Sunday, June 10, 2012

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ: ಶೇ. 53.31 ಮತ್ತು 57.47%

ಮಂಗಳೂರು, ಜೂನ್.10:ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನೈರುತ್ಯ ಪದವೀಧರ ಕ್ಷೇತ್ರದ 20 ಮತದಾನ ಕೇಂದ್ರದಲ್ಲಿ ಶೇ 53.31 ಮತದಾನವಾಗಿದ್ದು, ಶಿಕ್ಷಕರ ಕ್ಷೇತ್ರದ 14 ಮತದಾನ ಕೇಂದ್ರದಲ್ಲಿ 57.47 ಶೇಕಡ ಮತದಾನವಾಗಿದೆ.
ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 2,529 ಪುರುಷ ಅಭ್ಯರ್ಥಿಗಳು ಮತ್ತು 2,373 ಮಹಿಳಾ ಮತದಾರರಿದ್ದು ಒಟ್ಟು 4902 ಮತದಾರರು. ಇವರಲ್ಲಿ 1,588 ಪುರುಷ ಮತದಾರರು, 1229 ಮಹಿಳಾ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿದ್ದು ಒಟ್ಟು 2817 ಜನರು ಮತದಾನ ಮಾಡಿದ್ದಾರೆ. ಶೇಕಡವಾರು ಮತದಾನ 57.47.
ಪದವೀಧರ ಕ್ಷೇತ್ರದಲ್ಲಿ ಒಟ್ಟು 11,859 ಮತದಾರರಿದ್ದು, ಪುರುಷರು 6339, ಮಹಿಳೆಯರು 5528. ಇವರಲ್ಲಿ 6322 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ ಪುರುಷರು 3,732, ಮಹಿಳೆಯರು 2590.ಶೇಕಡ 53.31 ಮತದಾನ ದಾಖಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸ್ವಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕು ಪಂಚಾಯತ್ ನ ಬೂತ್ ನಲ್ಲಿ ತಮ್ಮ ಮತ ಚಲಾಯಿಸಿದರು.