Saturday, August 3, 2013

ಅರಣ್ಯ ರಕ್ಷಣೆ ದೃಷ್ಟಿಕೋನ ವಿಸ್ತಾರವಾಗಲಿ: ಸಚಿವ ರಮಾನಾಥ ರೈ

ಮಂಗಳೂರು,ಅಗೋಸ್ತು.03 :- ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವ ಹೊಣೆ ಪ್ರತಿಯೊಬ್ಬರದ್ದು. ಪರಿಸರವಿಲ್ಲದೆ ಜೀವರಾಶಿ ಇಲ್ಲ ಎಂಬ ಸತ್ಯವನ್ನು ಅರಿತು ಮರಗಿಡಗಳನ್ನು ಬೆಳೆಸುವ ಹೊಣೆ ಎಲ್ಲರದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಬಿ. ರಮಾನಾಥ ರೈ ಅವರು ಹೇಳಿದರು.
ಅವ ರಿಂದು ನಗ ರದ ಪುರ ಭವ ನದಲ್ಲಿ ಆಯೋ ಜಿಸ ಲಾದ ರಾಜ್ಯ ಮಟ್ಟದ 'ಲಕ್ಷ ವೃಕ್ಷ' ಅಭಿ ಯಾನ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಪರಿ ಸರ ಸಂರ ಕ್ಷಣೆ, ಅರಣ್ಯ ನಿರ್ಮಾಣ ಕೇವಲ ಅರಣ್ಯ ಇಲಾ ಖೆಯ ಹೊಣೆ ಯಲ್ಲ; ಜನ ರಲ್ಲಿ ಈ ಬಗ್ಗೆ ಜಾಗೃತಿ ಮೂಡ ಬೇಕು. ಅರಣ್ಯ ನಿರ್ಮಾ ಣದ ದೃಷ್ಟಿ ಕೋನ ವಿಸ್ತಾರ ವಾಗ ಬೇಕು. ಇದು ಒಂದು ನಗರ, ಜಿಲ್ಲೆಗೆ ಸೀಮಿತವಾದ ವಿಷಯವಲ್ಲ. ಪರಿಸರವಿಲ್ಲದೆ ನಾವಿಲ್ಲ ಎಂದ ಸಚಿವರು, ಪಶ್ಚಿಮ ಘಟ್ಟ ಸಂರಕ್ಷಣೆಯ ಜೊತೆಗೆ ಬಯಲು ಸೀಮೆಯಲ್ಲಿ ಕೂಡ ಗಿಡ ಬೆಳೆಸುವ ಕಾರ್ಯವಾಗಬೇಕು. ಇದಕ್ಕೆ  ತಿರುಪತಿಯ ಗುಡ್ಡ ಮಾದರಿ ಎಂದರು. ಇಂದಿನ ಕಾರ್ಯಕ್ರಮ ನಿರಂತರ ಪ್ರಕೃತಿ ಸಂರಕ್ಷಣೆಗೆ ಪ್ರೇರಪಣೆಯಾಗಲಿ, ಪೂರಕವಾಗಲಿ ಎಂದು ಸಚಿವರು ಹೇಳಿದರು.
