ಸಭೆಯಲ್ಲಿ ಆಟೋರಿಕ್ಷಾ ಚಾಲಕ/ಮಾಲಕರು ಪೆಟ್ರೋಲ್, ಆಯಿಲ್, ಆಟೋರಿಕ್ಷಾ ಮತ್ತು ಆಟೋರಿಕ್ಷಾ ಬಿಡಿ ಭಾಗಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಹೆಚ್ಷಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ವಿಸ್ತೃತ ಚರ್ಚೆ ನಡೆದ ಬಳಿಕ ಆಟೋರಿಕ್ಷಾ ದರ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿದ್ದಾರೆ. ವೈಟಿಂಗ್ ಟೈಮ್ 15 ನಿಮಿಷ ಉಚಿತ ವಾಗಿದ್ದು, ಕನಿಷ್ಠ ದರ ನಿಗದಿ ಸಂದರ್ಭದಲ್ಲಿ ಇದಕ್ಕೆ ಅವಕಾಶ ನೀಡಲಾಗಿಲ್ಲ. 15 ರಿಂದ 45 ನಿಮಿಷ ವೈಟಿಂಗ್ ಟೈಮ್ ನಿಗದಿಪಡಿಸಿದ್ದು, ಈ ಸಂದರ್ಭದಲ್ಲಿ ಆಟೋ ದರದ ಶೇಕಡ 25 ರಷ್ಟು ಜಾಸ್ತಿ ದರವನ್ನು ಪಾವತಿಸಬೇಕು ಎಂದು ಸಭೆ ನಿರ್ಧರಿಸಿತು. ಅಕ್ಟೋಬರ್ ಮೊದಲ ವಾರದೊಳಗೆ ಆಟೋ ಮೀಟರ್ ಬದಲಿಸುವ ಕೆಲಸವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಮಯ ಮಿತಿ ಹಾಕಿದ್ದಾರೆ ಮತ್ತು ಈ ಅವಧಿಯಲ್ಲಿ ಸಾರ್ವಜನಿಕರಲ್ಲಿ ಗೊಂದಲವಾಗದಂತೆ ಆರ್ ಟಿ ಒ ಅವರು ಒದಗಿಸಿದ ದರ ನಿಗದಿಯ ಕಾರ್ಡು ಪ್ರಯಾಣಿಕರಿಗೆ ತೋರಿಸಿ ದರ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. .
ರೈಲ್ಷೇ ಸ್ಟೇಷನ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸ ಲಾಗಿದೆ.ರೈಲ್ವೇ ಸ್ಟೇಷನ್ ವ್ಯಾಪ್ತಿ ಕೆನರಾ ಚೇಂಬರ್ಸ್ ಮತ್ತು ಕೆ ಎಸ್ ಆರ್ ಟಿಸಿ ಯನ್ನು ಮಾಜಿ ಸೈನಿಕ ಸಂಘಕ್ಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿ ಕಾರಿಗಳು ತಿಳಿಸಿದರು. ಬೆಂಗಳೂರು ಮಾದರಿ ಯಲ್ಲೇ ಕಡ್ಡಾಯ ವಾಗಿ ಎಲ್ಲಾ ಆಟೋಗಳ ಮೇಲೂ ಆಟೋ ಪರ್ಮಿಟ್ ಹಾಗೂ ಚಾಲಕರ ಲೈಸನ್ಸ್ ನಿಂದ ಹಿಡಿದು ಎಲ್ಲ ಮಾಹಿತಿಯನ್ನು ಸಚಿತ್ರ ಸಹಿತ ಹಾಕಿಸಲು ಸಭೆಯಲ್ಲಿ ನಿರ್ಧರಿಸ ಲಾಯಿತು.