Wednesday, July 4, 2012

ಮೀನುಗಾರಿಕಾ ದೋಣಿಗಳ ತಪಾಸಣೆ

ಮಂಗಳೂರು,ಜುಲೈ.04 : ಔಟ್ ಬೋರ್ಡ್ ಇಂಜಿನ್ ಹೊಂದಿರುವ ಮೀನುಗಾರಿಕಾ ದೋಣಿಗಳಿಗೆ ರಿಯಾಯಿತಿ ದರದ ಸೀಮೆಎಣ್ಣೆ ಪರವಾನಿಗೆ ನೀಡುವ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಜಂಟಿ ತಪಾಸಣೆ ನಡೆಸುವ ದಿನಾಂಕ ಮತ್ತು ಸ್ಥಳ ಈ ರೀತಿಯಾಗಿದೆ. ಪರಿಶೀಲನೆ ಸಮಯದಲ್ಲಿ ಮಾಲೀಕರು ಇಂಜಿನ್ ಮತ್ತು ದೋಣಿ ಸಮೇತ ಪರಿಶೀಲನೆಗೆ ಹಾಜರಾಗುವುದು, ನೋಂದಣಿ ಸಂಖ್ಯೆ ನಮೂದಿಸುವದು, ಮೀನುಗಾರಿಕೆ ಇಲಾಖೆಯಿಂದ ಪಡೆದ ಆರ್.ಸಿ.ಬುಕ್ ಸಮೇತ ದೋಣಿ ಮಾಲೀಕರೇ ಸ್ವತ: ಹಾಜರಾಗಿ ತಪಾಸಣೆ ಪಟ್ಟಿಗೆ ಸಹಿ ಹಾಕುವುದು ಮತ್ತು ನಿಗಧಿತ ದಿನಾಂಕದಂದು ನಿಗಧಿತ ಸ್ಥಳದಲ್ಲಿ ಮಾತ್ರ ತಪಾಸಣೆ ಮಾಡಲಾಗುವುದೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ತಪಾಸಣೆ ನಡೆಸುವ ಸ್ಥಳ ಮತ್ತು ದಿನಾಂಕ ಈ ಕೆಳಗಿನಂತಿದೆ.
ದಿನಾಂಕ 5-7-12,6-7-12,7-7-12 ರಂದು ಕಸ್ಬಾ ಬೇಂಗ್ರೆ,ಕುದ್ರೋಳಿ,ಬೋಳೂರು,ಬೊಕ್ಕಪಟ್ಣ,ಸುಲ್ತಾನ್ ಬತ್ತೇರಿ,ತಣ್ಣೀರುಬಾವಿ ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ಮತ್ಸ್ಯಗಂಧ ಕಟ್ಟಡದ ಬಂದರು ಧಕ್ಕೆಯಲ್ಲಿ ಪರಿಶೀಲನೆ ಮಾಡಲಾಗುವುದು. ದಿನಾಂಕ 9-7-12,10-7-12ರಂದು ಹೊಗೆಬಜಾರ್,ಬೋಳಾರ,ಜಪ್ಪು,ಪಾಂಡೇಶ್ವರ,ನಾಗೂರಿ,ತೋಟಬೆಂಗ್ರೆ ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ತೋಟಾ ಬೆಂಗ್ರೆ ಧಕ್ಕೆ ಬಳಿ ತಪಾಸಣೆ ನಡೆಸಲಾಗುವುದು.ದಿನಾಂಕ 11-7-12,12-7-12,13-7-12 ರಂದು ಉಳ್ಳಾಲ ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ಉಳ್ಳಾಲ ಮೊಗವೀರ ಪಟ್ನ ವಠಾರದಲ್ಲಿ ತಪಾಸಣೆ ನಡೆಸಲಾಗುವುದು. ದಿನಾಂಕ 16-7-12 ಮತ್ತು 17-7-12 ರಂದು ಬೈಕಂಪಾಡಿ ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ಬೈಕಂಪಾಡಿ ಮೀನಕಳಿಯ ಶ್ರೀರಾಮಾಂಜನೇಯ ಸಭಾಭವನದ ವಠಾರದಲ್ಲಿ ಪರಿಶೀಲನೆ ನಡೆಸಲಾಗುವುದು.ದಿನಾಂಕ 18-7-12 ರಂದು ಪಣಂಬೂರು ಕುಳಾ ಪ್ರದೇಶದ ದೋಣಿಗಳನ್ನು ಮಹಾ ವಿಷ್ಣು ಭಜನಾ ಮಂದಿರದ ವಠಾರದಲ್ಲಿ ತಪಾಸಣೆ ಮಾಡಲಾಗುವುದು. ದಿನಾಂಕ 19-7-12 ರಂದು ಮಿತ್ರಪಟ್ನ .ಮುಕ್ಕ,ಸುರತ್ಕಲ್,ಕುಳಾ,ಹೊಸಬೆಟ್ಟು ಪ್ರದೇಶದ ದೋಣಿಗಳನ್ನು ಸುರತ್ಕಲ್ ಗುಡ್ಡೆಕೊಪ್ಲ ಶ್ರೀ ರಾಮ ಭಜನಾ ಮಂದಿರದ ವಠಾರದಲ್ಲಿ ತಪಾಸಣೆ ನಡೆಸಲಾಗುವುದು.ದಿನಾಂಕ 24-7-12,25-7-12 ರಂದು ಸಸಿಹಿತ್ಲು ಪ್ರದೇಶದ ಮೀನುಗಾರಿಕಾ ದೋಣಿಗಳನ್ನು ಸಸಿಹಿತ್ಲು ಉತ್ಥಾನ ಬಳಗದ ವಠಾರದಲ್ಲಿ ತಪಾಸಣೆ ನಡೆಸಲಾಗುವುದೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.