಟೆಯೂ ತೆರೆದಿರುತ್ತದೆ.
ಇಂದು ಮಾಸ್ಟರ್ ಟ್ರೈನರ್ಸ್ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಚುನಾವಣೆಯಲ್ಲಿ ಎಲ್ಲವನ್ನೂ ಸುವ್ಯವಸ್ಥಿತವಾಗಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ಇದೇ ಮಾದರಿಯಲ್ಲಿ ಮುಂದುವರಿದರೆ ಸ್ಮಾಟ್ರ್  ಫೋನ್ ವ್ಯವಸ್ಥೆ ತಮ್ಮ ಯೋಚನೆಯಂತೆ ಅನುಷ್ಠಾನಗೊಂಡರೆ ಇದು ಪೈಲೆಟ್ ಯೋಜನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಚುನಾವಣಾ ವೀಕ್ಷಕರಾದ ಪುಷ್ಪವತಿ ಸೆಕ್ಸೆನಾ, ರಾಮಕುಮಾರ್, ದಿನೇಶ್ ಗೋಯಲ್, ಜಗದೀಶ್ ಪಾಟೀಲ್, ಮುಖೇಶ್ ಕುಮಾರ್, ಆರ್ ಸಿ ವರ್ಮಾ ಉಪಸ್ಥಿತರಿದ್ದರು.  ಎಲ್ಲ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.