Monday, July 2, 2012

ಏಕದಿನ ಆಡಳಿತ

ಮಂಗಳೂರು,ಜುಲೈ.02:ಆಡಳಿತಾತ್ಮಕ ಹಿತದೃಷ್ಠಿಯಿಂದ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಏಕ ದಿನ ಆಡಳಿತ ಎಂಬ ನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, ಅದರಂತೆ ಆರ್ಆರ್ ಟಿ(3) ಎಂಬ ಸಂಕಲನದಲ್ಲಿ ಅರ್ಜಿ ಸಲ್ಲಿಸಿದ 24 ಗಂಟೆಗಳೊಳಗೆ ಪಹಣಿ ಇಂಧೀಕರಣಕ್ಕೆ ಸಂಬಂಧಿಸಿದಂತೆ ಕೆಳ ಕಾಣಿಸಿದ ತಪಾವತುಗಳನ್ನು ಸರಿಪಡಿಸುವ ಬಗ್ಗೆ ಆದೇಶ ಹೊರಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತಪಾವತ್ತಾದ ಮ್ಯುಟೇಶನ್ ಆದೇಶದ ಆಧಾರದಲ್ಲಿ ಪಹಣಿ ಇಂಧೀಕರಣದಲ್ಲಿ ಸಂಭವಿಸಿರುವ ತಪ್ಪು ನಮೂದುಗಳನ್ನು ಸರಿಪಡಿಸುವುದು.ಮ್ಯುಟೇಶನ್ ಶುಲ್ಕ ಪಾವತಿಸದ ಮೂಲ ದಸ್ತಾವೇಜು ಹಾಜರು ಪಡಿಸದ ಕೃಷಿಕರೆಂಬ ದಾಖಲೆ ನೀಡದ ಮತ್ತು ಮರಣ ದೃಢಪತ್ರ ನೀಡದ ಕಾರಣಗಳಿಂದ ತಿರಸ್ಕರಿಸಲ್ಪಟ್ಟ ಮ್ಯುಟೇಶನ್ ಪ್ರಕರಣಗಳಲ್ಲಿ ಆದೇಶ ನೀಡಲಾಗುವುದು. ಮ್ಯುಟೇಶನ್ ಆದೇಶದಲ್ಲಿ ಸರ್ವೇ ನಂಬರ್ ,ವಿಸ್ತೀರ್ಣ ಹೆಸರುಗಳು ಪಹಣಿಯಲ್ಲಿ ದಾಖಲಿಸುವಲ್ಲಿ ಆಗಬಹುದಾದ ತಪಾವತ್ತುಗಳನ್ನು ಸರಿಪಡಿಸುವುದು. ಕೈಬರಹದ ಪಹಣಿಯಲ್ಲಿ ತಪ್ಪು ದಾಖಲಾತಿಗೆ ಗಣಕೀಕೃತ ಪಹಣಿಯಲ್ಲಿಯೂ ಅದೇ ತಪ್ಪುಗಳು ಮುಂದುವರಿದ ಪ್ರಕರಣಗಳು. ಮ್ಯುಟೇಶನ್ ಆದೇಶದಂತೆ ವಿಸ್ತೀರ್ಣವನ್ನು ನಿರ್ಧಿಷ್ಟ ಖಾತೆದಾರರಿಂದ ಕಳಚುವ ಬದಲು ಅದೇ ಪಹಣಿಯ ಬೇರೆ ಖಾತೆದಾರರಿಂದ ತಪ್ಪಾಗಿ ಕಳಚಿರುವ ಪ್ರಕರಣಗಳು ಇದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಕಚೇರಿಯಲ್ಲಿ ನೀಡಬೇಕಾಗಿರುವ ದಾಖಲಾತಿಗಳು-ದಸ್ತಾವೇಜಿನ ಪ್ರಮಾಣಿತ ಪ್ರತಿ,ಮ್ಯುಟೇಶನ್ ಆದೇಶದ ದೃಢೀಕೃತ ಪ್ರತಿ,ಪಹಣಿ ಪತ್ರಿಕೆ, ಪೂರಕ ಅವಧಿಯ ಋಣರಾಹಿತ್ಯ ದೃಢಪತ್ರ.ಮೃತ ಖಾತಾದಾರರ ಮರಣ ದೃಢಪತ್ರ, ಕೃಷಿಕರೆಂಬ ಬಗ್ಗೆ ಖರೀದಿದಾರರ ಹೆಸರಿನಲ್ಲಿರುವ ಪಹಣಿ ಪತ್ರ, 5 ವರ್ಷಗಳ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿಧಿವಿಹಿತವಾದ ವರದಿ ವಿವರಗಳು, ಕೈಬರಹದ ಪಹಣಿಯ ದೃಢೀಕೃತ ಪ್ರತಿ.
ಇಂತಹ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಸೂಕ್ತ ಆದೇಶವನ್ನು ನೀಡಲಾಗುವುದೆಂದು ಮಂಗಳೂರು ಸಹಾಯಕ ಆಯುಕ್ತರು ತಿಳಿಸಿರುತ್ತಾರೆ.