
ಬಂಟ್ವಾಳ ತಾಲೂಕು ತೋಟ ಗಾರಿಕಾ ಸಹಾಯಕ ನಿರ್ದೇಶಕರಾದ ಸಂಜೀವ ನಾಯಕ್ ಅವರು ಶಾಲೆಗೆ ಮಲ್ಲಿಗೆ ಗಿಡಗಳನ್ನು ನೀಡಿ ಪರಿಸರದ ಬಗ್ಗೆ ಮಕ್ಕಳಿಗೆ ಮಾಹಿತಿ ಯನ್ನು ನೀಡಿದರು. ಶಾಲಾ ಪ್ರಾಂಶು ಪಾಲರಾದ ಸಾಕ್ರೆಟಿಸ್, ಉಪ ಪ್ರಾಂಶು ಪಾಲರಾದ ಶ್ರೀಲತಾ, ದಿನೇಶ್ ನಾಯಕ್ ಉಪಸ್ಥಿತರಿದ್ದರು. ಬರಡು ಗುಡ್ಡೆಯಾಗಿದ್ದ 30 ಎಕರೆ ಶಾಲಾ ಪ್ರದೇಶ ಎಲ್ಲರ ಸಹಕಾರದಿಂದ ಹಸಿರಿನಿಂದ ನಳ ನಳಿಸುತ್ತಿದೆ.