Monday, July 9, 2012

ಸಂಸದರ ನಿಧಿಯಿಂದ ಒಟ್ಟು ರೂ.12.53 ಲಕ್ಷ ಬಿಡುಗಡೆ

ಮಂಗಳೂರು, ಜುಲೈ.09: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರ 2010-11 ಮತ್ತು 2011-12 ನೇ ಸಾಲಿನ ಅನುದಾನದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 10 ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಂಜೂರಾಗಿದ್ದ ಒಟ್ಟು ರೂ.16.75 ಲಕ್ಷ ರೂಪಾಯಿಗಳಲ್ಲಿ ರೂ.12.53 ಲಕ್ಷಗಳ ಚೆಕ್ಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ ಅನುಷ್ಠಾನಗೊಳಿಸಲು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಬಿಡುಗಡೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಪುತ್ತೂರು ತಾಲೂಕು ಕೋಡಿಂಬಾಳ ಗ್ರಾಮದ ಓಂತ್ರಡ್ಕ ಶಾಲಾ ಮೈದಾನದ ವಿಸ್ತರಣೆಗೆ 1.00 ಲಕ್ಷ ಮೊತ್ತದ ಅನುದಾನದಲ್ಲಿ 0.75 ಲಕ್ಷದ ಚೆಕ್,ಸುಳ್ಯತಾಲೂಕು ಐವನರ್ಾಡು ಗ್ರಾಮದ ಕುಕ್ಕಡೇಲು ರಸ್ತೆ ಅಭಿವೃದ್ಧಿಗೆ ರೂ.2.00 ಲಕ್ಷ ಅನುದಾನದಲ್ಲಿ ರೂ. 1.50 ಲಕ್ಷದ ಚೆಕ್, ಕಾಣಿಯೂರು-ಮಾದೋಡಿ ನದಿಗೆ ತಡೆಗೋಡೆ ರಚನೆಗೆ ರೂ.1.00 ಲಕ್ಷದಲ್ಲಿ ರೂ.0.75 ಲಕ್ಷದ ಚೆಕ್,ಇರಾ ಗ್ರಾಮದ ಬಿಲ್ಲವರ ಸೇವಾ ಸಂಘದ ಸಮುದಾಯ ಕಾಮಗಾರಿಗೆ ರೂ.2.50 ಲಕ್ಷದಲ್ಲಿ ರೂ.1.85 ಲಕ್ಷದ ಚೆಕ್, ಪಂಜಿಮೊಗರು ಅಂಗನವಾಡಿ ಕಟ್ಟಡದ ಕಾಮಗಾರಿಗೆ ರೂ.2.00 ಲಕ್ಷದ ಅನುದಾನದಲ್ಲಿ ರೂ.1.50 ಲಕ್ಷದ ಚೆಕ್ ,ಬೆಳ್ತಂಗಡಿ ಪಿಲ್ಯ ಶಾಲಾ ಆವರಣ ಗೋಡೆ ರಚನೆಯ ಕಾಮಗಾರಿಗೆ ರೂ.1.50 ಲಕ್ಷದಲ್ಲಿ ರೂ.1.12 ಲಕ್ಷದ ಚೆಕ್, ಪಾದೂರು ಹಿಂದೂ ರುದ್ರ ಭೂಮಿ ಅಭಿವೃದ್ಧಿಗೆ ರೂ.1.25 ಲಕ್ಷದಲ್ಲಿ ರೂ.0.94 ಸಾವಿರ,ಪುತ್ತೂರು ಕುಂತೂರು ಬೀರಂತಡ್ಕ ರಸ್ತೆ ಅಭಿವೃದ್ಧಿಗೆ ರೂ.1.00 ಲಕ್ಷದಲ್ಲಿ ರೂ.0.75 ಲಕ್ಷದ ಚೆಕ್ ,ನೆಕ್ಕಿಲಾಡಿ-ಹೊಸಕ್ಲು ರಸ್ತೆ ಅಭಿವೃದ್ಧಿಗೆ ರೂ.2.00 ಲಕ್ಷದ ಅನುದಾನದಲ್ಲಿ ರೂ.1.50 ಲಕ್ಷದ ಚೆಕ್,ಆಕಾಶಭವನದಿಂದ ಗೊಲ್ಲರಬೆಟ್ಟು ತನಕ ಚರಂಡಿ ರಚನೆಗೆ ರೂ.2.50 ಲಕ್ಷದಲ್ಲಿ ರೂ.1.87 ಲಕ್ಷದ ಚೆಕ್ ವಿತರಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.