ಮಂಗಳೂರು,
ಎಪ್ರಿಲ್.18:- ದಿನಾಂಕ 5-5-13 ರಂದು ಜಿಲ್ಲೆಯಲ್ಲಿ ರಾಜ್ಯ
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ , ಚುನಾವಣೆ ಕರ್ತವ್ಯ ನಿರ್ವಹಿಸುವ ಬಗ್ಗೆ
ಮತಗಟ್ಟೆಗಳಿಗೆ ನೇಮಕ ಮಾಡಲಾದ ಸಿಬ್ಬಂದಿಗಳನ್ನು ಕರೆದೊಯ್ಯಲು ಹಾಗೂ ಪೋಲೀಸ್
ಬಂದೋಬಸ್ತಿಗೆ ಸಂಸ್ಥೆಯ ವಾಹನಗಳನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು
ಆದೇಶಿಸಿರುವಂತೆ, ಮಂಗಳೂರು ವಿಭಾಗದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು
ನೀಡಲಾಗುವುದು. ಇದರಿಂದಾಗಿ ವಾಹನಗಳ ಕೊರತೆಯುಂಟಾಗಿ ಕೆಲವು ಮಾರ್ಗಸೂಚಿಗಳನ್ನು
ರದ್ದುಗೊಳಿಸಲಾಗುವುದೆಂದು ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.
ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.