Wednesday, August 7, 2013

ಶೀಘ್ರದಲ್ಲಿ 8,500 ಪೋಲೀಸರ ನೇಮಕ-ಎಂ.ಎನ್.ರೆಡ್ಡಿ

ಮಂಗಳೂರು, ಆಗಸ್ಟ್.07:-ಕರ್ನಾಟಕ ರಾಜ್ಯದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ತನ್ನ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದು,ಅದರಂತೆ 8,500 ಪೋಲೀಸರನ್ನು ನೇಮಕ ಮಾಡುವ  ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ  ಎಂ.ಎನ್.ರೆಡ್ಡಿ ಅವರು ತಿಳಿಸಿದ್ದಾರೆ.
ಅವರು ಇಂದು ನಗ ರದ ಪೋಲೀಸ್ ಆಯು ಕ್ತರ ಕಚೇ ರಿಯಲ್ಲಿ ಮಾಧ್ಯ ಮದ ವರೊಂ ದಿಗೆ ಮಾತ ನಾಡುತ್ತಾ ಈ ವಿಷಯ ತಿಳಿ ಸಿದರು.
ರಾಜ್ಯದಲ್ಲಿ ಒಟ್ಟು 18000 ಪೋಲೀಸ್ ಕಾನ್ಸ್ ಟೇಬಲ್ ಗಳ ಹುದ್ದೆ ಖಾಲಿ ಇದೆ.ಇರುವ ಸಿಬ್ಬಂದಿಯಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗುತ್ತಿದೆ. ತಾವು ಹೆಚ್ಚುವರಿ ಪೋಲೀಸ್ ಮಹಾ ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಿದ್ದು,ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ತೆರಳಿ ಅಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲಿಸುತ್ತಿರುವುದಾಗಿ ತಿಳಿಸಿದರು.
ಜನರು ಎಂತಹ ಸಂದರ್ಭ ಬಂದರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದೆ ಪೋಲೀಸರಿಗೆ ಮಾಹಿತಿ ನೀಡಿದಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡಲು, ಸಾರ್ವಜನಿಕ ಪ್ರಾಣ,ಮಾನ,ಆಸ್ತಿಪಾಸ್ತಿಗಳ ರಕ್ಷಣೆ ಸುಲಭವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ವಲಯ ಡಿಐಜಿ ಪ್ರತಾಪ್ ರೆಡ್ಡಿ, ಮಂಗಳೂರು ನಗರ ಪೋಲೀಸ್ ಆಯುಕ್ತ ಮನೀಶ್ ಕರ್ಬಿಕರ್ ಉಪಸ್ಥಿತರಿದ್ದರು.