ಅವರು
ಇಂದು ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ಮಂಗ ಳೂರು, ದ.ಕ. ಜಿಲ್ಲಾ ಆಡ ಳಿತ. ಜಿಲ್ಲಾ ಪೋಲೀಸ್ ,ವಕೀ ಲರ ಸಂಘ ಇತರೆ ಇಲಾಖೆ ಗಳ ಸಹ ಯೋಗ ದೊಂದಿಗೆ ಜನ ಸಾಮಾನ್ಯರಿಗೆ ಕಾನೂನು ಮಾಹಿತಿಗೆ ಮಂಗಳೂರು ತಾಲೂಕಿನಾದ್ಯಂತ ದಿನಾಂಕ 2-6-12 ರಿಂದ 5-6-12 ರ ವರೆಗೆ ಹಮ್ಮಿಕೊಂಡಿರುವ ಕಾನೂನು ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ತ್ವರಿತ ಸೂಕ್ತ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾನೂನು ರಥ ಅಭಿಯಾನ ಸಹಕಾರಿಯಾಗಲಿದೆಯೆಂದರು.ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ.ಚಂಗಪ್ಪ ಮಾತನಾಡಿ ಕಾನೂನು ರಥ ಯಾತ್ರೆ ಅಭಿಯಾನವನ್ನು ಕಾನೂನು ಅರಿವು ಮೂಡಿಸುವುದು ಉಚಿತ ಕಾನೂನು ಸಲಹೆ ನೀಡುವುದು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಕಟ್ಲೆಗಳನ್ನು ಲೋಕ ಅದಾಲತ್ಗಳ ಮೂಲಕ ಇತ್ಯರ್ಥ ಪಡಿಸುವ ಮೂಲಕ ಅಮೂಲ್ಯ ಸಮಯ ಹಾಗೂ ಹಣ ಉಳಿತಾಯ ಮಾಡುವುದೇ ಅಲ್ಲದೆ ಸಾಮರಸ್ಯ ಉಂಟುಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆಯೆಂದರು.
ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಮಂಗಳೂರು ನಗರ ಪೋಲೀಸ್ ಆಯುಕ್ತ ಸೀಮಂತಕುಮಾರ್ ಸಿಂಗ್ ಮುಂತಾದವರು ಹಾಜರಿದ್ದರು.