ವಿರೋಧಪಕ್ಷದ ನಾಯಕ, ಕರ್ನಾಟಕ ವಿಧಾನಪರಿಷತ್ ಹಾಗೂ ಮಾಜಿ ಮುಖ್ಯಮಂತ್ರಿ  ಡಿ ವಿ ಸದಾನಂದಗೌಡ ಅವರು ಪಾಕೃತಿಕ ಅಸಮತೋಲನದಿಂದಾಗುವ ಅನಾಹುತಗಳು ಹಾಗೂ ಕಾಡಿನ ಸಂರಕ್ಷಣೆಯ ಕುರಿತು ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕರು,ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ  ಜೆ ಆರ್ ಲೋಬೋ ಅವರು, ಇರುವ ಪರಿಸರ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿ ಕಾಮಗಾರಿಗಳ ವೇಳೆ ಪರಿಸರ ನಾಶ ಕಡಿಮೆ ಮಾಡುವ ಚಿಂತನೆಯಾಗಬೇಕೆಂದರು. ವಿಧಾನಪರಿಷತ್ ಶಾಸಕ ಮೋನಪ್ಪ ಭಂಡಾರಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ)  ಬಿ ಶಿವನಗೌಡ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಪ್ರಕಾಶ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಎಂ.ಡಿ, ನಾಗರಾಜ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ, ನವಮಂಗಳೂರು ಬಂದರು ಮಂಡಳಿಯ ಉಪಾಧ್ಯಕ್ಷರಾದ  ಟಿ ಎಸ್, ಎನ್ ಮೂರ್ತಿ, ಜಿಲ್ಲಾಧಿಕಾರಿ ಎನ್ ಪ್ರಕಾಶ್, ಉಪಅರಣ್ಯ ಸಂರಕ್ಷಣಾಧಿಕಾರಿ ಓ ಪಾಲಯ್ಯ, ಉಪಸ್ಥಿತರಿದ್ದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ ಸ್ವಾಗತಿಸಿದರು. ಪರಿಸರ ಅಧಿಕಾರಿ  ಎನ್ ಲಕ್ಷ್ಮಣ್ ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸುಮಾರು 1,500 ಮಕ್ಕಳು ಪುರಭವನದಿಂದ ಸ್ಟೇಟ್ ಬ್ಯಾಂಕ್ ಮುಖಾಂತರ ಮೆರವಣಿಗೆ ಮೂಲಕ ಪರಿಸರ ಸ್ನೇಹಿ ಸಂದೇಶಗಳೊಂದಿಗೆ ಜಾಥಾ ನಡೆಸಿದರು. ಬಳಿಕ  ಗೋವಿಂದದಾಸ್ ಕಾಲೇಜು ಮಕ್ಕಳಿಂದ ಅರಣ್ಯದ ಬಗ್ಗೆ ಕಿರು ನಾಟಕ ಆಯೋಜಿಸಲಾಗಿತ್ತು. ಅರಣ್ಯ ಮಿತ್ರ ಪ್ರಶಸ್ತಿ ವಿತರಣೆಯೂ ನಡೆಯಿತು. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಉದ್ಘಾಟಕರು ಪುರಭವನದಲ್ಲಿ ಸಸಿಗಳನ್ನು ನೆಟ್ಟರು. ಲಕ್ಷ ವೃಕ್ಷ ಕಾರ್ಯಕ್ರಮದ ಸಂದೇಶ 'ವೃಕ್ಷಗಳ ಮೇಲೆ ಲಕ್ಷ್ಯವಿಡಿ' ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು.
ಅರಣ್ಯ ಇಲಾಖೆ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭ-: ಅರಣ್ಯ ಇಲಾಖೆಯಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಈಗಾಗಲೇ ಸರಕಾರದಿಂದ ಅನುಮೋದನೆ ದೊರಕಿದ್ದು, ಪ್ರಕ್ರಿಯೆ ಆರಂಭಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ನಗರದ ಅಳಪೆ ಪಡೀಲ್ ಬಳಿ ಅಂದಾಜು 79 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತ ಕಚೇರಿಯ ಉದ್ಘಾಟನೆ ನೆರವೇರಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಈ ಸಂದರ್ಭ ಅವರು ಕಚೇರಿಯ ಆವರಣದಲ್ಲಿ ಗಿಡವೊಂದನ್ನು ನೆಟ್ಟರು.    
ಈ ಸಂದರ್ಭ ಶಾಸಕ ಜೆ.ಆರ್. ಲೋಬೋ, ಮಾಜಿ ಮೇಯರ್ ಶಶಿಧರ ಹೆಗ್ಡೆ,  ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಶಿವನಗೌಡ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಓ. ಪಾಲಯ್ಯ ಮೊದಲಾದವರು ಉಪಸ್ಥಿತರಿದ್ದರು.